ಪಾರ್ಟ್ ಟೈಂ ಕ್ಲಾಸ್​ಗೆ ಫುಲ್ ಫೀಸ್ ಯಾಕೆ?

| Updated By:

Updated on: Jul 08, 2020 | 1:59 PM

[lazy-load-videos-and-sticky-control id=”w-gZW3gk068″] ಬೆಂಗಳೂರು: ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಆನ್​ಲೈನ್ ಶಿಕ್ಷಣ ಒಂದ್ ರೀತಿ ಕಾಲ್ಚೆಂಡಿನ ಆಟ ಆದಂತೆ ಕಾಣ್ತಿದೆ. ಒಮ್ಮೆ ಆನ್​ಲೈನ್ ಶಿಕ್ಷಣ ಕೊಡ್ತೀನಿ ಅಂತು, ಪೋಷಕರು ವಿರೋಧ ಮಾಡ್ತಿದ್ದಂತೆ ಮಾಡಲ್ಲ ಅಂತು. ಮತ್ತೆ ನಿಯಮ ಬದಲಿಸಿತು. ಹೀಗೆ ಆ ಕಡೆ ಈ ಕಡೆ ಅಂತಿದ್ದ ಸರ್ಕಾರ ಮತ್ತೀಗ ಆನ್​ಲೈನ್ ಶಿಕ್ಷಣ ನೀಡಲು ತುದಿಗಾಲ ಮೇಲೆ ನಿಂತಿದೆ. ತಜ್ಞರ ಸಮಿತಿಯೂ ಗ್ರೀನ್ ಸಿಗ್ನಲ್ ನೀಡಿರೋದು ಸರ್ಕಾರದ ಹಾದಿ ಸುಗಮವಾಗಿಸಿದೆ. ಆನ್​ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ಬಹುತೇಕ […]

ಪಾರ್ಟ್ ಟೈಂ ಕ್ಲಾಸ್​ಗೆ ಫುಲ್ ಫೀಸ್ ಯಾಕೆ?
Follow us on

[lazy-load-videos-and-sticky-control id=”w-gZW3gk068″] ಬೆಂಗಳೂರು: ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಆನ್​ಲೈನ್ ಶಿಕ್ಷಣ ಒಂದ್ ರೀತಿ ಕಾಲ್ಚೆಂಡಿನ ಆಟ ಆದಂತೆ ಕಾಣ್ತಿದೆ. ಒಮ್ಮೆ ಆನ್​ಲೈನ್ ಶಿಕ್ಷಣ ಕೊಡ್ತೀನಿ ಅಂತು, ಪೋಷಕರು ವಿರೋಧ ಮಾಡ್ತಿದ್ದಂತೆ ಮಾಡಲ್ಲ ಅಂತು. ಮತ್ತೆ ನಿಯಮ ಬದಲಿಸಿತು. ಹೀಗೆ ಆ ಕಡೆ ಈ ಕಡೆ ಅಂತಿದ್ದ ಸರ್ಕಾರ ಮತ್ತೀಗ ಆನ್​ಲೈನ್ ಶಿಕ್ಷಣ ನೀಡಲು ತುದಿಗಾಲ ಮೇಲೆ ನಿಂತಿದೆ. ತಜ್ಞರ ಸಮಿತಿಯೂ ಗ್ರೀನ್ ಸಿಗ್ನಲ್ ನೀಡಿರೋದು ಸರ್ಕಾರದ ಹಾದಿ ಸುಗಮವಾಗಿಸಿದೆ.

ಆನ್​ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ಬಹುತೇಕ ಒಲವು ಹೊಂದಿದೆ. ಇದೇ ಕಾರಣಕ್ಕೆ ಸರ್ಕಾರ ಶಿಕ್ಷಣ ತಜ್ಞರ ಸಮಿತಿಯನ್ನ ರಚನೆ ಮಾಡಿತ್ತು. ಶಿಕ್ಷಣ ತಜ್ಞರ ಸಮಿತಿಯು ಈಗ ಆನ್​ಲೈನ್ ಶಿಕ್ಷಣಕ್ಕೆ ಓಕೆ ಅಂದಿದೆ. ಹೀಗಾಗಿ ಸರ್ಕಾರ ಕೂಡಾ ಸಮ್ಮತಿ ನೀಡೋ ಬಗ್ಗೆ ಚಿಂತನೆ ನಡೆಸ್ತಿದೆ. ಸ್ವತಃ ಸಚಿವರೇ ವರದಿ ಅಧ್ಯಯನ ಮಾಡಿ ನಿರ್ಧಾರ ತೆಗೆದುಕೊಳ್ತೀವಿ ಅಂದಿದ್ದಾರೆ. ಮೊದಲು ಆನ್​ಲೈನ್ ಶಿಕ್ಷಣ ಪರ್ಯಾಯ ಅಲ್ಲ ಎಂದಿದ್ದ ಸರ್ಕಾರ. ಈಗ ಆನ್​ಲೈನ್ ಶಿಕ್ಷಣಕ್ಕೆ ಅಸ್ತು ಅನ್ನೋ ಧಾವಂತದಲ್ಲಿದೆ.

ಹಳ್ಳಿಗಳಲ್ಲಿ ಶಾಲೆ ಆರಂಭವಾಗುತ್ತಾ?
ಗ್ರಾಮೀಣ ಭಾಗದಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಶಾಲೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. 20 ಮಕ್ಕಳಿಗಿಂತ ಕಡಿಮೆ ಇದ್ರೆ ಶಾಲೆ ಆರಂಭಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದ್ರೆ ಹಳ್ಳಿಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಶಾಲೆ ನಡೆಸೋದು ಸಾಧ್ಯವೇ ಇಲ್ಲ.

ಗ್ರಾಮೀಣ ಭಾಗದಲ್ಲಿ ಕೆಲವೆಡೆ ಒಂದೇ ಕೊಠಡಿಯ ಶಾಲೆಗಳಿವೆ. ಮೂರ್ನಾಲ್ಕು ತರಗತಿಯ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತುಕೊಳ್ತಾರೆ. ಒಂದೇ ಕೊಠಡಿಯಲ್ಲಿ ಮೂರ್ನಾಲ್ಕು ತರಗತಿಯ ಮಕ್ಕಳಿಗೆ ಪಾಠ ಮಾಡಲಾಗ್ತಿದೆ. ಇಂಥ ಒಂದೇ ಕೊಠಡಿಯ ಶಾಲೆಯಲ್ಲಿ ದೈಹಿಕ ಅಂತರ ಕಾಪಾಡೋದು ಸಾಧ್ಯವೇ?ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೇ ಇದು ಸಾಧ್ಯವಾಗಿಲ್ಲ. ಅಂಥದ್ರದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಇದು ಅಸಾಧ್ಯನಾ? ಎಂಬ ಪ್ರಶ್ನೆ ಇದೆ.

ದುಪ್ಪಟ್ಟು ಫೀಸ್ ವಸೂಲಿ?
ಆನ್​ಲೈನ್ ಕ್ಲಾಸ್ ಬಗ್ಗೆ ಗೊಂದಲ ಇದ್ದಾಗಲೆ ಶಾಲೆಗಳು ಫೀಸ್ ವಸೂಲಿಗೆ ಇಳಿದಿದ್ವು. ಪೋಷಕರಿಗೆ ಫೀಸ್ ಕಟ್ಟಿ ಅಂತಾ ಮೆಸೇಜ್ ಮತ್ತು ನೋಟಿಸ್ ಕೊಟ್ಟಿದ್ವು. ಸಾವಿರಾರು ರೂಪಾಯಿ ಫೀಸ್ ವಸೂಲಿ ಕೂಡಾ ಮಾಡಲಾಗಿತ್ತು. ಈಗ ಶಿಕ್ಷಣ ತಜ್ಞರೇ ಆನ್​ಲೈನ್ ಕ್ಲಾಸ್​ಗೆ ಓಕೆ ಅಂದಿರೋದು ಪ್ಲಸ್ ಪಾಯಿಂಟ್ ಆಗಿದೆ. ಖಾಸಗಿ ಶಾಲೆಗಳಿಗೆ ಫೀಸ್ ವಸೂಲಿ ಮಾಡಲು ದಾರಿ ಸಿಕ್ಕಂತಾಗಿದೆ. ಸರ್ಕಾರವೂ ಓಕೆ ಅಂದ್ರೆ ಖಾಸಗಿ ಶಾಲೆಗಳಿಗೆ ಫೀಸ್ ವಸೂಲಿಗೆ ಅಸ್ತ್ರ ಕೊಟ್ಟಂತಾಗುತ್ತೆ. ಮಕ್ಕಳು ಶಾಲೆಗೆ ಹೋಗದೆ ಇದ್ರೂ ದುಬಾರಿ ಫೀಸ್ ಕಟ್ಟಬೇಕಾಗುತ್ತೆ. ಆನ್​ಲೈನ್ ಕ್ಲಾಸ್​ಗೆ ಹೆಚ್ಚು ಹಣ ಖರ್ಚಾಗುತ್ತೆ ಅನ್ನೋ ಸಬೂಬು ಹೇಳಿ ಫೀಸ್ ವಸೂಲಿ ಮಾಡ್ತಾರೆ.

ಫೀಸ್ ವಿಚಾರದಲ್ಲಿ ಸರ್ಕಾರ ಖಾಸಗಿ ಶಾಲೆಗಳಿಗೆ ಅಂಕುಶ ಹಾಕಲೇಬೇಕು. ಆನ್​ಲೈನ್ ಕ್ಲಾಸ್​ಗೆ ಇಂತಿಷ್ಟೇ ಫೀಸ್ ನಿಗದಿ ಮಾಡಬೇಕು. ಈ ಹಿಂದೆ ಸರ್ಕಾರ ಹೆಚ್ಚುವರಿ ಫೀಸ್ ಪಡೆಯೋ ಹಾಗಿಲ್ಲ ಅಂತಾ ಮಾತ್ರ ಹೇಳಿದೆ. ಹೀಗಾಗಿ ಕಳೆದ ವರ್ಷದ ಫೀಸ್ ಕಟ್ಟಿ ಅಂತ ಖಾಸಗಿ ಶಾಲೆಗಳು ಒತ್ತಡ ಹಾಕಿವೆ. ಸರ್ಕಾರ ತಿಂಗಳಿಗೆ ಇಂತಿಷ್ಟು ಅಂತಾ ಫೀಸ್ ನಿಗದಿ ಮಾಡಲೇಬೇಕು. ಮಕ್ಕಳು ಶಾಲೆಗೆ ಹೋಗದೆ ಇರೋದ್ರಿಂದ ಶಾಲೆಗಳಿಗೂ ಖರ್ಚು ಕಡಿಮೆ ಇದೆ. ಹೀಗಾಗಿ ಆನ್​ಲೈನ್ ಶಿಕ್ಷಣಕ್ಕೆ ಕಡಿಮೆ ಫೀಸ್ ನಿಗದಿ ಮಾಡಬೇಕು. ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲರೂ ಹೊಂದಿಕೊಂಡು ಹೋಗುತ್ತಿರೋವಾಗ ಖಾಸಗಿ ಶಾಲೆಗಳು ಕೂಡಾ ಇದೇ ದಾರಿ ಹಿಡಿಯಬೇಕು.

Published On - 9:32 am, Wed, 8 July 20