ರಾಜ್ಯಪಾಲ ಗೆಹ್ಲೋಟ್ ಅವರಿಂದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ​ ಸನ್ಮಾನ

| Updated By: Rakesh Nayak Manchi

Updated on: Jan 28, 2024 | 10:52 PM

ಶೆಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ ಬಾಲರಾಮನ (ರಾಮಲಲ್ಲಾ) ವಿಗ್ರಹವನ್ನು ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಸುಂದರ ವಿಗ್ರಹವು ಇಡೀ ದೇಶದ ಜನರ ಮನಸೂರೆಗೊಳಿಸಿದೆ. ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ, ಮೈಸೂರು ಅರಮನೆಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರುಣ್ ಯೋಗಿರಾಜ್​ ಅವರನ್ನು ಸನ್ಮಾನಿಸಿದ್ದರು. ಇದೀಗ ಕರ್ನಾಟಕದ ರಾಜ್ಯಪಾಲರು ಕೂಡ ಸನ್ಮಾನಿಸಿದ್ದಾರೆ

ರಾಜ್ಯಪಾಲ ಗೆಹ್ಲೋಟ್ ಅವರಿಂದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ​ ಸನ್ಮಾನ
ರಾಜಭವನದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು​ ಸನ್ಮಾನಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Follow us on

ಬೆಂಗಳೂರು, ಜ.28: ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿದ ಬಾಲರಾಮನ (ರಾಮಲಲ್ಲಾ) ವಿಗ್ರಹವನ್ನು ಕೆತ್ತನೆ ಮಾಡಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಸನ್ಮಾನಿಸಿದರು. ಇಂದು ಅರುಣ್ ಅವರು ತಮ್ಮ ಪತ್ನಿ ವಿಜೇತ, ಮಗಳು ಸಾನ್ವಿ ಮತ್ತು ಮಗ ವೇದಾಂತ್ ಜೊತೆ ರಾಜಭವನಕ್ಕೆ ಭೇಟಿ ನೀಡಿ ಸನ್ಮಾನವನ್ನು ಸ್ವೀಕರಿಸಿದರು.

ಈ ವೇಳೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ನಂತರ ಅರುಣ್ ಅವರು ರಾಜ್ಯಪಾಲರು ಹಾಗೂ ಮಾಜಿ ರಾಷ್ಟ್ರಪತಿಯವರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಅರುಣ್ ಅವರು ಬಾಲರಾಮನ ವಿಗ್ರಹದ ಬಗ್ಗೆ ವಿವರಣೆಯನ್ನು ನೀಡಿದರು.

ಇದನ್ನೂ ಓದಿ: ರಾಮನ ವಿಗ್ರಹ ಅರ್ಪಿಸಿ ಅಯೋಧ್ಯೆಯಿಂದ ಬೆಂಗಳೂರಿಗೆ ಬಂದ ಅರುಣ್ ಯೋಗಿರಾಜ್​ಗೆ ಭವ್ಯ ಸ್ವಾಗತ

ಅಯೋಧ್ಯೆ ರಾಮ ಮಂದಿರಕ್ಕೆ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ ರಾಮನ ವಿಗ್ರಹವು ಎಲ್ಲನ ಮನಸ್ಸನ್ನು ಗೆದ್ದಿದ್ದು, ಹೋದಲ್ಲಿ ಬಂದಲ್ಲಿ ಅರುಣ್ ಅವರಿಗೆ ಜನರು ಗೌರವ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ, ಮೈಸೂರು ಅರಮನೆಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರುಣ್ ಯೋಗಿರಾಜ್​ ಅವರನ್ನು ಸನ್ಮಾನಿಸಿದ್ದರು. ಸಂಸದ ಪ್ರತಾಪ್ ಸಿಂಹ ಅವರು ಅರುಣ್ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ