ಕನ್ನಡ ರಾಜ್ಯೋತ್ಸವದಂದು ನಮ್ಮ ಸೊಗಡಿನ ಮೂಲಕ ಸಂದೇಶ ಕಳುಹಿಸಿ, ಶುಭ ಕೋರಿ!

| Updated By: ಆಯೇಷಾ ಬಾನು

Updated on: Nov 01, 2023 | 8:29 AM

ಕರ್ನಾಟಕ ಏಕೀಕರಣಕ್ಕೆ ಹೋರಾಡಿದ, ಕನ್ನಡದ ಉಳಿವಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಬೆಳವಣಿಗೆಗಾಗಿ ಶ್ರಮಿಸಿದ ಹಲವು ಹಿರಿಜೀವಗಳನ್ನು ಪ್ರತಿ ದಿನವೂ ನೆನೆಸಿಕೊಳ್ಳಬೇಕು. ‘ನವೆಂಬರ್‌ ಕನ್ನಡಿಗರು’ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಆಗಬಾರದು ಎಂದರೆ ಇಂದಿನಿಂದಲೇ ನಮ್ಮ ಮಕ್ಕಳಿಗೆ ಕನ್ನಡದ ಕಂಪಿನ ಬಗೆಗೆ ಅರಿವು ಮೂಡಿಸಬೇಕಾಗಿದೆ.

ಕನ್ನಡ ರಾಜ್ಯೋತ್ಸವದಂದು ನಮ್ಮ ಸೊಗಡಿನ ಮೂಲಕ ಸಂದೇಶ ಕಳುಹಿಸಿ, ಶುಭ ಕೋರಿ!
ಕನ್ನಡ ರಾಜ್ಯೋತ್ಸವ
Follow us on

ಕನ್ನಡ ನಮ್ಮ ಅಮ್ಮ, ಆಕೆ ನಮ್ಮ ಉಸಿರು, ಈ ಮಾತು ಕೇವಲ ಒಂದು ದಿನದ ಮಾತಾಗಬಾರದು. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ, ಕನ್ನಡದ ಉಳಿವಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಬೆಳವಣಿಗೆಗಾಗಿ ಶ್ರಮಿಸಿದ ಹಲವು ಹಿರಿಜೀವಗಳನ್ನು ಪ್ರತಿ ದಿನವೂ ನೆನೆಸಿಕೊಳ್ಳಬೇಕು. ‘ನವೆಂಬರ್‌ ಕನ್ನಡಿಗರು’ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಆಗಬಾರದು ಎಂದರೆ ಇಂದಿನಿಂದಲೇ ನಮ್ಮ ಮಕ್ಕಳಿಗೆ ಕನ್ನಡದ ಕಂಪಿನ ಬಗೆಗೆ ಅರಿವು ಮೂಡಿಸಬೇಕಾಗಿದೆ. ನಮ್ಮ ಪೂರ್ವಜರು ಮತ್ತು ಕವಿಗಣ್ಯರು ಹೇಳಿದ ನಾಣ್ನುಡಿಗಳನ್ನು ಬಳಸುವ ಮೂಲಕವೇ ಸಂದೇಶ ಕಳುಹಿಸುವುದರಿಂದ ನಮ್ಮ ಕನ್ನಡದ ಕಂಪು ಮನೆ ಮನೆಗೂ ಎಲ್ಲರ ಮನಸ್ಸಿಗೂ ತಲುಪುವಂತಾಗುತ್ತದೆ. ಹಾಗಾದರೆ ಇನ್ನೇಕೆ ತಡ ಈ ಕೆಳಗಿನ ನುಡಿಮುತ್ತು ಮತ್ತು ಕೆಲವು ಅರ್ಥ ಗರ್ಭಿತ ಮಾತುಗಳನ್ನು ಕನ್ನಡ ಪ್ರೇಮಿಗಳಿಗೆ ಕಳುಹಿಸಿ.

  • ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು -ಹುಯಿಲಗೋಳ ನಾರಾಯಣ ರಾವ್.
  • ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ,ಹೊತ್ತಿತೋ ಹೊತ್ತಿತು ಕನ್ನಡದ ದೀಪ ಹೊತ್ತಿತೋ.. ಹೊತ್ತಿತು.. ಕನ್ನಡದ ದೀಪ -ಮಾಸ್ತಿ ವೆಂಕಟೇಶ ಅಯ್ಯಂಗಾರ್‌
  • ಮಾತೃಭಾಷೆ ಮಕ್ಕಳಿಗೆ ನೀಡುವ ಪ್ರತಿಭಾ ವಿಲಾಸವನ್ನು ನಾವು ಅರಿತುಕೊಂಡಿಲ್ಲ. ನಮ್ಮ ಶಿಕ್ಷಣದಲ್ಲಿ ಪರೀಕ್ಷೆಗೆ ಸಿಗುವ ಪ್ರಾಮುಖ್ಯತೆ ಕಲಿಕೆಗೆ ಸಿಗುತ್ತಿಲ್ಲ – ಚಂದ್ರಶೇಖರ ಕಂಬಾರ
  • ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೇ – ಎಂ ಗೋವಿಂದ ಪೈ
  • ಕನ್ನಡ ಉಳಿಸಿ, ಕನ್ನಡ ಬೆಳಸಿ, ಕನ್ನಡವನ್ನೇ ಬಳಸಿ – ಪು.ತಿ.ನರಸಿಂಹಾಚಾರ್
  • ಸಿರಿಗನ್ನಡಂ ಗೆಲ್ಗೆ, ಹಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ
  • ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು
  • ಕನ್ನಡವೆ ಧನ ಧಾನ್ಯ ಕನ್ನಡವೆ ಮನೆ ಮಾನ್ಯ ಕನ್ನಡವೆಯೆನಗಾಯ್ತು ಕಣ್ಣು ಕಿವಿ ಬಾಯಿ – ಬೆನಗಲ್ ರಾಮರಾವ್
  • ನಾವು ಇತರರ ಭಾಷೆ ಕಲಿಯುವ ಆಸಕ್ತಿಯನ್ನು, ಕನ್ನಡವನ್ನು ಇತರರಿಗೆ ಕಲಿಸುವಲ್ಲಿಯೂ ತೋರೋಣ, ಜೈ ಕನ್ನಡಾಂಬೆ
  • ಎಲ್ಲಾದರು ಇರು, ಎಂತಾದರು ಇರು
    ಎಂದೆಂದಿಗು ನೀ ಕನ್ನಡವಾಗಿರು
    ಕನ್ನಡ ಗೋವಿನ ಓ ಮುದ್ದಿನ ಕರು,
    ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
    ಇದನ್ನು ವಾಟ್ಸಪ್, ಫೇಸ್‌ಬುಕ್ ಸಂದೇಶಗಳ ಮಾದರಿಯಲ್ಲಿ ನಿಮ್ಮ ಸ್ನೇಹಿತರು, ಬಂಧುಬಾಂಧವರ ಜೊತೆ ಹಂಚಿಕೊಳ್ಳಬಹುದು.
    

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ