AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ ಪತ್ರ.. ಜಡ್ಜ್​ಗಳ ವಿರುದ್ಧದ‌ ಆರೋಪ ಸಮರ್ಥಿಸಿಕೊಂಡ 72ರ ಹರೆಯದ ವೃದ್ಧ

ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ ಪತ್ರ ಬರೆದಿದ್ದ 72ರ ವೃದ್ಧನ ವಿರುದ್ಧದ ನ್ಯಾಯಾಂಗ ನಿಂದನೆ ಕೇಸ್​ನ ವಿಚಾರಣೆ ಇಂದು ನಡೆಯಿತು. ಶ್ರೀನಿವಾಸ ರಾವ್ ಎಂಬುವವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಇಂದು ನಡೆಯಿತು.

ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ ಪತ್ರ.. ಜಡ್ಜ್​ಗಳ ವಿರುದ್ಧದ‌ ಆರೋಪ ಸಮರ್ಥಿಸಿಕೊಂಡ 72ರ ಹರೆಯದ ವೃದ್ಧ
ಕರ್ನಾಟಕ ಹೈಕೋರ್ಟ್​
KUSHAL V
|

Updated on:Mar 01, 2021 | 10:45 PM

Share

ಬೆಂಗಳೂರು: ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ ಪತ್ರ ಬರೆದಿದ್ದ 72ರ ವೃದ್ಧನ ವಿರುದ್ಧದ ನ್ಯಾಯಾಂಗ ನಿಂದನೆ ಕೇಸ್​ನ ವಿಚಾರಣೆ ಇಂದು ನಡೆಯಿತು. ಶ್ರೀನಿವಾಸ ರಾವ್ ಎಂಬುವವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಇಂದು ನಡೆಯಿತು. ಈ ನಡುವೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ವೃದ್ಧ ಜಡ್ಜ್​ಗಳ ವಿರುದ್ಧದ‌ ಆರೋಪ ಸಮರ್ಥಿಸಿಕೊಂಡರು. ಇದಕ್ಕೆ, ಸೂಕ್ತ ಕಾನೂನು ಸಲಹೆ ಪಡೆಯುವಂತೆ ಸಿಜೆ ಸೂಚನೆ ನೀಡಿದರು.

ಏನಿದು ಪ್ರಕರಣ? ಜ.29 ರಂದು ಪತ್ರ ಬರೆದಿದ್ದ ಎಸ್.ವಿ.ಶ್ರೀನಿವಾಸ ರಾವ್ 2010ರಲ್ಲೂ ಇಂಥದ್ದೇ ಆಧಾರರಹಿತ ಆರೋಪ ಮಾಡಿದ್ದರು. ಇದಲ್ಲದೆ, ಕಳೆದ ವರ್ಷವೂ ನ್ಯಾಯಮೂರ್ತಿಗಳ ಮೇಲೆ ಆರೋಪ ಮಾಡಿದ್ದರು. ಇಬ್ಬರು ವಕೀಲರನ್ನು ಕೊಲ್ಲುವುದಾಗಿ ಪತ್ರದಲ್ಲಿ ಉಲ್ಲೇಖ ಸಹ ಮಾಡಿದ್ದರು. ಇದೀಗ, ವಕೀಲರು, ನ್ಯಾಯಾಧೀಶರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದ S.V.ಶ್ರೀನಿವಾಸ ರಾವ್ ಅವರ ವಿಚಾರಣೆಯನ್ನು ಮಾರ್ಚ್​ 26ಕ್ಕೆ ಮುಂದೂಡಲಾಗಿದೆ.

ಮುರುಘಾಮಠದ ಮಾಜಿ CEO ದೊರೆಸ್ವಾಮಿಗೆ ಬಂಧನ ಭೀತಿ ಇತ್ತ, ಮುರುಘಾಮಠದ ಮಾಜಿ CEOಗೆ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ CEO ದೊರೆಸ್ವಾಮಿಗೆ ಬಂಧನ ಭೀತಿ ಎದುರಾಗಿದೆ. ಪರಿಚಿತ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಎಂ.ಜಿ.ದೊರೆಸ್ವಾಮಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ. SJM ವಿದ್ಯಾಪೀಠದ ಮಾಜಿ CEO ಎಂ.ಜಿ.ದೊರೆಸ್ವಾಮಿ ಸಂತ್ರಸ್ತೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ್ದರು.

CCBಗೆ ತನಿಖೆ, ಚಾರ್ಜ್​ಶೀಟ್ ಸಲ್ಲಿಸುವ ಅಧಿಕಾರ ನೀಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಇತ್ತ, ಸಿಸಿಬಿಗೆ ತನಿಖೆ, ಚಾರ್ಜ್​ಶೀಟ್ ಸಲ್ಲಿಸುವ ಅಧಿಕಾರ ನೀಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ಆದೇಶದಿಂದಾಗಿ ಸಿಸಿಬಿಗೆ ಅಧಿಕಾರವಿರಲಿಲ್ಲ. ಠಾಣಾ ಮಾನ್ಯತೆ ಇಲ್ಲವೆಂದು ಹೈಕೋರ್ಟ್ ತೀರ್ಪು ನೀಡಿತ್ತು. ಹಾಗಾಗಿ, ಸುಪ್ರೀಂಕೋರ್ಟ್​ಗೆ ಪೊಲೀಸ್ ಇಲಾಖೆ ಮೇಲ್ಮನವಿ ಸಲ್ಲಿಸಿತ್ತು.

ಈ ನಡುವೆ, ಕರ್ನಾಟಕ ಪೊಲೀಸ್ ಕಾಯ್ದೆ 4.5.6.11.12ರ ಅಡಿ ಅಧಿಕಾರ ನೀಡಲಾಗಿದೆ. ಬೆಂಗಳೂರು ಕಮಿಷನರೇಟ್​ ವ್ಯಾಪ್ತಿಯ ಕೇಸ್​ನ ತನಿಖೆಯನ್ನು ಸಿಸಿಬಿ ನಡೆಸಿ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಬಹುದು. ಯಾವುದೇ ಪ್ರಕರಣದ ತನಿಖೆಯನ್ನು ಇನ್ಸ್‌ಪೆಕ್ಟರ್ ಹಾಗೂ ಮೇಲ್ದರ್ಜೆ ಅಧಿಕಾರಿ ನಡೆಸಬಹುದೆಂದು ಸರ್ಕಾರ ಆದೇಶ ನೀಡಿದೆ.

ಅತ್ತ, ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ನಿವೇಶನ ಕ್ರಯಪತ್ರ ನೀಡಿದ್ದ ಕೆಹೆಚ್‌ಬಿ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಇಂದು ನಡೆಯಿತು. ನಿವೇಶನ ಮಂಜೂರಾಗಿ 16 ವರ್ಷವಾದ್ರೂ ಕಟ್ಟಡ ನಿರ್ಮಿಸಿರಲಿಲ್ಲ. ಕಟ್ಟಡ ನಿರ್ಮಿಸದಿದ್ದರೂ ಕ್ರಯಪತ್ರ ನೀಡಿರುವ ಆರೋಪದಡಿ PIL ಸಲ್ಲಿಸಲಾಗಿತ್ತು.

ಹಾಗಾಗಿ, ಕ್ರಯಪತ್ರಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ನಿಯಮಾವಳಿ ಉಲ್ಲಂಘನೆಯಾಗಿದ್ದರೆ ಕ್ರಯಪತ್ರ ರದ್ದುಪಡಿಸುವ ಬಗ್ಗೆ ನಿಲುವು ತಿಳಿಸಲು ಕರ್ನಾಟಕ ಗೃಹ ಮಂಡಳಿಗೆ ಹೈಕೋರ್ಟ್‌ನಿಂದ ಸೂಚನೆ ಸಿಕ್ಕಿದೆ. ಆದಿ ನಾರಾಯಣಶೆಟ್ಟಿ ಎಂಬುವವರು ಪಿಐಎಲ್ ಸಲ್ಲಿಸಿದ್ರು. ಸಂಸದ ಉಮೇಶ್ ಜಾಧವ್ ಪತ್ನಿ ಗಾಯತ್ರಿ ಅಧ್ಯಕ್ಷತೆಯ ಟ್ರಸ್ಟ್‌ ಇದಾಗಿದೆ.

ನಾಳೆಯಿಂದ ಸುಪ್ರೀಂಕೋರ್ಟ್​​​ ನ್ಯಾಯಮೂರ್ತಿಗಳಿಗೆ ಲಸಿಕೆ ನಾಳೆಯಿಂದ ಸುಪ್ರೀಂಕೋರ್ಟ್​​​ ನ್ಯಾಯಮೂರ್ತಿಗಳಿಗೆ ಲಸಿಕೆ ನೀಡಲಾಗುವುದು. ಆ್ಯಪ್​ನಲ್ಲಿ ನ್ಯಾಯಮೂರ್ತಿಗಳು ನೋಂದಣಿ ಮಾಡಿಸಿರಬೇಕು. ಆದರೆ, ನ್ಯಾಯಮೂರ್ತಿಗಳಿಗೆ ವ್ಯಾಕ್ಸಿನ್​ ಆಯ್ಕೆಗೆ ಅವಕಾಶವಿರುವುದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:‘ಯಜಮಾನ’ನಿಗೆ ಅಭಿಮಾನಿಯಿಂದ ವಿಶೇಷ ಉಡುಗೊರೆ​: ಪ್ರಾಣಿಪ್ರಿಯ D ಬಾಸ್​ಗೆ​ ಟಗರು ಗಿಫ್ಟ್ ಮಾಡಿದ ಫ್ಯಾನ್​! 

Published On - 10:29 pm, Mon, 1 March 21