Shakti Yojana: ರಾಜ್ಯಾದ್ಯಂತ ನಾರಿ “ಶಕ್ತಿ” ಓಟ ಜೋರು, ಒಂದೇ ವಾರಕ್ಕೆ 100 ಕೋಟಿ ರೂ. ಟಿಕೆಟ್ ಮೊತ್ತ..!
ಶಕ್ತಿ ಯೋಜನೆಯಡಿ ಸಾರಿಗೆ ಇಲಾಖೆಯ ನಾಲ್ಕೂ ನಿಗಮದ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಮಹಿಳೆಯರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಕಳೆದ ಒಂದು ವಾರ (ಜೂ.11 ರಿಂದ ಜೂ.19) ರವರೆಗಿನ ಸಂಚರಿಸಿದ ಮಹಿಳಾ ಪ್ರಮಾಣಿಕರ ಸಂಖ್ಯೆ ಮತ್ತು ಟಿಕೆಟ್ ವೆಚ್ಚ ಇಲ್ಲಿದೆ.
ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ (Shakti Scheme) ಚಾಲನೆ ನೀಡಿ ಒಂದು ವಾರ ಕಳೆದಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ (Free Bus For Women) ಅವಕಾಶ ನೀಡಲಾಗಿದೆ. ಇನ್ನು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಮಹಿಳೆಯರು ಸಾರಿಗೆ ಇಲಾಖೆಯ ನಾಲ್ಕೂ ನಿಗಮದ ಸರ್ಕಾರಿ ಬಸ್ಗಳಲ್ಲಿ (Government Bus) ಉಚಿತವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಪ್ರಸಿದ್ಧ ದೇವಸ್ಥಾನಗಳು ಫುಲ್ ಆಗಿವೆ. ಹೀಗೆ ಶಕ್ತಿ ಯೋಜನೆಯಡಿ ಕಳೆದ ಒಂದು ವಾರ (ಜೂ.11 ರಿಂದ ಜೂ.19) ರವರೆಗಿನ ಮಹಿಳಾ ಪ್ರಮಾಣಿಕರ ಟಿಕೆಟ್ ವೆಚ್ಚ 100 ಕೋಟಿ ರೂ. ದಾಡಿದೆ. ಇನ್ನು ಶಕ್ತಿ ಯೋಜನೆಯಡಿ 4 ಕೋಟಿಗೂ ಹೆಚ್ಚು ಮಹಿಳೆಯರ ಉಚಿತವಾಗಿ ಪ್ರಯಾಣಿಸಿದ್ದಾರೆ.
ಜೂ. 19 ರಂದು ನಾಲ್ಕು ನಿಗಮದಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ, ಟಿಕೆಟ್ ಮೌಲ್ಯ
KSRTC
ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 18,48,216
ಒಟ್ಟು ಮಹಿಳಾ ಪ್ರಯಾಣದ ಟಿಕೆಟ್ ಮೌಲ್ಯ- 6,32,40,861.00
BMTC
ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 18,41,718
ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ- 2,43,87,694.00
NWKRTC
ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 15,19,796
ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ-40,05,33,458.00
KKRTC
ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ- 8,80,180
ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ- 3,12,70,724.00
ನಾಲ್ಕೂ ನಿಗಮ
ಇನ್ನು ಜೂನ್ 11 ರಿಂದ ಜೂನ್ 19 ರವರೆಗೆ ನಾಲ್ಕು ನಿಗಮದ ಬಸ್ ಗಳಲ್ಲಿ ಓಡಾಟ ನಡೆಸಿದವರ ಸಂಖ್ಯೆ ನಾಲ್ಕು ನಿಗಮದ ಬಸ್ ಗಳಲ್ಲಿ ಒಟ್ಟು 4,24,60,089 ಕೋಟಿ. ಒಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ- 100,23,08,338 ಕೋಟಿ ರೂ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ