Shakti scheme: ಶಕ್ತಿ ಯೋಜನೆಗೆ ಒಂದು ತಿಂಗಳು; ಅತಿಹೆಚ್ಚು ಮಹಿಳೆಯರನ್ನು ಕರೆದೊಯ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಿವಿಧ ನಿಗಮಗಳ ಬಸ್‌ಗಳಲ್ಲಿ, 32.89 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಸಾರಿಗೆ ಇಲಾಖೆಯ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) 9.69 ಕೋಟಿ ಪ್ರಯಾಣಿಕರನ್ನು ಕರೆದೊಯ್ದಿದ್ದು, ಅದರಲ್ಲಿ ಶೇ 52.52ರಷ್ಟು ಮಹಿಳೆಯರಾಗಿದ್ದಾರೆ.
ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ‘ಶಕ್ತಿ’ ಯೋಜನೆ (Shakti scheme) ಮಂಗಳವಾರಕ್ಕೆ ಒಂದು ತಿಂಗಳು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ 16.73 ಕೋಟಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ, ಇದು ಒಟ್ಟು ಪ್ರಯಾಣಿಕರ ಪೈಕಿ ಶೇ 50.86 ಆಗಿದೆ. ಕಾಂಗ್ರೆಸ್ ಘೋಷಿಸಿದ ಐದು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆ ಮೊದಲನೆಯದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 11 ರಂದು ಯೋಜನೆಗೆ ಚಾಲನೆ ನೀಡಿದ್ದರು.
ಯೋಜನೆ ಪ್ರಾರಂಭವಾದ ನಂತರದ ಒಂದು ತಿಂಗಳಿನಲ್ಲಿ ಜುಲೈ 4ರಂದು ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದರು. ಅಂದು ಒಟ್ಟು 1,20,04,725 ಕೋಟಿ ಜನರು ಪ್ರಯಾಣಿಸಿದ್ದರೆ, ಅದರಲ್ಲಿ 70,15,397 ಕೋಟಿ ಮಹಿಳೆಯರು ಇದ್ದರು. ಅಂದರೆ ಶೇ 58.43 ರಷ್ಟು ಮಹಿಳಾ ಪ್ರಯಾಣಿಕರಿದ್ದರು.
ವಿವಿಧ ನಿಗಮಗಳ ಬಸ್‌ಗಳಲ್ಲಿ, 32.89 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಸಾರಿಗೆ ಇಲಾಖೆಯ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) 9.69 ಕೋಟಿ ಪ್ರಯಾಣಿಕರನ್ನು ಕರೆದೊಯ್ದಿದ್ದು, ಅದರಲ್ಲಿ ಶೇ 52.52ರಷ್ಟು ಮಹಿಳೆಯರಾಗಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 11.17 ಕೋಟಿ ಪ್ರಯಾಣಿಕರನ್ನು ಸಾಗಿಸಿದ್ದು, ಅದರಲ್ಲಿ 5.38 ಕೋಟಿ, ಅಂದರೆ ಶೇ 48.16 ರಷ್ಟು ಮಹಿಳೆಯರಾಗಿದ್ದಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWRTC) ಶೇ 55.53 ರಷ್ಟು ಮಹಿಳಾ ಪ್ರಯಾಣಿಕರನ್ನು ಕರೆದೊಯ್ದಿದೆ. ಇದು ಅತ್ಯಧಿಕ ಸಂಖ್ಯೆಯ ಮಹಿಳಾ ಪ್ರಯಾಣಿಕರನ್ನು ಕರೆದೊಯ್ದೆ ಶ್ರೇಯಕ್ಕೆ ಭಾಜನವಾಗಿದೆ.
ಏತನ್ಮಧ್ಯೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕನಿಷ್ಠ, ಅಂದರೆ ಶೇ 46.75 ರಷ್ಟು ಮಹಿಳಾ ಪ್ರಯಾಣಿಕರನ್ನು ಕರೆದೊಯ್ದಿದೆ.
ಇದನ್ನೂ ಓದಿ: Viral Video: ಉಚಿತ ಬಸ್ ಪ್ರಯಾಣಕ್ಕಾಗಿ ಬುರ್ಖಾ ಧರಿಸಿದ ಪುರುಷ
ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯವು ಕೆಎಸ್ಆರ್ಟಿಸಿಯಲ್ಲಿ ಅತಿ ಹೆಚ್ಚು ಅಂದರೆ 151.25 ಕೋಟಿ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 103.51 ಕೋಟಿ ರೂ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 77.62 ಕೋಟಿ ರೂ ಮತ್ತು ಬಿಎಂಟಿಸಿಯಲ್ಲಿ 69.56 ಕೋಟಿ ರೂ. ಆಗಿದೆ. ‘ಶಕ್ತಿ’ ಯೋಜನೆಯಡಿ ತಿಂಗಳಿಗೆ ಒಟ್ಟು 401.94 ಕೋಟಿ ರೂ. ವೆಚ್ಚವಾಗಿದೆ ಎಂದು ‘ನ್ಯೂಸ್ 9’ ವರದಿ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ