Shakti Yojana: ಉಚಿತ ಬಸ್ ಪ್ರಯಾಣದಿಂದ ವಂಚಿತರಾದ ಗಡಿಭಾಗದ ಗ್ರಾಮಗಳ ಮಹಿಳೆಯರು, ಏಕೆ ? ಇಲ್ಲಿದೆ ಓದಿ

ಅಂತರರಾಜ್ಯ ಬಸ್​​ಗಳಲ್ಲಿ ಉಚಿತ ಪ್ರಯಾಣ ನಿರ್ಬಂಧ ಹಿನ್ನೆಲೆ ವಿಜಯಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದ ಗ್ರಾಮಗಳ ಮಹಿಳೆಯರು ಉಚಿತ ಪ್ರಯಾಣ ಯೋಜನೆಯಿಂದ ವಂಚಿತರಾಗಿದ್ದಾರೆ.

Shakti Yojana: ಉಚಿತ ಬಸ್ ಪ್ರಯಾಣದಿಂದ ವಂಚಿತರಾದ ಗಡಿಭಾಗದ ಗ್ರಾಮಗಳ ಮಹಿಳೆಯರು, ಏಕೆ ? ಇಲ್ಲಿದೆ ಓದಿ
ಕೆಎಸ್​ಆರ್​ಟಿಸಿ ಬಸ್​
Follow us
ವಿವೇಕ ಬಿರಾದಾರ
|

Updated on:Jun 12, 2023 | 10:51 AM

ವಿಜಯಪುರ/ಚಿಕ್ಕಬಳ್ಳಾಪುರ: ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ (Government Bus) ಉಚಿತ ಪ್ರಯಾಣ ಮಾಡಬಹುದಾಗಿದೆ. ರಾಜ್ಯ ಸರ್ಕಾರದ (Karnataka Government) ಈ ಮಹತ್ವದ ಯೋಜನೆ ನಿನ್ನೆ (ಜೂ.11) ರಿಂದ ಜಾರಿಯಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಆದರೆ ಅಂತರರಾಜ್ಯ ಬಸ್​​ಗಳಲ್ಲಿ ಉಚಿತ ಪ್ರಯಾಣ ನಿರ್ಬಂಧವಿದೆ. ಇದೀಗ ಈ ಷರತ್ತು ಗಡಿಭಾಗದ ಮಹಿಳೆಯರಲ್ಲಿ ಗೊಂದಲ ಮೂಡಿಸಿದೆ. ವಿಜಯಪುರ ಜಿಲ್ಲೆ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿದ್ದು, ಗಡಿಯಲ್ಲಿರುವ ಚಡಚಣ ತಾಲೂಕಿನ ಗಡಿಗ್ರಾಮಗಳ ಜನತೆ ಉಚಿತ ಪ್ರಯಾಣದಿಂದ ವಂಚಿತರಾಗಿದ್ದಾರೆ.

ಈ ಭಾಗದಲ್ಲಿ ಸಂಚರಿಸುವ ಬಹುತೇಕ ಬಸ್​​ಗಳು ಅಂತರರಾಜ್ಯಕ್ಕೆ ಸಂಚರಿಸುತ್ತವೆ. ಹೀಗಾಗಿ ತಾಲೂಕಿನ ಝಳಕಿ, ಧೂಳಖೇಡ, ಚಡಚಣ ಮಾರ್ಗವಾಗಿ ಶಿರಾಡೋಣ ಸೇರಿದಂತೆ ವಿವಿಧ ಗ್ರಾಮಗಳ ಮಹಿಳೆಯರು ಪ್ರತಿದಿನ ಹೊರ್ತಿ, ಝಳಕಿ, ಧೂಳಖೇಡ ಮಾರ್ಗವಾಗಿ ಸೋಲಾಪುರಕ್ಕೆ ತೆರಳುತ್ತಾರೆ. ಈ ಷರತ್ತಿನಿಂದ ಮಹಿಳೆಯರು ಶಕ್ತಿ ಯೋಜನೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಕರ್ನಾಟಕ ರಾಜ್ಯದ ಗಡಿ ಗ್ರಾಮಗಳ ಮಹಿಳೆಯರಿಗೂ ಶಕ್ತಿ ಯೋಜನೆಯ ಸೌಲಭ್ಯ ಒದಗಿಸಲು ಆಗ್ರಹಿಸಿದ್ದಾರೆ.

ಪ್ರತಿದಿನ ಕರ್ನಾಟಕದಿಂದ ಮಹರಾಷ್ಟ್ರಕ್ಕೆ 110 ರಿಂದ 120 ಬಸ್​​ಗಳು ತೆರಳುತ್ತವೆ. ಕರ್ನಾಟಕ ರಾಜ್ಯದ ಗಡಿ ಗ್ರಾಮಗಳಾದ ಧೂಳಖೇಡ, ಶಿರಾಡೋಣ ಗ್ರಾಮಗಳಿಗೆ ಹೋಗಬೇಕಾದಲ್ಲಿ ಮಹಿಳೆಯರು ಹಣ ಪಾವತಿಸಬೇಕಾಗಿದೆ. ಶಿರಾಡೋಣ ಗ್ರಾಮ ಚಡಚಣ ಮಾರ್ಗವಾಗಿ ಪಂಡರಪುರ ಹೋಗುವ ಮಾರ್ಗದಲ್ಲಿ ಬರುತ್ತಿದ್ದು, ಈ ಮಾರ್ಗ ಮತ್ತು ಭಾಗದಲ್ಲಿ ಸಂಚರಿಸುವ ಬಹುತೇಕ ಬಸ್​ಗಳು ಅಂತರ ರಾಜ್ಯ ಸಂಚಾರದ ಬೋರ್ಡ್ ಹೊಂದಿವೆ. ಈ ಬಸ್​​ಗಳಲ್ಲಿ ಮಹಿಳೆಯರು ಸಂಚರಿಸಿದರೇ ಹಣಕೊಟ್ಟು ಟಿಕೆಟ್​​ ಪಡೆಯಬೇಕು. ಹೀಗಾಗಿ ಮಹಿಳೆಯರು ಉಚಿತ ಪ್ರಯಾಣದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ಹೊಸದಾಗಿ 1,894 ಬಸ್​​ಗಳನ್ನು ಖರೀದಿಸಲು ರಾಜ್ಯ ಸಾರಿಗೆ ನಿಗಮ ಚಿಂತನೆ

ಈ ಭಾಗದಲ್ಲಿ ಮಹಿಳೆಯರ ಉಚಿತ ಸಂಚಾರಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿ ಯೋಜನೆಯ ಸೌಲಭ್ಯ ಕಲ್ಪಿಸಿ. ಇಲ್ಲವಾದಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವ ಅಂತರರಾಜ್ಯ ಬಸ್​​​ಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ಎಂದು ಚಡಚಣ ತಾಲೂಕಿನ ಜನತೆ ಆಗ್ರಹಿಸಿದ್ದಾರೆ.

ಇನ್ನು ಚಿಕ್ಕಬಳ್ಳಾಪುರದಲ್ಲೂ ಇದೇ ಕತೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಆಂದ್ರ ಪ್ರದೇಶ-ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಕಾರಣ ಅಂತರ ರಾಜ್ಯ ಬಶ್​ಗಳ ಸಂಚಾರ ಹೆಚ್ಚಾಗಿದೆ. ಆದರೆ ಅಂತರರಾಜ್ಯ ಬಸ್​​ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ನಿರ್ಬಂಧವಿದೆ.

ಬೆಂಗಳೂರಿನಿಂದ ಆರಂಭವಾಗುವ ಟ್ರೀಟ್​​ಗಳಿಗೆ ಚಿಕ್ಕಬಳ್ಳಾಪುರದಿಂದ ಉಚಿತ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗುವ ಬಸ್​​ಗಳಲ್ಲಿ ನಿರ್ಬಂಧವಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:45 am, Mon, 12 June 23

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ