ಮತ್ತೆ ಮುನ್ನೆಲೆಗೆ ಬಂದ ಶರಾವತಿ ಭೂಗತ ಯೋಜನೆ ವಿವಾದ: ಕೋರ್ಟ್ ಮೆಟ್ಟಿಲೇರುದಾಗಿ ಅನಂತ ಹೆಗಡೆ ಆಶೀಸರ ಎಚ್ಚರಿಕೆ
ಶರಾವತಿ ಕಣಿವೆಯಲ್ಲಿ ಭೂಗತ ಜಲವಿದ್ಯುತ್ ಯೋಜನೆಗೆ ಸರ್ಕಾರ ಮುಂದುವರಿದಿದ್ದು, ಪರಿಸರ ಸಂಘಟನೆಗಳು ಮತ್ತು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೋಜನೆಯ ಪರಿಸರ ಪರಿಣಾಮ ವರದಿ ಅಪೂರ್ಣ ಮತ್ತು ಪಕ್ಷಪಾತ ಎಂದು ಆರೋಪಿಸಲಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಶರಾವತಿ ಕಣಿವೆಯ ಸಂರಕ್ಷಣೆಗಾಗಿ ಹೋರಾಟಗಳು ನಡೆದಿವೆ.
ಬೆಂಗಳೂರು, ಡಿಸೆಂಬರ್ 20: ಶರಾವತಿ (Sharavathi) ಭೂಗತ ಯೋಜನೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಸರ್ಕಾರ ಯೋಜನೆಯನ್ನು ತುರ್ತು ಜಾರಿಗೆ ತರಲು ಸಕಲ ಸಿದ್ಧತೆ ನಡೆಸಿದೆ. ಅರಣ್ಯ ಸಚಿವರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಂಸದರ ಮುಂದೆ ಶರಾವತಿ ನದಿ ಕಣಿವೆ ಉಳಿಸುವ ಗಂಭೀರ ಸವಾಲು ಎದುರಾಗಿದೆ. ಪರಿಸರ ಸಂಘಟನೆಗಳ ಧ್ವನಿಗೆ ಸರ್ಕಾರ ನಿರ್ಲಕ್ಷ್ಯ ತೋರಿದ್ದು, ಆ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆಹೋಗುವ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ ಎಂದು ವೃಕ್ಷಲಕ್ಷ ಆಂದೋಲನ ಕರ್ನಾಟಕ ತಿಳಿಸಿದೆ.
ಈ ಬಗ್ಗೆ ವೃಕ್ಷಲಕ್ಷ ಆಂದೋಲನ ಕರ್ನಾಟಕ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಕಣಿವೆಯಲ್ಲಿ ಭೂಗತ ಬೃಹತ್ ಜಲವಿದ್ಯುತ್ ಯೋಜನೆಯ ತಯಾರಿಯಲ್ಲಿದೆ. ಅರ್ಧ ಸ್ಥಳ ಸಮೀಕ್ಷೆಯೇ ಪೂರ್ಣ ಆಗಿಲ್ಲ. ಡಿ.ಪಿ.ಆರ್. ಗಡಿಬಿಡಿಯಲ್ಲಿ ತಯಾರಿಸಲಾಗಿದೆ. ಡಿ.ಪಿ.ಆರ್. (ವಿವರ ಯೋಜನಾ ವರದಿ) ತಯಾರಿ ನಂತರ ಪರಿಸರ ಪರಿಣಾಮ ವರದಿ ತಯಾರಿ ಆಗಿ ಬಿಟ್ಟಿದೆ. ಪರಿಸರ ಹಾನಿ ಇಲ್ಲ ಎಂದು ಇ.ಐ.ಎ.ವರದಿ ನಿರ್ಯಾಣ ಸಂಸ್ಥೆಗೆ ಬೇಕಾದಂತೆ ವರದಿ ನೀಡಲಾಗಿದೆ ಎಂದು ಆರೋಪಿಸಿದೆ.
ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ
ಪರಿಸರ ಘಟನೆಗಳು ಹೊನ್ನಾವರ ಮತ್ತು ಸಾಗರಗಳಲ್ಲಿ ಜನರ ಅಹವಾಲು ಸಭೆ ನಡೆಸಲು ಆಗ್ರಹ ಮಾಡುತ್ತಲೇ ಇವೆ. ಅಲ್ಲಿ ಬೆಂಗಳೂರಲ್ಲಿ ರಾಜ್ಯ ಅರಣ್ಯ ಇಲಾಖೆ ಶರಾವತಿ ಕಣಿವೆ ಧ್ವಂಸ ಮಾಡುವ ಜಲವಿದ್ಯುತ್ ಯೋಜನೆಗೆ ಒಪ್ಪಿಗೆ ನೀಡಿದೆ. ಅರಣ್ಯ ಪರವಾನಿಗೆ ಪ್ರಸ್ತಾವನೆಗೆ ಭಾರತ ಸರ್ಕಾರದ ಅರಣ್ಯ ಮಂತ್ರಾಲಯದ ಅನುಮತಿ ಪಡೆಯಲು ಗಡಿಬಿಡಿ ತಯಾರಿ ನಡೆದಿದೆ. ಈಗಾಗಲೇ ಬೃಹತ್ ಜಲವಿದ್ಯುತ್ ಯೋಜನೆಯ ಗುತ್ತಿಗೆಯನ್ನು ನೀಡಲಾಗಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಪತ್ತೆಯಾಗದ ಇಬ್ಬರ ಶವ, ಮರಣ ಪತ್ರ ನೀಡದ ಆಡಳಿತದ ವಿರುದ್ಧ ಆಕ್ರೋಶ
ರೈತರು, ವನವಾಸಿಗಳು, ಮೀನುಗಾರರು ಶರಾವತಿ ನದಿ ತೀರದಲ್ಲಿ ಹೊನ್ನಾವರ ತಾಲೂಕಿನಲ್ಲಿ ಲಕ್ಷ ಜನರಿದ್ದಾರೆ. ಇಲ್ಲಿನ ಗ್ರಾಮ ಪಂಚಾಯತ-ಗ್ರಾಮ ಸಭೆಗಳ ಒಪ್ಪಿಗೆ ಪಡೆಯದೇ ಯೋಜನೆ ಜಾರಿ ಹೇಗೆ ಸಾಧ್ಯ ಎಂದು ಶಿರಸಿ, ಶಿವಮೊಗ್ಗಾ, ಹೊನ್ನಾವರ, ಸಾಗರ, ಬೆಂಗಳೂರು ಎಲ್ಲೆಡೆ ಪ್ರಶ್ನಿಸಲಾಗಿದೆ. ಶರಾವತಿ ಕಣಿವೆಯಲ್ಲಿ ಭೂಗತ ಯೋಜನೆ ಬೇಡ, ಕಣಿವೆ ಉಳಿಸಿ ಎಂದು 2 ವರ್ಷದಿಂದ ಜನರು ಧ್ವನಿ ಎತ್ತಿದ್ದಾರೆ.
ವೈಜ್ಞಾನಿಕ ವರದಿ
ಭಾರತೀಯ ವಿಜ್ಞಾನ ಸಂಸ್ಥೆ 21ನೇ ಶತಮಾನದ ಆರಂಭದಲ್ಲೇ ಶರಾವತಿ ನದಿ ನೀರಿನ ಕಣಿವೆ ಪರಿಸ್ಥಿತಿ ಬಗ್ಗೆ ಸಮಗ್ರ ವರದಿ ನೀಡಿದೆ. ಈ ವರದಿಯನ್ನು ಕರ್ನಾಟಕ ಪವರ್ ಕಾರ್ಪೋರೇಶನ್ ಕಪಾಟಿನಲ್ಲಿ ಬೀಗ ಹಾಕಿ ಭದ್ರವಾಗಿ ಇಟ್ಟಿದೆ. ಪರಿಸರ ಸಂಘ ಸಂಸ್ಥೆಗಳು, ರೈತರ ವಿರೋಧ, ಪ್ರತಿಭಟನೆ ಬಗ್ಗೆ ಕೆ.ಪಿ.ಸಿ. ಮತ್ತು ಸರ್ಕಾರ ನಿರ್ಲಕ್ಷ್ಯ ತೋರಿದೆ.
ರಾಜ್ಯ, ಕೇಂದ್ರದ ವನ್ಯ ಜೀವಿ ಮಂಡಳಿಗಳು ಹೆಸರಿಗೆ ಮಾತ್ರವೇ ಎಂಬ ಪ್ರಶ್ನೆ ಎದಿದ್ದೆ. ಜೀವ ವೈವಿಧ್ಯ ಮಂಡಳ ಅಧ್ಯಕ್ಷ ಅರಣ್ಯ ಸಚಿವರು ಗೇರುಸೊಪ್ಪಾಕ್ಕೆ ಭೇಟಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ ಹಕ್ಕೊತ್ತಾಯವಾಗಿದೆ. ಇದು ಮಲೆನಾಡಿನ ಕರಾವಳಿಯ ರೈತರು, ವನವಾಸಿಗಳು, ಮೀನುಗಾರರ ಹಕ್ಕೊತ್ತಾಯವಾಗಿದೆ.
ಯೋಜನೆ ಕೈ ಬಿಡುವಂತೆ ಒತ್ತಾಯ
ಅರಣ್ಯನಾಶ, ಗಣಿಗಾರಿಕೆ, ಬೃಹತ್ ಅಣಿಕಟ್ಟು, ಬೃಹತ್ ಕಾಮಗಾರಿಗಳು, ಹೈವೇಗಳು, ತಂತಿ ಮಾರ್ಗಗಳು, ಜನಸಂಖ್ಯಾ ಒತ್ತಡ, ಒತ್ತುವರಿಯಿಂದ ಈಗಾಗಲೇ ಶರಾವತಿ ಕಣಿವೆ ಆದ್ರ. ಅದ್ರವಾಗಿದೆ. ಸಮಗ್ರ ಸಂರಕ್ಷಣಾ ತಂತ್ರವಾಗಿ ಅರಣ್ಯ ಇಲಾಖೆ ಶರಾವತಿ ಅಭಯಾರಣ್ಯ ವಿಸ್ತರಣೆ ಮಾಡಿದೆ. ಈಗ ಭೂಗತ ಜಲವಿದ್ಯುತ್ ಯೋಜನೆ ಕಣಿವೆಯ ಉಳಿವಿಗೆ ಆತಂಕ ತಂದಿದೆ ಎಂದು ವಿಜ್ಞಾನಿಗಳು ಪರಿಸರ ಕಾರ್ಯಕರ್ತರು ಅಭಿಪ್ರಾಯ ನೀಡಿದ್ದಾರೆ. ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಅರಣ್ಯನಾಶ, ಗಣಿಗಾರಿಕೆ. ಬೃಹತ್ ಅಣಿಕಟ್ಟು, ಬೃಹತ್ ಕಾಮಗಾರಿಗಳು, ಹೈವೇಗಳು, ತಂತಿ ಮಾರ್ಗಗಳು, ಜನಸಂಖ್ಯಾ ಒತ್ತಡ, ಒತ್ತುವರಿಯಿಂದ ಈಗಾಗಲೇ ಶರಾವತಿ ಕಣಿವೆ ಛಿದ್ರ ಛಿದ್ರವಾಗಿದೆ. ಸಮಗ್ರ ಸಂರಕ್ಷಣಾ ತಂತ್ರವಾಗಿ ಅರಣ್ಯ ಇಲಾಖೆ ಶರಾವತಿ ಅಭಯಾರಣ್ಯ ವಿಸ್ತರಣೆ ಮಾಡಿದೆ. ಈಗ ಭೂಗತ ಜಲವಿದ್ಯುತ್ ಯೋಜನೆ ಕಣಿವೆಯ ಉಳಿವಿಗೆ ಆತಂಕ ತಂದಿದೆ ಎಂದು ವಿಜ್ಞಾನಿಗಳು ಪರಿಸರ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಹೀಗಾಗಿ ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕುಮಟಾ: ತೂಗು ಸೇತುವೆ ಕೊಚ್ಚಿ ಹೋಗಿ ಐದು ವರ್ಷ ಕಳೆದರೂ ಇಲ್ಲ ಪರ್ಯಾಯ ವ್ಯವಸ್ಥೆ, ಏಳು ಗ್ರಾಮಗಳ ಜನರಿಗೆ ನರಕ ಯಾತನೆ
4ತಿಂಗಳು ಹಿಂದೆ ಶಿವಮೊಗ್ಗಾದಲ್ಲಿ ಅರಣ್ಯ ಸಚಿವರು, ರಾಜ್ಯ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಶರಾವತಿ ಕಣಿವೆಯಲ್ಲಿ ಬೃಹತ್ ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಲಾಗಿತ್ತು. 2019ರಲ್ಲೇ ಜೋಗ ತಳಕಳಲೆ ಬಳಿ ಸಮೀಕ್ಷಾ ಕಾರ್ಯಕ್ಕೆ ತಡೆ ಒಡ್ಡಲಾಗಿತ್ತು. 2025 ಜನವರಿ 2ನೇ ವಾರದಲ್ಲಿ ಗೇರುಸೊಪ್ಪಾ ಮತ್ತು ಹೊನ್ನಾವರಗಳಲ್ಲಿ ಜಾಗೃತಿ ಸಭೆ ಜಾಥಾ ನಡೆಯಲಿದೆ ಎಂದು ವೃಕ್ಷ ಆಂದೋಲನ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.