ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರ ಭೇಟಿಗೆ ಅವಕಾಶ; ಆಸ್ಪತ್ರೆ ಅವ್ಯವಸ್ಥೆ ಕಂಡು ಬೆಚ್ಚಿಬಿದ್ದ ಜನಪ್ರತಿನಿಧಿಗಳು

ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಊಟ ಮತ್ತು ಇತರೆ ಎಲ್ಲಾ ವ್ಯವಸ್ಥೆಗಳನ್ನು ಕುಟುಂಬದ ಸದಸ್ಯರೇ ಮಾಡುತ್ತಿದ್ದಾರೆ. ಅದರಲ್ಲೂ ಕೊವಿಡ್ ಆಸ್ಪತ್ರೆಯ ಒಳಗೆ ಹೊಗಿ ನೆರವಾಗಿ ಮಾತನಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರ ಭೇಟಿಗೆ ಅವಕಾಶ; ಆಸ್ಪತ್ರೆ ಅವ್ಯವಸ್ಥೆ ಕಂಡು ಬೆಚ್ಚಿಬಿದ್ದ ಜನಪ್ರತಿನಿಧಿಗಳು
ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಶಾಸಕ ರುದ್ರೇಗೌಡರು ಮತ್ತು ಆಯನೂರು ಮಂಜುನಾಥ್
Follow us
preethi shettigar
|

Updated on: Apr 28, 2021 | 1:05 PM

ಶಿವಮೊಗ್ಗ: ಜಿಲ್ಲೆಯಲ್ಲಿ ಸದ್ಯ ಕೊರೊನಾ ಎರಡನೇ ಅಲೆ ಸ್ಪೋಟಗೊಳ್ಳುತ್ತಿದೆ. ಈಗಾಗಲೇ 10ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದು, ನಿತ್ಯ 200 ರಿಂದ 300 ಕೇಸ್​ಗಳು ಪತ್ತೆಯಾಗುತ್ತಿವೆ. ಈ ನಡುವೆ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿರುವ ಕೊವಿಡ್ ವ್ಯವಸ್ಥೆಗಳ ಪರಿಶೀಲನೆಗೆ ಏಪ್ರಿಲ್ 27 ರಂದು ಬಿಜೆಪಿ ಶಾಸಕ ರುದ್ರೇಗೌಡರು ಮತ್ತು ಆಯನೂರು ಮಂಜುನಾಥ್ ಆಗಮಿಸಿದ್ದು, ಜಿಲ್ಲಾಸ್ಪತ್ರೆಯ ಅಧೀಕ್ಷ ಡಾ. ಶ್ರೀಧರ್ ಅವರಿಂದ ಕೊವಿಡ್ ಸೋಂಕಿತರ ಚಿಕಿತ್ಸೆ ಕುರಿತು ಮಾಹಿತಿ ಕಲೆಹಾಕಿದರು.

ಈ ವೇಳೆ ಕೊವಿಡ್ ಆಸ್ಪತ್ರೆಯಲ್ಲಿರುವ ಕೆಲವೊಂದು ಅವ್ಯವಸ್ಥೆಗಳು ಬಹಿರಂಗವಾಗಿದೆ. ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಊಟ ಮತ್ತು ಇತರೆ ಎಲ್ಲಾ ವ್ಯವಸ್ಥೆಗಳನ್ನು ಕುಟುಂಬದ ಸದಸ್ಯರೇ ಮಾಡುತ್ತಿದ್ದಾರೆ. ಅದರಲ್ಲೂ ಕೊವಿಡ್ ಆಸ್ಪತ್ರೆಯ ಒಳಗೆ ಹೊಗಿ ನೆರವಾಗಿ ಮಾತನಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ. ಪಿಪಿಇ ಕಿಟ್ ಧರಿಸದೇ ಹೀಗೆ ಸೋಂಕಿತರ ಸಂಬಂಧಿಗಳು ಕೊವಿಡ್ ಆಸ್ಪತ್ರೆಯಲ್ಲಿ ಓಡಾಡಿಕೊಂಡಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ನರ್ಸ್​ಗಳ ಕೊರತೆಯಿಂದ ಸೋಂಕಿತರ ಆರೈಕೆ ಖುದ್ದಾಗಿ ಸಂಬಂಧಿಗಳೇ ಮಾಡುತ್ತಿರುವ ಅಚ್ಚರಿ ಸಂಗತಿಗಳು ಸಿಸಿ ಕ್ಯಾಮರ ಮೂಲಕ ಬಹಿರಂಗವಾಗಿದೆ. ಇದನ್ನು ನೋಡಿದ ಬಿಜೆಪಿ ಶಾಸಕ ರುದ್ರೇಗೌಡರು ಮತ್ತು ಆಯನೂರು ಮಂಜುನಾಥ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಹಳ ದೊಡ್ಡ ಸಂಖ್ಯೆಯಲ್ಲಿ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರು ಮತ್ತು ಪರೀಕ್ಷೆಗೆ ಬರುವವರು ಇದ್ದಾರೆ. ಇಲ್ಲಿಗೆ ಬರುವ ಸಾರ್ವಜನಿಕರನ್ನು ಪರೀಕ್ಷೆ ಮಾಡುವವರ ಕೊರತೆ ಇದೆ. ಇನ್ನು ಇಲ್ಲಿ ಕೆಲಸಕ್ಕಾಗಿ ಆಯೋಜಿಸಿರುವ ಸಿಬ್ಬಂದಿಗಳು ಕೆಲಸಕ್ಕೆ ಬಾರದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಅಗತ್ಯ ಇರುವಷ್ಟು ಸಿಬ್ಬಂದಿಗಳನ್ನು ಇಲ್ಲಿ ನಿಯೋಜನೆ ಮಾಡಬೇಕು ಎಂದು ಬಿಜೆಪಿ ಶಾಸಕ ಆಯನೂರು ಮಂಜುನಾಥ್ ಹೇಳಿದ್ದಾರೆ.

ಇನ್ನು ಶಿವಮೊಗ್ಗ ಹೊರವಲಯದ ಬೊಮ್ಮಕಟ್ಟೆ ನಿವಾಸಿ ವಿಜಯ್​ ಎಂಬುವವರಿಗೆ ಕಳೆದ 10 ದಿನಗಳ ಹಿಂದೆ ಕೊರೊನಾ ಸೊಂಕು ಬಂದಿದೆ. ರೋಗದ ಲಕ್ಷಣಗಳು ಇಲ್ಲದೇ ಆತ ಕಳೆದ 10 ದಿನಗಳಿಂದ ಮನೆಯಲ್ಲಿ ಐಸೋಲೇಷನ್ ನಲ್ಲಿದ್ದರು. ಬಳಿಕ ಆತನ ಆರೋಗ್ಯ ಮತ್ತು ಕೊವಿಡ್ ಪರೀಕ್ಷೆಗೆ ಆರೋಗ್ಯ ಸಿಬ್ಬಂದಿಗಳು ವಿಜಯ್​ ಮನೆಯ ಬಳಿ ಬಂದಿರಲಿಲ್ಲ. ಈ ನಡುವೆ ವಿಜಯ್​ ನೇರವಾಗಿ ಕೊವಿಡ್ ಪರೀಕ್ಷೆಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಈತನಿಗೆ ಯಾರು ಸರಿಯಾಗಿ ಸ್ಪಂಧಿಸಿಲ್ಲ. ಹೀಗಾಗಿ ಈತ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಶಾಸಕರು ಮತ್ತು ಜಿಲ್ಲಾಸ್ಪತ್ರೆಯ ಅಧೀಕ್ಷಕರ ಮುಂದೆ ಆರೋಗ್ಯ ಇಲಾಖೆಯ ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಇದನ್ನೂ ಗಮನಿಸಿದ ಆಸ್ಪತ್ರೆಯ ಅಧೀಕ್ಷಕರು ಆತನಿಗೆ ಕೊವಿಡ್ ಪರೀಕ್ಷೆಯ ವ್ಯವಸ್ಥೆ ಕಲ್ಪಿಸಿದ್ದಾರೆ.

METTING

ಕೊವಿಡ್ ಸಭೆಯ ಚಿತ್ರಣ

ಹೀಗೆ ಮೆಗ್ಗಾನ್ ಕೊವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಮತ್ತು ವ್ಯವಸ್ಥೆಗಳು ಇರದೇ ಇರುವುದು ಕಂಡುಬಂದಿದ್ದು, ಸೋಂಕು ನಿಯಂತ್ರಣ ಮಾಡುವ ಬದಲಿಗೆ ಆಸ್ಪತ್ರೆಯಲ್ಲಿ ಸೋಂಕು ಹರಡುವ ವಾತಾವರಣ ನಿರ್ಮಾಣವಾಗಿದೆ ಎಮಬ ಸತ್ಯ ಹೊರಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊವಿಡ್ ಸಭೆ ಮಾಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್ ಈಶ್ವರಪ್ಪ ಕೊವಿಡ್ ಆಸ್ಪತ್ರೆಯ ಅವ್ಯವಸ್ಥೆ ಗಮನಕ್ಕೆ ಬರುತ್ತಿದ್ದಂತೆ ಈ ಕುರಿತು ಮಾತನಾಡಿದ್ದು, ಕೊವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಕೊರೊನಾ ಸೋಂಕಿತರು ಮತ್ತು ಕುಟುಂಬದವರು ಆಸ್ಪತ್ರೆಯಲ್ಲಿ ಓಡಾಡುತ್ತಿದ್ದಾರೆ ಅವರಿಗೆ ಪಿಪಿಇ ಕಿಟ್ ಕೊಡುವ ವ್ಯವಸ್ಥೆಯನ್ನು ಮಾಡುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಅವರ ತವರು ಜಿಲ್ಲೆಯ ಕೊವಿಡ್ ಆಸ್ಪತ್ರೆಯಲ್ಲಿ ಇಷ್ಟೊಂದು ಅವ್ಯವಸ್ಥೆ ಸದ್ಯ ಶುರುವಾಗಿದೆ. ಕೊರೊನಾ ಸೋಂಕಿತರ ಮತ್ತು ಅವರ ಸಂಬಂಧಿಗಳ ಮೂಲಕ ಕೊವಿಡ್ ಸ್ಪೋಟಗೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಇನ್ನಾದರೂ ಕೊವಿಡ್ ಆಸ್ಪತ್ರೆಯ ವೈದ್ಯರು ಮತ್ತು ಅಧಿಕಾರಿಗಳ ಮೇಲೆ ಜಿಲ್ಲಾಡಳಿತ ಗಮನಹರಿಸಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ: ಕೊರೊನಾ ತಗುಲದಂತೆ ವಿಶಿಷ್ಟ ಹರಕೆ; ದೇವರಿಗೆ ನೀರು ಅರ್ಪಿಸಿ ಗ್ರಾಮವನ್ನು ಕಾಪಾಡುವಂತೆ ಬೇಡಿಕೊಂಡ ಮಹಿಳೆಯರು

(Shivamogga Representatives shocked after visiting Mc Gann hospital as there was no proper setup for Covid Patients)

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ