ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ್ದು ಅಕ್ಷಮ್ಯ ಅಪರಾಧ, ರಾಷ್ಟ್ರದ್ರೋಹದ ಕೆಲಸ; ಸಿಎಂ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ -ಕೆಎಸ್ ಈಶ್ವರಪ್ಪ

| Updated By: ಆಯೇಷಾ ಬಾನು

Updated on: Mar 20, 2023 | 12:45 PM

ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೆಎಸ್ ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಐಪಿಸಿ ಸೆಕ್ಷನ್ 107 ಹಾಕಿ ಬೇಲ್ ಕೊಟ್ಟಿದ್ದಾರೆ. ಈ ಕುರಿತು ಸಿಎಂ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದರು.

ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ್ದು ಅಕ್ಷಮ್ಯ ಅಪರಾಧ, ರಾಷ್ಟ್ರದ್ರೋಹದ ಕೆಲಸ; ಸಿಎಂ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ -ಕೆಎಸ್ ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ
Follow us on

ಶಿವಮೊಗ್ಗ: ಜಿಲ್ಲೆಯ ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್(Azaan) ಕೂಗಿದ್ದ ಘಟನೆ ಸಂಬಂಧ ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KS EShwarappa) ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ್ದು ಅಕ್ಷಮ್ಯ ಅಪರಾಧ. ರಾಷ್ಟ್ರದ್ರೋಹದ ಕೆಲಸ. ಎಸ್​ಡಿಪಿಐ ಸಂಘಟನೆಗೆ ಸೇರಿದ ವ್ಯಕ್ತಿ ಅಲ್ಲಿ ಆಜಾನ್ ಕೂಗಿದ್ದಾನೆ. ಐಪಿಸಿ ಸೆಕ್ಷನ್ 107 ಹಾಕಿ ಬೇಲ್ ಕೊಟ್ಟಿದ್ದಾರೆ. ಈ ಕುರಿತು ಸಿಎಂ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಕೆಎಸ್​ ಈಶ್ವರಪ್ಪ, ಇದೊಂದು ಅಕ್ಷಮ್ಯ ಅಪರಾಧ. ಆಜಾನ್ ಕೂಗಿದ ವ್ಯಕ್ತಿ ಎಸ್​ಡಿಪಿಐ ಸದಸ್ಯ. 107 ಸೆಕ್ಷನ್ ಹಾಕಿ ಬೇಲ್ ಕೊಟ್ಟಿದ್ದಾರೆ. ಈ ಕೃತ್ಯವು ರಾಷ್ಟ್ರದ್ರೋಹದ್ದಾಗಿದೆ. ಈ ಕುರಿತು ಸಿಎಂ ಮತ್ತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ವಿಧಾನಸಭೆಯಲ್ಲಿ ಆಜಾನ್ ಕೂಗುವುದಾಗಿ ಎಚ್ಚರಿಕೆ ನೀಡಿದ್ದರು. ಅಲ್ಲಾಗೆ ಅಪಮಾನ ಮಾಡುತ್ತಿರುವುದು ಅವರೇ. ಹೀಗೆ ನಾಲ್ಕು ಮೈಕ್ ಹಾಕಿ ಆಜಾನ್ ಕೂಗುತ್ತಾ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದರು. ಇನ್ನು ಇದೇ ವೇಳೆ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ. ಆಜಾನ್ ಬಗ್ಗೆ ಕುಮಾರಸ್ವಾಮಿ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಬೇಕು.

ಇದನ್ನೂ ಓದಿ: ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್

ಆಜಾನ್ ಕೂಗುವುದರಿಂದ ವಿದ್ಯಾರ್ಥಿಗಳ ಪರೀಕ್ಷೆಗೆ ಸಮಸ್ಯೆ ಆಗ್ತಿದೆ. ಜ್ಞಾನವಿದ್ದು ಯಾಕೇ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಕೋಮು ಸೌಹಾರ್ದತೆ ಹಾಳು ಮಾಡುವ ವ್ಯವಸ್ಥೆ ಇದು. ಈ ರೀತಿ ಆಜಾನ್ ಕೂಗುವವರು ನಮ್ಮಲ್ಲಿ ಇದ್ದಾರೋ ಪಾಕ್ ನಲ್ಲಿದ್ದಾರೆ. ಹಾಗಿದ್ದರೆ ಇಲಾಖೆ ಯಾಕೇ ಬೇಕು. ಈ ಘಟನೆಯಿಂದ ಪ್ರಜ್ಞಾಪ್ರಭುತಕ್ಕೆ ಗಂಡಾಂತರ ಬಂದಿದೆ ಎಂದು ಆಜಾನ್ ಕೂಗಿದ ವ್ಯಕ್ತಿ ಬಿಡುಗಡೆ ಮಾಡಿದ್ದಕ್ಕೆ ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ. ವಿಧಾನಸೌಧದೆದುರು ಕೂಗುವುದಾಗಿ ಸೊಕ್ಕಿನ ಮಾತು ಹೇಳಿದ್ದಾರೆ. ವಿರಾಜಪೇಟೆಯಲ್ಲಿ ಭಾಷಣ ಮಾಡುವಾಗ ಆಜಾನ್ ಕೂಗಿದರು. ಮಂಗಳೂರಿನಲ್ಲೂ ನಾನು ಭಾಷಣ ಮಾಡುವಾಗ ಆಜಾನ್ ಕೂಗಿದ್ರು ಎಂದು ಕಿಡಿಕಾರಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:45 pm, Mon, 20 March 23