AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟದ ಮಾಸ್ಟರ್​ ಮೈಂಡ್​​ ಮತೀನ್​ ನಿವೃತ್ತ ಯೋಧನ ಮಗ

ತಂದೆ ಮನ್ಸೂರ 22 ವರ್ಷ ದೇಶಕ್ಕಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇದೀಗ ಅವರು ನಿಧನರಾಗಿದ್ದಾರೆ. ಆದರೆ ನಿವೃತ್ತ ಯೋಧ ಮನ್ಸೂರ ಅವರ ಪುತ್ರ ಅಬ್ದುಲ್​ ಮತೀನ್​ ತಾಹೆ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಸದ್ಯ ಎನ್​ಐಎ ಅಧಿಕಾರಿಗಳು ಉಗ್ರ ಮತೀನ್​ನನ್ನು ಬಂಧಿಸಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟದ ಮಾಸ್ಟರ್​ ಮೈಂಡ್​​ ಮತೀನ್​ ನಿವೃತ್ತ ಯೋಧನ ಮಗ
ಉಗ್ರ ಅಬ್ದುಲ್ ಮತೀನ್ ತಾಹಾ
Basavaraj Yaraganavi
| Edited By: |

Updated on: Apr 13, 2024 | 1:11 PM

Share

ಶಿವಮೊಗ್ಗ, ಏಪ್ರಿಲ್​ 13: ಮಂಗಳೂರು ಗೋಡೆ ಬರಹ, ಬೆಂಗಳೂರಿನ ವೈಟ್​​ಫಿಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast case), ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Mangaluru cooker Bomb Blast), ತುಂಗಾ ನದಿ ಟ್ರಯಲ್ ಬಾಂಬ್ ಸ್ಫೋಟದ ಮಾಸ್ಟರ್​​ ಮೈಂಡ್, ಬಂಧಿತ​ ಉಗ್ರ ಅಬ್ದುಲ್ ಮತೀನ್ ತಾಹಾ ನಿವೃತ್ತ ಯೋಧನ ಪುತ್ರನಾಗಿದ್ದಾನೆ. ಉಗ್ರ ಮತೀನ್​ ತಂದೆ, ನಿವೃತ್ತ ಯೋಧ ಮನ್ಸೂರ್ (Retired Army Officer Mansoor) ಅವರು ದೇಶಕ್ಕಾಗಿ ಸೇವೆ ಸಲ್ಲಿಸಿದರೇ, ಮಗ ಉಗ್ರ ಮತೀನ್ ತಾಹಾ ದೇಶ ದ್ರೋಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ.

ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮುಗಿಸಿದ್ದ ಅಬ್ದುಲ್ ಮತೀನ್ ತಾಹಾ, ಇಂಜಿನಿಯರಿಂಗ್ ಅನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾನೆ. ಅಬ್ದುಲ್ ಮತೀನ್ ತಾಹಾ ಬೆಂಗಳೂರಿನಲ್ಲಿ ‌ಐಸಿಸ್ ಉಗ್ರರ ಜೊತೆ ನಂಟು ಬೆಳೆಸಿಕೊಂಡಿದ್ದಾನೆ. ಅಲ್ಲದೆ ತೀರ್ಥಹಳ್ಳಿಯ ತನ್ನ ಕೆಲವು ಸ್ನೇಹಿತರನ್ನು ಉಗ್ರ ಸಂಘಟನೆಗೆ ‌ಬಳಸಿಕೊಂಡಿದ್ದಾನೆ.

ಉಗ್ರ ಅಬ್ದುಲ್ ಮತೀನ್ ತಾಹಾ ಕಳೆದ 4-5 ವರ್ಷದಿಂದ ನಾಪತ್ತೆಯಾಗಿದ್ದನು. ಉಗ್ರ ಸಂಘಟನೆ ಜೊತೆ ಸೇರಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಸ್ಥಳೀಯ ಪೊಲೀಸರು, ಆತನಿಗಾಗಿ ಹುಡುಕಾಡಲು ಆರಂಭಿಸಿದ್ದಾರೆ. ಅಬ್ದುಲ್ ಮತೀನ್ ತಾಹಾ ಮನೆಗೆ ತರೆಳಿ ಆತನ ಬಗ್ಗೆ ವಿಚಾರಿಸಿದ್ದಾರೆ.

ಅಬ್ದುಲ್ ಮತೀನ್ ತಾಹಾ ತೀರ್ಥಹಳ್ಳಿಯ ಶಾರೀಖ್, ಮುಸಾವೀರ್ ಹುಸೇನ್ ಸಹಾಯದೊಂದಿಗೆ ‌ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಅಲ್ಲದೆ ತೀರ್ಥಹಳ್ಳಿಯ ಯುವಕರನ್ನು ಉಗ್ರ ಚಟುವಟಿಕೆಗೆ ಬೆಳಸಿಕೊಂಡಿದ್ದನು. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಉಗ್ರ ಚಟುವಟಿಕೆ ಆಪರೇಟ್ ಮಾಡುತ್ತಿದ್ದನು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್: ಉಗ್ರರು 10 ದಿನಗಳ ಕಾಲ ಎನ್ಐಎ ವಶಕ್ಕೆ

ಅಬ್ದುಲ್ ಮತೀನ್ ತಾಹಾ ತಂದೆ ನಿವೃತ್ತ ಯೋಧ

ಉಗ್ರ ಅಬ್ದುಲ್ ಮತೀನ್ ತಾಹಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆಯ ನಿವಾಸಿಯಾಗಿದ್ದಾನೆ. ಉಗ್ರ ಅಬ್ದುಲ್ ಮತೀನ್ ತಾಹಾ ತಂದೆ ಮನ್ಸೂರ್​ ‌22 ವರ್ಷಕ್ಕೂ ಹೆಚ್ಚು ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ತನ್ನ ಪುತ್ರ ಅಬ್ದುಲ್ ಮತೀನ್ ತಾಹಾ ಉಗ್ರ ಎನ್ನುವ ಸುದ್ದಿ ತಿಳಿದು ತಂದೆ ಮನ್ಸೂರ್ ಆಘಾತಕ್ಕೆ ಒಳಗಾಗಿದ್ದರು. ಒಬ್ಬ ಯೋಧನ ಮಗ ಉಗ್ರನಾದ ಬಗ್ಗೆ ನೋವು ಪಟ್ಟಿದ್ದರು. ನನ್ನ ‌ಮಗ‌ ಉಗ್ರ ಅಂತ ಸಾಬೀತಾದರೆ ಗಲ್ಲಿಗೇರಿಸಿ ಅಂತ ತಂದೆ ಮನ್ಸೂರ್ ಹೇಳಿದ್ದರು. ನಿವೃತ್ತ ಯೋಧ ಮನ್ಸೂರ್​ ಕಳೆದ ವರ್ಷ ಅನಾರೋಗ್ಯದ ಹಿನ್ನೆಲೆಯಲ್ಲಿ ‌ಮೃತಪಟ್ಟರು.

ತಂದೆ ಮೃತಪಟ್ಟರೂ ಸುಳಿಯದ ಮತೀನ್​

ತಂದೆ ಮೃತಪಟ್ಟಾಗಲಾದರೂ ಊರಿಗೆ ಬರಬಹುದು ಎಂದು ಪೊಲೀಸರು ಕಾದು ಕುಳಿತಿದ್ದರು. ಆದರೆ ಉಗ್ರ ಮತೀನ್​ ಬರಲೇ ಇಲ್ಲ. ಇದೀಗ ರಾಮೇಶ್ವರಂ ಕೆಫೆ ಬಾಂಬ ಸ್ಫೋಟ ಪ್ರಕರಣದಲ್ಲಿ ಎನ್​ಐಎ ಅಧಿಕಾರಿಗಳು ಕೊಲ್ಕತ್ತಾದಲ್ಲಿ ಉಗ್ರ ಅಬ್ದುಲ್ ಮತೀನ್ ತಾಹಾನನ್ನು ಬಂಧಿಸಿದ್ದಾರೆ.

ಇನ್ನು ಅಬ್ದುಲ್ ಮತೀನ್ ತಾಹಾ ಜೊತೆಗೆ ಇನ್ನು ಹಲವರು ಸ್ಲೀಪರ್ ಸೆಲ್ ಆಗಿ ಕೆಲಸ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಅಬ್ದುಲ್ ಮತೀನ್ ತಾಹಾ ಹಾಗೂ ಬಾಂಬರ್​ ಮುಸಾವೀರ್ ಹುಸೇನ್​​ನನ್ನು ಎನ್​ಐಎ ತೀರ್ಥಹಳ್ಳಿಗೆ ಕರೆತರುವ ಸಾಧ್ಯತೆ ಇದೆ. ತೀರ್ಥಹಳ್ಳಿಯಲ್ಲಿ ಹಲವರನ್ನು ವಿಚಾರಣೆಗೆ‌ ಒಳಪಡಿಸುವ ಸಂಭವವೂ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್​ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ