ಶಿವಮೊಗ್ಗ: ಎಪಿಎಂಸಿ ಯಾರ್ಡ್ ಮುಂಭಾಗ ಆಂಜನೇಯನ ಗುಡಿ ಧ್ವಂಸ ಪ್ರಕರಣ; ಬಜರಂಗ ದಳ, ವಿಹೆಚ್​ಪಿ ಕಾರ್ಯಕರ್ತರ ಆಕ್ರೋಶ

ಶಿವಮೊಗ್ಗ: ಎಪಿಎಂಸಿ ಯಾರ್ಡ್ ಮುಂಭಾಗ ಆಂಜನೇಯನ ಗುಡಿ ಧ್ವಂಸ ಪ್ರಕರಣ; ಬಜರಂಗ ದಳ, ವಿಹೆಚ್​ಪಿ ಕಾರ್ಯಕರ್ತರ ಆಕ್ರೋಶ
ಪ್ರಾತಿನಿಧಿಕ ಚಿತ್ರ

ಶಿವಮೊಗ್ಗದ ಎಪಿಎಂಸಿ ಯಾರ್ಡ್ ಮುಂಭಾಗದ ಆಂಜನೇಯ ಗುಡಿ ಕೆಡವಿದ ಸಂಬಂಧ ಬಜರಂಗದಳ ಹಾಗೂ ವಿಹೆಚ್​ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

TV9kannada Web Team

| Edited By: shivaprasad.hs

Dec 05, 2021 | 3:52 PM

ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಆಂಜನೇಯನ ಗುಡಿ ಧ್ವಂಸ ಮಾಡಿದ್ದಕ್ಕೆ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಗುಡಿ ಪುನರ್​ನಿರ್ಮಿಸಲು ಆಗ್ರಹಿಸಲಾಗಿದೆ. ಕಾರ್ಯಕರ್ತರು ಆಂಜನೇಯನ ಗುಡಿ ಜಾಗದಲ್ಲಿ ಭಗವಧ್ವಜ ನೆಟ್ಟು ಪ್ರಾರ್ಥನೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಇಂಜಿನಿಯರ್​ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು, ಅಕ್ಕಪಕ್ಕದಲ್ಲಿ ಸಾಕಷ್ಟು ಜಾಗವಿದ್ದರೂ, ಗುಡಿ ಧ್ವಂಸ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ದೇವರ ಗುಡಿ ಒಡೆಯಲು ಆದೇಶ ಕೊಟ್ಟಿದ್ದು ಯಾರು ಎಂದು ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. 38 ವರ್ಷಗಳಿಂದ ಇರುವ ಗುಡಿ ಕೆಡವಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಿ, ಕಾರ್ಮಿಕರು, ಹಮಾಲಿಗಳು ಗುಡಿಗೆ ಪೂಜೆ ನೆರವೇರಿಸಿ, ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಟೈಲ್ಸ್ ಹಾಕಲು ಗುಡಿ ಕೆಡವಿದ್ದು ಏಕೆ ಎಂದು ಹಿಂದೂ ಸಂಘಟನೆ ಯುವಕರು ಪ್ರತಿಭಟನೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಶಿವಮೊಗ್ಗ: ಹಿಂದುಳಿದ ವರ್ಗಕ್ಕೆ ಬಿಜೆಪಿ ನ್ಯಾಯ ಕೊಡತ್ತಿದೆ, ಅದೇ ಬಿಜೆಪಿ ಗುರಿ: ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಹಿಂದುಳಿದ ವರ್ಗಗಳ ಪ್ರಮುಖರ ಸಭೆ ಶಿವಮೊಗ್ಗ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ನಡೆಯಿತು. ಸಚಿವ ಕೆ.ಎಸ್. ಈಶ್ವರಪ್ಪ ಗೋಮಾತೆಗೆ ಪೂಜೆ ಹಾಗೂ ಗುಡಿಕೈಗಾರಿಕೆಯ ಗುಡಿಗಾರರಿಂದ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ಕೆ. ಎಸ್.ಈಶ್ವರಪ್ಪ ಗುಡುಗಿದ್ದು, ‘‘ಸಿಎಂ ಆಗಿದ್ದ ಸಿದ್ದರಾಮಯ್ಯರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ’’ ಎಂದಿದ್ದಾರೆ.

‘‘ಕೇಂದ್ರದ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಅತೀ ಹೆಚ್ಚು ಸ್ಥಾನ ಒಬಿಸಿ ಮತ್ತು ಎಸ್ಸಿಗಳಿಗೆ ನೀಡಲಾಗಿದೆ. ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಹಿಂದುಳಿದ ವರ್ಗದವರು ಹೇಳಬೇಕು. ಕಾಂಗ್ರೆಸ್ ಎಸ್ಸಿ ಎಸ್ಟಿಗೆ ಅನ್ಯಾಯ ಮಾಡಿದೆ. ಕೇವಲ ಮೋದಿಯನ್ನು ಏಕ ವಚನದಲ್ಲಿ ಬೈಯುವುದೇ ಅವರ ಅಭ್ಯಾಸ. ಕಾಂಗ್ರೆಸ್ ಜಾತಿಯತೆ ಮಾಡಿಯೇ ಇಡೀ ದೇಶದಲ್ಲಿ ಕಾಂಗ್ರೆಸ್ ಹಾಳಾಗಿ ಹೋಗಿದೆ. ಹಿಂದುಳಿದ ವರ್ಗಕ್ಕೆ ಬಿಜೆಪಿ ನ್ಯಾಯ ಕೂಡುತ್ತಿದೆ. ಅದೇ ಬಿಜೆಪಿ ಗುರಿ. ಬರುವ ದಿನಗಳಲ್ಲಿ ಓಬಿಸಿ ಯಿಂದಲೇ ಬಿಜೆಪಿ ಪೂರ್ಣ ಬಹುಮತ ತರಬೇಕು’’ ಎಂದು ಸಚಿವ ಕೆ ಎಸ್ ಈಶ್ವರಪ್ಪ ಕರೆ ನೀಡಿದ್ದಾರೆ.

ಇದನ್ನೂ ಓದಿ:

4 ದಿನದಲ್ಲಿ ಲಕ್ಷ ಲಕ್ಷ ರೂ. ಮಾಸ್ಕ್ ದಂಡ ಸಂಗ್ರಹ; ಬಿಬಿಎಂಪಿ ಈವರೆಗೆ ಸಂಗ್ರಹಿಸಿದ ಒಟ್ಟು ದಂಡದ ಮೊತ್ತ ಎಷ್ಟು ಕೋಟಿ ಗೊತ್ತಾ?

ಉದ್ಯಮಿ ರತನ್​ ಟಾಟಾ, ಒಲಂಪಿಯನ್ ಲವ್ಲಿನಾ ಸೇರಿ 19 ಸಾಧಕರಿಗೆ ಅಸ್ಸಾಂ ನಾಗರಿಕ ಪ್ರಶಸ್ತಿ

Follow us on

Related Stories

Most Read Stories

Click on your DTH Provider to Add TV9 Kannada