ಉದ್ಯಮಿ ರತನ್​ ಟಾಟಾ, ಒಲಂಪಿಯನ್ ಲವ್ಲಿನಾ ಸೇರಿ 19 ಸಾಧಕರಿಗೆ ಅಸ್ಸಾಂ ನಾಗರಿಕ ಪ್ರಶಸ್ತಿ

ಉದ್ಯಮಿ ರತನ್ ಟಾಟಾ, ಒಲಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಸೇರಿದಂತೆ 19ಮಂದಿ ಸಾಧಕರಿಗೆ ಅಸ್ಸಾಂ ಸರ್ಕಾರ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

ಉದ್ಯಮಿ ರತನ್​ ಟಾಟಾ, ಒಲಂಪಿಯನ್ ಲವ್ಲಿನಾ ಸೇರಿ 19 ಸಾಧಕರಿಗೆ ಅಸ್ಸಾಂ ನಾಗರಿಕ ಪ್ರಶಸ್ತಿ
ರತನ್ ಟಾಟಾ

ಅಸ್ಸಾಂಉದ್ಯಮಿ ರತನ್ ಟಾಟಾ, ಒಲಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಸೇರಿದಂತೆ 19ಮಂದಿ ಸಾಧಕರಿಗೆ ಅಸ್ಸಾಂ ಸರ್ಕಾರ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಅಸ್ಸಾಂ ಸರ್ಕಾರ ಕೊಡಮಾಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಅಸ್ಸಾಂ ಬೈಭವ್, ಅಸ್ಸಾಂ ಸೌರವ್ ಹಾಗೂ ಅಸ್ಸಾಂ ಗೌರವ್ ಪ್ರಶಸ್ತಿಗೆ ಒಟ್ಟು 19 ಜನರನ್ನು ಆಯ್ಕೆ ಮಾಡಲಾಗಿದೆ. ಉದ್ಯಮಿ ರತನ್ ಟಾಟಾ ಅವರು ಅಸ್ಸಾಂ ಬೈಭವ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಸ್ಸಾಂ ಸೌರವ್ ಪ್ರಶಸ್ತಿಗೆ ಐವರು ಸಾಧಕರು ಆಯ್ಕೆಯಾಗಿದ್ದಾರೆ.

ಒಲಂಪಿಯನ್ ಲವ್ಲಿನಾ, ಪ್ರೊ. ಕಮಲೇಂದು ದೇಬ್ ಕ್ರೊರಿ, ಡಾ. ಲಕ್ಷ್ಮಣನ್ ಎಸ್, ಪ್ರೊ. ದೀಪಕ್​ ಚಂದ್ ಜೈನ್ ಹಾಗೂ ನೀಲ್ ಪವನ್ ಬರುವಾ ಪಾತ್ರರಾಗಿದ್ದಾರೆ. ಅಸ್ಸಾಂ ಗೌರವ್ ಪ್ರಶಸ್ತಿಗೆ 13 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 2022ರ ಜನವರಿ 24ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಟಾಟಾ ಸನ್ಸ್​ನ ಮಾಜಿ ಅಧ್ಯಕ್ಷ ರತನ್​ ಟಾಟಾ ಅವರು ಅಸ್ಸಾಂ ರಾಜ್ಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೀಡಿದ ಆರೈಕೆ ಸೌಲಭ್ಯಗಳ ಕೊಡುಗೆಗಾಗಿ ಅಸ್ಸಾಂ ಬೈಭವ್ ಪ್ರಶಸ್ತಿಗೆ ಭಾಜನಾರಾಗಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ, ಈ ಬಾರಿ ಅಧ್ಯಯನದ ಮೂಲಕ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷದಿಂದ ಆನ್ಲೈನ್ ವೋಟಿಂಗ್​ ಮಾಡುವ ಮೂಲಕ ಪ್ರಶಸ್ತಿಗೆ ಭಾಜನರಾಗುವ ಸಾಧಕರನ್ನು ಆಯ್ಕೆ ಮಾಡಲಾಗುವುದು ಎಂದರು. ಮುಂದುವರೆದು ಮಾತನಾಡಿ, ಅಸ್ಸಾಂ ಬೈಭವ್ ಪ್ರಶಸ್ತಿಯು 5 ಲಕ್ಷ ರೂ., ಅಸ್ಸಾಂ ಸೌರವ್ ಪ್ರಶಸ್ತಿಯು 4 ಲಕ್ಷರೂ., ಹಾಗೂ ಅಸ್ಸಾಂ ಗೌರವ್ ಪ್ರಶಸ್ತಿಯು 3 ಲಕ್ಷ ರೂ. ಬಹುಮಾನ ಹೊಂದಿರಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:

Asian Champions Trophy: ಗುರ್ಜೀತ್ ಕೌರ್ 5 ಗೋಲು! ಥಾಯ್ಲೆಂಡ್ ವಿರುದ್ಧ ಗೆದ್ದ ಭಾರತ ಮಹಿಳಾ ಹಾಕಿ ತಂಡ

ಶಾರ್ಟ್ಸ್, ಸ್ಪೋರ್ಟ್ಸ್​ ಬ್ರಾ ಧರಿಸಿದ್ದನ್ನು​ ನೋಡಿ ಕಣ್ಣರಳಿಸಿದ ಅಭಿಮಾನಿಗಳಿಗೆ ಖಡಕ್​ ಉತ್ತರ ನೀಡಿದ ಜಾನ್ವಿ ಕಪೂರ್​

Click on your DTH Provider to Add TV9 Kannada