Asian Champions Trophy: ಗುರ್ಜೀತ್ ಕೌರ್ 5 ಗೋಲು! ಥಾಯ್ಲೆಂಡ್ ವಿರುದ್ಧ ಗೆದ್ದ ಭಾರತ ಮಹಿಳಾ ಹಾಕಿ ತಂಡ

Asian Champions Trophy: ಭಾರತೀಯ ಮಹಿಳೆಯರು ತಮ್ಮ ಅದ್ಭುತ ಆಟ ಪ್ರದರ್ಶಿಸಿ ಥಾಯ್ಲೆಂಡ್ ತಂಡವನ್ನು 13-0 ಅಂತರದಿಂದ ಸೋಲಿಸಿದರು. ಈ 13 ಗೋಲುಗಳಲ್ಲಿ, ಡ್ರ್ಯಾಗ್-ಫ್ಲಿಕ್ಕರ್ ಗುರ್ಜಿತ್ ಕೌರ್ ಐದು ಗೋಲುಗಳನ್ನು ಗಳಿಸಿದರು.

Asian Champions Trophy: ಗುರ್ಜೀತ್ ಕೌರ್ 5 ಗೋಲು! ಥಾಯ್ಲೆಂಡ್ ವಿರುದ್ಧ ಗೆದ್ದ ಭಾರತ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Dec 05, 2021 | 3:06 PM

ಭಾರತ ಮಹಿಳಾ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಆರಂಭ ಮಾಡಿದೆ. ಭಾರತೀಯ ಮಹಿಳೆಯರು ತಮ್ಮ ಅದ್ಭುತ ಆಟ ಪ್ರದರ್ಶಿಸಿ ಥಾಯ್ಲೆಂಡ್ ತಂಡವನ್ನು 13-0 ಅಂತರದಿಂದ ಸೋಲಿಸಿದರು. ಈ 13 ಗೋಲುಗಳಲ್ಲಿ, ಡ್ರ್ಯಾಗ್-ಫ್ಲಿಕ್ಕರ್ ಗುರ್ಜಿತ್ ಕೌರ್ ಐದು ಗೋಲುಗಳನ್ನು ಗಳಿಸಿದರು. ಈ ಟೂರ್ನಿಯಲ್ಲಿ ರಾಣಿಗೆ ವಿಶ್ರಾಂತಿ ನೀಡಲಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮೊದಲ ನಿಮಿಷದಿಂದಲೇ ಪ್ರಾಬಲ್ಯ ಮೆರೆದ ಭಾರತ ತಂಡ ಕೊನೆಯವರೆಗೂ ಥಾಯ್ಲೆಂಡ್ ಮೇಲೆ ತನ್ನ ಪ್ರಾಬಲ್ಯ ಮೆರೆದಿತು. ಭಾರತ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದಿಟ್ಟ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಗಳಿಸಿತು. ಒಲಿಂಪಿಕ್ಸ್ ಬಳಿಕ ಭಾರತ ತಂಡದ ಮೊದಲ ಪಂದ್ಯ ಇದಾಗಿದೆ. ಭಾರತ ಒಂದೇ ಒಂದು ಗೋಲು ಗಳಿಸಲು ಥಾಯ್ಲೆಂಡ್‌ಗೆ ಅವಕಾಶ ನೀಡಲಿಲ್ಲ.

ಪಂದ್ಯದ ಎರಡನೇ ನಿಮಿಷದಲ್ಲಿ ಗುರ್ಜಿತ್ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿದರೆ, ಐದು ನಿಮಿಷಗಳ ನಂತರ ವಂದನಾ ಕಟಾರಿಯಾ ಎರಡನೇ ಗೋಲು ಗಳಿಸಿದರು. ಮೊದಲ ಕ್ವಾರ್ಟರ್‌ನ ಅಂತ್ಯದ ವೇಳೆಗೆ, ಲಿಲಿಮಾ ಮಿಂಜ್ 14 ನೇ ನಿಮಿಷದಲ್ಲಿ ಭಾರತದ ಮೂರನೇ ಗೋಲು ಗಳಿಸಿದರೆ, ಗುರ್ಜಿತ್ ಮತ್ತು ಜ್ಯೋತಿ 14 ನೇ ಗೋಲು ಗಳಿಸಿದರು. ಮತ್ತು 15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಗೋಲು ಗಳಿಸಿ ಸ್ಕೋರ್ 5-0 ಆಯಿತು. ಎರಡನೇ ಕ್ವಾರ್ಟರ್ ನಲ್ಲೂ ಭಾರತ ಪ್ರಾಬಲ್ಯ ಮುಂದುವರಿಸಿತು. ಹಾಕಿಯಲ್ಲಿ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ ರಾಜ್ವಿಂದರ್ ಕೌರ್ 16ನೇ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿದರೆ, ಗುರ್ಜಿತ್ 24ನೇ ನಿಮಿಷದಲ್ಲಿ ಮೂರನೇ ಗೋಲು ದಾಖಲಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಲಿಲಿಮಾ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು.

ಭಾರತ ಯಾವುದೇ ಅವಕಾಶ ನೀಡಲಿಲ್ಲ 25ನೇ ನಿಮಿಷದಲ್ಲಿ ಗುರ್ಜಿತ್ ಮತ್ತೊಂದು ಗೋಲು ಬಾರಿಸಿದರು, ವಿರಾಮದ ವೇಳೆಗೆ ಭಾರತ 9-0 ಮುನ್ನಡೆ ಸಾಧಿಸಿದರು. ಭಾರತ ಇನ್ನೂ ಥಾಯ್ಲೆಂಡ್‌ಗೆ ಯಾವುದೇ ಅವಕಾಶ ನೀಡಲಿಲ್ಲ ಮತ್ತು ನಿರಂತರವಾಗಿ ದಾಳಿ ಮಾಡಿತು. 36ನೇ ನಿಮಿಷದಲ್ಲಿ ಜ್ಯೋತಿ ಗೋಲು ಗಳಿಸಿ ಭಾರತದ ಗೋಲು ಎರಡಂಕಿಗೆ ತಲುಪಿದರೆ ಸೋನಿಕಾ 43ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು. ನಾಲ್ಕನೇ ಕ್ವಾರ್ಟರ್‌ನಲ್ಲೂ ಕಥೆ ಬದಲಾಗದೆ ಭಾರತ ದಾಳಿ ಮುಂದುವರಿಸಿತು. ಆದಾಗ್ಯೂ, ಥಾಯ್ಲೆಂಡ್ ಈ ಮಧ್ಯೆ ಕೆಲವು ಉತ್ತಮ ರಕ್ಷಣೆಯನ್ನು ಮಾಡಿತು. 55ನೇ ನಿಮಿಷದಲ್ಲಿ ಮೋನಿಕಾ ಗೋಲು ಗಳಿಸಿದರೆ, ಮೂರು ನಿಮಿಷಗಳ ನಂತರ ಪೆನಾಲ್ಟಿ ಕಾರ್ನರ್‌ನಲ್ಲಿ ಗುರ್ಜಿತ್ ತನ್ನ ಐದನೇ ಗೋಲು ಮತ್ತು ಭಾರತಕ್ಕೆ 13 ನೇ ಗೋಲು ಹೊಡೆದರು.

ಭಾರತದ ಪಯಣ ಹೀಗಿದೆ ಭಾರತ ವನಿತೆಯರ ತಂಡ ಇದುವರೆಗೆ ಒಮ್ಮೆ ಮಾತ್ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಂಡವು 2016 ರಲ್ಲಿ ಚೀನಾವನ್ನು 2-1 ಗೋಲುಗಳಿಂದ ಸೋಲಿಸಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಬಾರಿ ತಂಡದ ಆರಂಭದ ರೀತಿ ಹಾಗೂ ಟೋಕಿಯೊದಲ್ಲಿ ತಂಡದ ಪ್ರದರ್ಶನ ನೋಡಿದರೆ ಮತ್ತೊಮ್ಮೆ ತಂಡ ಈ ಟ್ರೋಫಿ ಗೆಲ್ಲುತ್ತದೆ ಎಂದು ನಿರೀಕ್ಷಿಸಬಹುದು. 2010ರಲ್ಲಿ ಭಾರತ ತಂಡ ಮೂರನೇ ಸ್ಥಾನ ಗಳಿಸಿತ್ತು. 2011ರಲ್ಲಿ ತಂಡ ನಾಲ್ಕನೇ ಸ್ಥಾನದಲ್ಲಿತ್ತು.

ಇದನ್ನೂ ಓದಿ:FIH Sports Awards: ಎಫ್‌ಐಎಚ್ ಪ್ರಶಸ್ತಿ ಪುರಸ್ಕಾರ; ಕ್ಲೀನ್ ಸ್ವೀಪ್ ಮಾಡಿದ ಭಾರತ ಮಹಿಳಾ-ಪುರುಷ ಹಾಕಿ ತಂಡ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ