ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆ ವೈದ್ಯನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 01, 2022 | 3:34 PM

ಖಾಸಗಿ ಆಸ್ಪತ್ರೆಯ ವೈದ್ಯ ಓರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಗೋಪಾಳದ ಮನೆಯಲ್ಲಿ ನಡೆದಿದೆ.

ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆ ವೈದ್ಯನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಡಾ. ಲೋಲಿತ್ (40) ಮೃತ ದುರ್ದೈವಿ.
Follow us on

ಶಿವಮೊಗ್ಗ: ಖಾಸಗಿ ಆಸ್ಪತ್ರೆಯ ವೈದ್ಯ (doctor) ಓರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಗೋಪಾಳದ ಮನೆಯಲ್ಲಿ ನಡೆದಿದೆ. ಡಾ. ಲೋಲಿತ್ (40) ಮೃತ ದುರ್ದೈವಿ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದರು. ಹೃದಯ ಸಂಬಂಧಿ ಖಾಯಿಲೆಯಿಂದ ವೈದ್ಯರು ಬಳಲುತ್ತಿದ್ದರು ಎನ್ನಲಾಗಿದೆ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆ ಹಿನ್ನಲೆ ಪತ್ನಿ‌ಯನ್ನ ಕೊಲೆಗೈದು ತಲೆಮರೆಸಿಕೊಂಡ ಆರೋಪಿ ಪತಿ ಅಂದರ್

ನೆಲಮಂಗಲ: ವರದಕ್ಷಿಣೆ ಹಿನ್ನಲೆ ಪತ್ನಿ‌ಯನ್ನ ಕೊಲೆಗೈದು ತಲೆಮರೆಸಿಕೊಂಡ ಆರೋಪಿ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ತಿಂಗಳ ನ. 21ರಂದು ನೆಲಮಂಗಲ ತಾಲೂಕಿನ ಭೂಸಂದ್ರದಲ್ಲಿ ಘಟನೆ ನೆಡೆದಿತ್ತು. ಪತ್ನಿ ಶೃತಿಯನ್ನ ಪತಿ ಕೃಷ್ಣಮೂರ್ತಿ (39) ಕೊಲೆಗೈದಿದ್ದ. ನೆಲಮಂಗಲ ಗ್ರಾಮಾಂತರ ಸಿಪಿಐ ರಾಜೀವ್ ತಂಡದಿಂದ ಬಂಧಿಸಲಾಗಿದೆ. ತುಮಕೂರಿನ ಹೊನ್ನಹಳ್ಳಿಯ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಾಗ ಅರೆಸ್ಟ್​​ ಮಾಡಲಾಗಿದೆ. ಪೊಲೀಸ್ ವಿಚಾರಣೆ ಬಳಿಕ ಆರೋಪಿ ಕೃಷ್ಣಮೂರ್ತಿಯನ್ನ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧ ಪ್ರಶ್ನಿಸಿದ್ದ ಗಂಡನನ್ನೇ ಮುಗಿಸಿದ ಪತ್ನಿ, ಪೊಲೀಸ್ ವಿಚಾರಣೆ ವೇಳೆ ಪ್ರಿಯಾಕರನನ್ನು ತಮ್ಮ ಅಂದಳು

ಸಾಲಬಾಧೆಗೆ ರೈತ ಮಹಿಳೆ ಆತ್ಮಹತ್ಯೆ

ಮೈಸೂರಿನ ಹುಣಸೂರು ತಾಲ್ಲೂಕು ಮುತ್ತುರಾಯನ ಹೊಸಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಮಹಿಳೆ ರತ್ನಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಹಾಗೂ ಟ್ರ್ಯಾಕ್ಟರ್ ಖರೀದಿಗಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸುಮಾರು 30 ಲಕ್ಷ ರೂ. ಸಾಲ ಪಡೆದಿದ್ದ ರತ್ನಮ್ಮ ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾರೆ. ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಕುವಿನಿಂದ ಇರಿದು ಪತಿಯಿಂದಲೆ ಪತ್ನಿಯ ಹತ್ಯೆ

ಬೆಂಗಳೂರು: ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಾವೇರಿ‌ ನಗರದಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ನಡೆದಿರುವಂಹ ಘಟನೆ ಹೊಸಕೋಟೆ ತಾಲೂಕಿನ ಕಾವೇರಿ‌ ನಗರದಲ್ಲಿ ನಡೆದಿದೆ. ಸ್ವಪ್ನ (22) ಮೃತ ಪತ್ನಿ. ಸುಧಾಕರ್​ ಹತ್ಯೆಗೈದ ಪತಿ. ಕಳೆದ 2 ವರ್ಷಗಳಿಂದ ದಂಪತಿ ದೂರವಾಗಿದ್ದರು. ಮೃತ ಮಹಿಳೆ ತವರು ಮನೆಗೆ ಬಂದು ಬದುಕು ಕಟ್ಟಿಕೊಂಡಿದ್ದರು.  ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಸುವನ್ನೂ ಬಿಡದ ಕಾಮುಕ, ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದವ ಅಂದರ್

ಬೈಕ್​ಗೆ ಟಾಟ ಏಸ್ ವಾಹನ ಡಿಕ್ಕಿ: ಓರ್ವ ಮಹಿಳೆ ಸಾವು

ಬೆಂಗಳೂರು: ಬೈಕ್​ಗೆ ಟಾಟ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರಿ ಸಾವನ್ನಪ್ಪಿರವಂತಹ ಘಟನೆ ಕೆ.ಆರ್.ಪುರಂ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಅಪಘಾತ ನಡೆದಿದೆ. ಶಾಲಿನಿ (27) ಸಾವನ್ನಪ್ಪಿದ ಮಹಿಳೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಘಟನೆ ನಡೆದಿದ್ದು, ಮುಂದೆ ಸಾಗುತ್ತಿದ್ದ ಬೈಕ್​ಗೆ​ ಹಿಂಬದಿಯಿಂದ ಟಾಟ ಏಸ್ ವಾಹನ ಬಂದು ಗುದ್ದಿದೆ. ಅಪಘಾತದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಶಾಲಿನಿ ಮೃತಪಟ್ಟರೆ, ಹಿಂಬದಿ ಸವಾರ ಅಲೆನ್ ಸ್ಮಿತ್​ಗೆ ಗಾಯವಾಗಿದೆ. ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನ ದಾಖಲಿಸಲಾಗಿತ್ತು. ಅಪಘಾತ ಬಳಿಕ ಬೈಕ್ ಬಿಟ್ಟು ಟಾಟ ಏಸ್ ಚಾಲಕ ತೆರಳಿದ್ದಾನೆ. ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.