ಶಿವಮೊಗ್ಗ, ಫೆಬ್ರವರಿ 17: ನಗರದಲ್ಲಿ ಮತ್ತೊಂದು ಅಗ್ನಿ ಅವಘಡ (fire accident) ಸಂಭವಿಸಿದೆ. ಒಂದು ವರ್ಷದ ಹಿಂದೆಯಷ್ಟೇ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಉದ್ಯಮಿಯೊಬ್ಬರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಶಿವಮೊಗ್ಗದ ಪ್ರತಿಷ್ಠಿತ ಕಾರ್ ಶೋ ರೂಂ (Car showroom) ಗೆ ಬೆಂಕಿ ಬಿದ್ದು ಕೋಟಿ ಕೋಟಿಗೂ ಅಧಿಕ ಕಾರ್ಗಳು ಬೆಂಕಿಗೆ ಆಹುತಿಯಾಗಿವೆ. ಶುಕ್ರವಾರ ರಾತ್ರಿ ಸುಮಾರು 9.30 ಆಸುಪಾಸಿನಲ್ಲಿ ನಗರದ ಶಂಕರ ಮಠದ ರಸ್ತೆಯ ರಾಹುಲ್ ಹುಂಡೈ ಕಾರ್ ಶೋ ರೂಂನಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದಿದೆ. ನೋಡು ನೋಡುತ್ತಿದ್ದಂತೆ ಶೋಂ ನಲ್ಲಿ ಗ್ರಾಹಕರಗೆ ನೋಡಲು ಇಟ್ಟಿದ್ದ ಒಳಗೆ ಎರಡು ಕಾರ್ಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ಪಕ್ಕದಲ್ಲಿ ಟಾಟಾ ಕಾರ್ ಶೋ ರೂಂ ಇದೆ. ಹುಂಡೈ ಶೋರೂಂ ಹತ್ತಿದ ಬೆಂಕಿಯು ಪಕ್ಕದ ಟಾಟಾ ಶೋ ಆವರಣದಲ್ಲಿ ನಿಲ್ಲಿಸಿದ್ದ ಸುಮಾರು ನಾಲ್ಕು ಕಾರ್ ಗಳು ಸುಟ್ಟು ಹೋಗಿವೆ. ಶೋ ರೂಂ ನಲ್ಲಿದ್ದ ಕಾರ್ಗೆ ಸಂಬಂಧಿಸಿದ ಬಿಡಿ ಭಾಗ ಮತ್ತು ಇತರೆ ವಸ್ತುಗಳು ಸೇರಿದಂತೆ ಒಟ್ಟು ಎರಡು ಕೋಟಿಗೂ ಅಧಿಕ ನಷ್ಟವಾಗಿದೆ.
ಸುಮಾರು ಮೂರು ಘಂಟೆಗೂ ಅಧಿಕಕಾಲ ಆಗ್ನಿಶಾಮಕ ಸಿಬ್ಬಂದಿ ಮತ್ತು ಅಧಿಕಾರಿಗಳು ಮೂರು ನಾಲ್ಕು ಅಗ್ನಿಶಾಮಕ ನಿರಂತರವಾಗಿ ಬಳಕೆ ಮಾಡಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹುಂಡೈ ಶೋರೂಂ ನಲ್ಲಿದ್ದ ಕಾರ್ ಮತ್ತು ಬಿಡಿ ಭಾಗಗಳು ಸುಟ್ಟು ಭಸ್ಮವಾಗಿವೆ. ಅಕ್ಕಪಕ್ಕದಲ್ಲಿ ಬಡಾವಣೆ ಮತ್ತು ಪೆಟ್ರೋಲ್ ಬಂಕ್ ಇದ್ದ ಹಿನ್ನಲೆಯಲ್ಲಿ ಸಾವಿರಾರು ಜನರು ಆತಂಕಗೊಂಡು ಮನೆಯಿಂದ ಹೊರಗೆ ಬಂದಿದ್ದರು. ಬಾಗಿಲು ಹಾಕಿದ ಶೋರೂಂ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಹೊತ್ತಿಕೊಂಡಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಶಿವಮೊಗ್ಗ ಅಗ್ನಿ ದುರಂತ: ಫೈರ್ ಎಂಜಿನ್ ತಡವಾಗಿ ಬಂದಿದ್ದಕ್ಕೆ ನಷ್ಟ ಮತ್ತು ಹಾನಿ ಹೆಚ್ಚಾಯಿತು: ಪ್ರತ್ಯಕ್ಷದರ್ಶಿ
ಸದ್ಯ ರಾಹುಲ್ ಹುಂಡೈ ಕಾರ್ ಶೋರೂಂ ನಲ್ಲಿ ಸದ್ಯ ಮೌನ ಆವರಿಸಿದೆ. ನಿತ್ಯ ನೂರಾರು ಗ್ರಾಹಕರು ಮತ್ತು ಉದ್ಯೋಗಸ್ಥರು ಚಟವಟಿಕೆಯಿಂದ ಕಂಡು ಬರುತ್ತಿತ್ತು. ಆದರೆ ನಿನ್ನೆ ಬೆಂಕಿಯ ಅವಘಡ ಬಳಿಕ ಶೋ ರೂಂನಲ್ಲಿ ಎಲ್ಲಿ ನೋಡಿದ್ರೂ ಸುಟ್ಟು ಕರಕಲಾಗಿರುವ ವಸ್ತುಗಳು ಕಂಡು ಬಂದಿವೆ. ರಾಹುಲ್ ಹುಂಡೈ ಮಾಲೀಕ ವಿದೇಶ ಪ್ರವಾಸದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಘಟನೆ ಪ್ರಮುಖ ಕಾರ ಮತ್ತು ನಿಖರವಾಗಿ ಆಗಿರುವ ನಷ್ಟದದ ಕುರಿತು ಸ್ಪಷ್ಟ ಮಾಹಿತಿಯು ಇನ್ನೂ ತನಿಖೆಯಿಂದ ಹೊರಬೀಳಬೇಕಿದೆ.
ನಗರದಲ್ಲಿ ಅಗ್ನಿ ಅವಘಡಗಳು ನಡೆದರೆ ಸೂಕ್ತ ಮುಂಜಾಗ್ರತೆಗಳನ್ನು ಕಾರ್ ಶೋ ರೂಂ ಮಾಲೀಕರು ಹೊಂದಿರಬೇಕು. ಆದರೆ ನಿನ್ನೆ ಆಕಸ್ಮಿಕ ಬೆಂಕಿ ಬಳಿಕ ಅಗ್ನಿಶಾಮಕ ಸಿಬ್ಬಂದಿ ಶೋರೂಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಯಾವುದೇ ಸುರಕ್ಷತಾ ಕ್ರಮಗಳನ್ನು ವಹಿಸಿಸದೇ ಇರುವುದು ಕಂಡುಬಂದಿದೆ. ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದರೆ ಯಾವ ರೀತಿಯಲ್ಲಿ ಬೆಂಕಿ ನಂದಿಸಬೇಕು. ಅದಕ್ಕೆ ಶೋ ರೂಂನಲ್ಲಿ ಯಾವೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ ಹುಂಡೈ ಶೋರ ರೂಂ ಮಾಲೀಕರು ಮಾತ್ರ ಅಗ್ನಿಅವಘಡಗಳಾದರೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎನ್ನುವುದು ಅಗ್ನಿಶಾಮಕ ಅಧಿಕಾರಿಗಳು ಸಿಬ್ಬಂದಿಗಳು ನಿನ್ನೆ ಬೆಂಕಿ ನಂದಿಸುವ ಸಮಯದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: ಹುಂಡೈ ಕಾರು ಶೋ ರೂಮ್ನಲ್ಲಿ ಅಗ್ನಿ ದುರಂತ, ಕೋಟ್ಯಾಂತರ ರೂ ಬೆಲೆಬಾಳುವ ವಾಹನಗಳು ಭಸ್ಮ
ಹೀಗೆ ಕೋಟಿ ಕೋಟಿ ನಷ್ಟ ಅಗ್ನಿಅವಘಡದಿಂದ ಸಂಭವಿಸಿದೆ. ಕೋಟ್ಯಾಂತರ ವ್ಯಾಪಾರ ವಹಿವಾಟು ಮಾಡುವ ಕಾರ್ ಶೋಂ ಮಾಲೀಕರು ಸ್ವಲ್ಪ ಬೇಜಾಬ್ದಾರಿ ತೋರಿದ್ದು, ಅಕ್ಕಪಕ್ಕದ ವಿವಿಧ ಕಾರ್ ಬೈಕ್ ಶೋರೂಂ ಮತ್ತು ಜನವಸತಿ ಪ್ರದೇಶದ ಜನರಿಗೆ ದೊಡ್ಡ ಆತಂಕ ಮೂಡಿಸಿತ್ತು. ಇದೇ ಬೆಂಕಿ ಅನಾಹುತವು ತಡರಾತ್ರಿ ಆಗಿದ್ದರೇ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಸದ್ಯ ಅಕ್ಕಪಕ್ಕದವರು ಕಾರ್ ಶೋಂ ನಲ್ಲಿ ಬೆಂಕಿ ಬಿದ್ದಿರುವುದು ನೋಡಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ನಿನ್ನೆ ರಾತ್ರಿಯಿಡೀ ಕಾರ್ ಶೋ ರೂಂ ಪಕ್ಕಪಕ್ಕದ ಬಡಾವಣೆಯ ಜನರು ಜಾಗರಣೆ ಮಾಡಿದ್ದಾರೆ. ಒಂದು ಶೋ ರೂಂ ಪಕ್ಕದಲ್ಲಿ ಮತ್ತೊಂದು ಇದೆ. ಈ ಹಿನ್ನಲೆಯಲ್ಲಿ ಆರಂಭದಲ್ಲಿ ಬೆಂಕಿಕೆನ್ನಾಗಲಿಗೆ ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದರು. ಈ ಘಟನೆ ಬಳಿಕ ಸ್ಥಳೀಯರಲ್ಲೂ ಅಗ್ನಿ ದುರ್ಘಟನೆಗಳ ಕುರಿತು ಭಯ ಶುರುವಾಗಿದೆ.
ಅಗ್ನಿ ಅವಘಡಗಳು ಸಂಭವಿಸಿದರೆ ಕೂಡಲೇ ಮನೆ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಸುರಕ್ಷತಾ ಕ್ರಮಗಳ ಮತ್ತು ಅಗ್ನಿಶಾಮಕ ಸೂಚನೆಯಂತೆ ಒಂದಿಷ್ಟು ವ್ಯವಸ್ಥೆ ಮಾಡಿಕೊಂಡಿರಬೇಕು. ಇದರಿಂದ
ಕೂಡಲೇ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳಿಗೆ ಅನುಕೂಲವಾಗುತ್ತದೆ. ದೊಡ್ಡ ದುರಂತವನ್ನು ಈ ಮೂಲಕ ತಪ್ಪಿಸಬಹುದು. ಆದರೆ ನಿನ್ನೆ ಹುಂಡೈ ಶೋ ರೂಂನಲ್ಲಿ ಅಗ್ನಿಶಾಮಕ ನಿಯಂತ್ರಣಕ್ಕೆ
ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದು ಎಲ್ಲರಿಗೂ ಅಚ್ಚರಿಮೂಡಿಸಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ ಎರಡು ಕೋಟಿಗೂ ಅಧಿಕ ನಷ್ಟವಾಗಿದೆ. ಇನ್ನಾದರೂ ನಗರದಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆ ಮತ್ತು ಮನೆಗಳಲ್ಲಿ ಅಗ್ನಿಶಾಮಕ ಇಲಾಖೆ ಸೂಚನೆಯಂತೆ ಸುರಕ್ಷತಾ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.