AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pragya Singh Thakur: ಕ್ರೈಸ್ತ ಮಿಶನರಿ ಶಾಲೆಯಲ್ಲಿ ಕಲಿತ ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಾರೆ: ಪ್ರಜ್ಞಾ ಸಿಂಗ್ ಠಾಕೂರ್

ಮಕ್ಕಳನ್ನು ಕ್ರೈಸ್ತ ಮಿಶನರಿ ಶಾಲೆಗೆ ಕಳುಹಿಸಬೇಡಿ. ಅಲ್ಲಿ ಕಲಿತ ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಾರೆ ಎಂದು ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ನೀಡಿದ್ದಾರೆ.

Pragya Singh Thakur: ಕ್ರೈಸ್ತ ಮಿಶನರಿ ಶಾಲೆಯಲ್ಲಿ ಕಲಿತ ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಾರೆ: ಪ್ರಜ್ಞಾ ಸಿಂಗ್ ಠಾಕೂರ್
ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ (ಸಂಗ್ರಹ ಚಿತ್ರ) Image Credit source: siasat.com
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 25, 2022 | 7:09 PM

Share

ಶಿವಮೊಗ್ಗ: ಮಕ್ಕಳನ್ನು ಕ್ರೈಸ್ತ ಮಿಶನರಿ ಶಾಲೆಗೆ (Christian missionary school) ಕಳುಹಿಸಬೇಡಿ. ಅಲ್ಲಿ ಕಲಿತ ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಾರೆ ಎಂದು ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಇಂದು (ಡಿ. 25) ಆಯೋಜಿಸಿದ್ದ ಹಿಂದೂ ಜಾಗರಣ ಸಮಾವೇಶದಲ್ಲಿ ಅವರು  ಮಾತನಾಡಿ, ರಾಮನ ಮರ್ಯಾದೆ, ಸೀತೆಯ ತ್ಯಾಗ, ದ್ರೌಪದಿಯ ಹಠ ಪಣ ಎಲ್ಲರಿಗೂ ಮಾದರಿ ಆಗಬೇಕು. ನಡೆದಾಡುವ ಆಟೋಬಾಂಬ್ ನೀವು ಆಗಬೇಕು. ಯಾರಾದರೂ ತಂಟೆಗೆ ಬಂದ್ರೆ ಅವರಿಗೆ ತಕ್ಕ ಪಾಠ ಕಲಿಸಬೇಕು. ಲವ್ ಜಿಹಾದ್​ಗೆ ಮಹಿಳಾ ಶಕ್ತಿ ಉತ್ತರ ಕೊಡಬೇಕು. ಮಹಿಳೆಯರಿಗೆ ಅಣ್ಣ ತಮ್ಮಂದಿರು ಸಾಥ್ ಕೊಡಬೇಕು. ಲವ್ ಜಿಹಾದ್​ನಿಂದ ದೇಶದ ಮಹಿಳೆಯರನ್ನು ರಕ್ಷಣೆ ಮಾಡಬೇಕು. ಜೀವ ಉಳಿಸಲು ಬದ್ಧ, ಜೀವ ತೆಗೆಯಲು ನಾವು ಸಿದ್ಧ ಎಂದು ಹೇಳಿದರು.

ಹಿಂದುತ್ವಕ್ಕಾಗಿ ಶಿವಮೊಗ್ಗದಲ್ಲಿ ಅನೇಕರ ಬಲಿದಾನವಾಗಿದೆ

ಹಿಂದುತ್ವಕ್ಕಾಗಿ ಶಿವಮೊಗ್ಗದಲ್ಲಿ ಅನೇಕರ ಬಲಿದಾನ ಆಗಿದೆ. ಹಿಂದೂ ಪರ ಸಂಘಟನೆಯ ಶಿವಮೂರ್ತಿ, ವಿಶ್ವನಾಥ್ ಶೆಟ್ಟಿ, ಗೋವಿಂದ ರಾಜ್ ಗೋಕುಲ್, ಹರ್ಷ, ಪ್ರವೀಣ ನೆಟ್ಟೂರು, ಪ್ರಶಾಂತ ಮೂಡಬಿದ್ರೆ, ರುದ್ರೇಶ್, ಪುಟ್ಪಪ್ಪ, ಸೌಮ್ಯ ಭಟ್​ ಅನೇಕರನ್ನು ಇದೇ ಮೊಗಲ ಹೇಡಿಗಳು ಹತ್ಯೆ ಮಾಡಿದ್ಥಾರೆ ಎಂದು ನಿಷೇಧಿತ ಪಿಎಫ್ಐ ವಿರುದ್ದ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್​ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್​ಗೆ ದಾವೂದ್ ಇಬ್ರಾಹಿಂ ಸಹೋದರನ ಬಳಗದ ವ್ಯಕ್ತಿಯಿಂದ ಕೊಲೆ ಬೆದರಿಕೆ, ದೂರು ದಾಖಲು

ಈಗ ಸಾಯುವ ಸಮಯವಲ್ಲ, ಕೊಲ್ಲುವ ಸಮಯ

ಮುಸ್ಲಿಮರು ಸೈನ್ಯಕ್ಕೆ ಹೋದರೂ ಅವರಿಗೆ ದೇಶಾಭಿಮಾನ ಇರಲ್ಲ. ಈಗ ಸಾಯುವ ಸಮಯ ಅಲ್ಲ. ಈಗ ಅವರನ್ನು ಕೊಲ್ಲುವ ಸಮಯ ಶುರುವಾಗಿದೆ. ಹಿಂದೂಗಳ ಸಮಸ್ಯೆ ಮತ್ತು ಅವರ ಪರ ನಾನು ಧ್ವನಿ ಎತ್ತುತ್ತೇನೆ. ಸನಾತನ ಧರ್ಮದ ರಕ್ಷಣೆಗಾಗಿ ಉಸಿರು ಇರುವವರೆಗೆ ಹೋರಾಟ ಮಾಡುತ್ತೇನೆ. ಸನ್ಯಾಸಿ ಯಾವತ್ತೂ ಸಾಯುವುದಿಲ್ಲ. ಸನಾತನ ಧರ್ಮದಲ್ಲಿ ಪುನರ್ ಜನ್ಮವಿದೆ ಎಂದರು.

ಸನ್ಯಾಸಿ ಯಾವತ್ತೂ ಸಾಯುವುದಿಲ್ಲ

ನನಗೆ ನಿತ್ಯ ನೂರೆಂಟು ಜೀವ ಬೆದರಿಕೆ ಕರೆಗಳು ಬರುತ್ತೇವೆ. ಎದುರಿಗೆ ಬನ್ನಿ ಹೇಡಿಗಳಿಗೆ ಅವಾಗ ಗೊತ್ತಾಗುತ್ತದೆ ಸಾದ್ವಿ ಯಾರು ಎನ್ನುವುದು ಎಂದರು. ನಾರಿ ಶಕ್ತಿ ಆಗಿ ಸನ್ಯಾಸಿನಿ ಆಗಿ ನಾನು ಮಾತನಾಡುತ್ತಿರುವೆ. ರಾಜಕೀಯ ಮೇಲೆ ಯಾವುದೇ ಭರವಸೆ ಇಲ್ಲ. ಸನ್ಯಾಸಿ ಯಾವತ್ತೂ ಸಾಯುವುದಿಲ್ಲ. ದೇಶದ ಮುಕುಟು ಕತ್ತರಿಸಲು ಬಿಡುವುದಿಲ್ಲ. ಕಾಂಗ್ರೆಸ್​ನವರಿಗೆ ಅದು ಭೂಮಿ ತುಂಡು ಮಾತ್ರ ಆಗಿದೆ. ಆದರೆ ನಮಗೆ ಅದು ಭೂತಾಯಿ ಎಂದು ಕಿಡಿಕಾರಿದರು.

ಇದನ್ನೂ ಓದಿ: Sadhvi Pragya: ಸತ್ಯ ಹೇಳೋದು ದಂಗೆಯೇ?; ನೂಪುರ್ ಶರ್ಮಾಗೆ ಸಾಧ್ವಿ ಪ್ರಜ್ಞಾ ಠಾಕೂರ್ ಬೆಂಬಲ

ಪ್ರಧಾನಿ ಮೋದಿ ಹಾಡಿ ಹೊಗಳಿದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್

ಇದು ಹಿಂದೂ ರಾಷ್ಟ್ರ, ಮುಂದೆಯೂ ಹಿಂದೂ ರಾಷ್ಟ್ರವೇ ಆಗಿರುತ್ತೆ. ಈ ಹಿಂದೆ ಅಮೆರಿಕ ನರೇಂದ್ರ ಮೋದಿಗೆ ವೀಸಾವನ್ನೇ ಕೊಟ್ಟಿರಲಿಲ್ಲ. ಅದೇ ಅಮೆರಿಕ ಈಗ ದೋಸ್ತಿಗೆ ಮುಂದಾಗಿದೆ. ವಿಶ್ವದ ಅನೇಕ ದೇಶಗಳಿಗೆ ಈಗ ಭಾರತವೇ ಸಹಾಯ ಮಾಡುತ್ತಿದೆ. ಭಾರತೀಯ ಸೇನೆ ಪಾಕ್​​​ಗೆ ನುಗ್ಗಿ ಶತ್ರುಗಳನ್ನು ಹೊಡೆಯುತ್ತಿದೆ ಎಂದು ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್.​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:02 pm, Sun, 25 December 22