ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ಗೆ ದಾವೂದ್ ಇಬ್ರಾಹಿಂ ಸಹೋದರನ ಬಳಗದ ವ್ಯಕ್ತಿಯಿಂದ ಕೊಲೆ ಬೆದರಿಕೆ, ದೂರು ದಾಖಲು
ಮುಸ್ಲಿಮರ ವಿರುದ್ಧ ವಿಷಬೀಜ ಹರಿಡಿದ ಹಿನ್ನೆಲೆ ಭೋಪಾಲ್ನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಶನಿವಾರ ಕೊಲೆ ಬೆದರಿಗೆ ಕರೆ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
![ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ಗೆ ದಾವೂದ್ ಇಬ್ರಾಹಿಂ ಸಹೋದರನ ಬಳಗದ ವ್ಯಕ್ತಿಯಿಂದ ಕೊಲೆ ಬೆದರಿಕೆ, ದೂರು ದಾಖಲು](https://images.tv9kannada.com/wp-content/uploads/2022/06/New-Project-2022-06-18T183156.410.jpg?w=1280)
ಭೋಪಾಲ್: ಮುಸ್ಲಿಮರ ವಿರುದ್ಧ ವಿಷಬೀಜ ಹರಿಡಿದ ಹಿನ್ನೆಲೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಅವರಿಗೆ ಶುಕ್ರವಾರ ರಾತ್ರಿ ಕೊಲೆ ಬೆದರಿಗೆ ಕರೆ ಬಂದಿದ್ದು, ಈ ಬಗ್ಗೆ ಸಂಸದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾನು ದಾವೂದ್ ಇಬ್ರಾಹಿಂ (Dawood Ibrahim)ನ ಸಹೋದರ ಇಕ್ಬಾಲ್ ಕಸ್ಕರ್ನ ಜನ ಎಂದು ಹೇಳಿಕೊಂಡು ದೂರವಾಣಿ ಕರೆ ಮಾಡಿದ ವ್ಯಕ್ತಿ, ಮುಸ್ಲಿಮರ ವಿರುದ್ಧ ವಿಷಬೀಜ ಹರಡಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ (Threat) ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: Kabul Blast: ಕಾಬೂಲ್ನ ಗುರುದ್ವಾರದಲ್ಲಿ ಐಎಸ್ ಉಗ್ರರಿಂದ ಭಾರೀ ಸ್ಫೋಟ; ಹಲವರು ಸಾವನ್ನಪ್ಪಿರುವ ಶಂಕೆ
ಎರಡು ನಿಮಿಷಗಳ ಕಾಲ ನಡೆಯುವ ಒಂದು ಉದ್ದೇಶಿತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಭೋಪಾಲ್ ಲೋಕಸಭಾ ಕ್ಷೇತ್ರದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಅನಾಮಿಕ ವ್ಯಕ್ತಿಯ ನಡುವೆ ನಡೆದ ಸಂಭಾಷಣೆಯನ್ನು ತೋರಿಸುತ್ತದೆ. ಜೀವಬೆದರಿಕೆ ಕರೆ ಬಂದ ಬಗ್ಗೆ ಶನಿವಾರ ಮುಂಜಾನೆ ಸಂಸದೆ ಠಾಕೂರ್ ಅವರು ಟಿ.ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ ಸಂಸದರಿಗೆ ಅನಾಮಧೇಯ ಕರೆ ಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮೆಕ್ಸಿಕೋದಲ್ಲಿ ತೀರ್ಥಯಾತ್ರೆಗೆ ತೆರಳಿದ್ದ ಬಸ್ ಅಪಘಾತ; 9 ಭಕ್ತರು ಸಾವು, 40 ಜನರಿಗೆ ಗಾಯ
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Sat, 18 June 22