ಹಾಸನ: ಕ್ಯಾಂಟರ್ ಹಾಗೂ ಮಾರುತಿ-800 ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ (Accident) ವೊಂದು ಸಂಭವಿಸಿದ್ದು, ತಂದೆ ಮಗ ಸೇರಿ ಮೂವರು ಧಾರುಣ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಆಲೂರು ತಾಲ್ಲೂಕಿನ ಆಲೂರು ಈಶ್ವರಹಳ್ಳಿ ಕೂಡಿಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮುಂಜಾನೆ 4-30 ರ ಸುಮಾರಿನಲ್ಲಿ ಭೀಕರ ಘಟನೆ ನಡೆದಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ. ತಮಿಳುನಾಡು ಮೂಲದ ಅಂಜನಪ್ಪ (40), ಕಾರ್ತಿಕ್ (17) ಮೃತಪಟ್ಟ ತಂದೆ ಮಗ. ಪುನೀತ್(15), ಕಾರ್ತಿಕ್ (19), ರಾಮಚಂದ್ರ (40)ರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಆಲೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಓವರ್ ಟೇಕ್ ಮಾಡಲು ಹೋಗಿ ಬೈಕ್ ಅಪಘಾತ: ಬೈಕ್ ಸವಾರ ಸಾವು
ಚಿಕ್ಕಬಳ್ಳಾಫುರ: ಓವರ್ ಟೇಕ್ ಮಾಡಲು ಹೋಗಿ ಬೈಕ್ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ನಂದಿಗಿರಿಧಾಮ ಬೆಟ್ಟದ ಕ್ರಾಸ್ ಬಳಿ ನಡೆದಿದೆ. ನಂದಿಗಿರಿಧಾಮ ಪ್ರವಾಸಕ್ಕೆ ಯುವಕರು ಬಂದಿದ್ದು, ಬೆಂಗಳೂರು ಮೂಲದ ಕೆ.ಎ 05, ಎಲ್ ಕೆ 0808 ನಂಬರ್ ಬೈಕ್ನಲ್ಲಿ ಯುವಕರು ಆಗಮಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಗಿರಿಧಾಮದ ರಸ್ತೆಯಲ್ಲಿ ಟ್ರಾಪೀಕ್ ಜಾಮ್ ಇದ್ರೂ ಓವರ್ ಟೇಕ್ ಮಾಡಿದ್ದಾರೆ. ಗಾಯಾಳುಗಳನ್ನು 108 ಅಂಬುಲೇನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಟ್ಯಾಂಕರ್ಗೆ ಕಾರು ಡಿಕ್ಕಿಯಾಗಿ ಇಬ್ಬರು ಯುವತಿಯರ ಸಾವು
ಮೈಸೂರು: ನಿಯಂತ್ರಣ ಕಳೆದುಕೊಂಡು ಟ್ಯಾಂಕರ್ಗೆ ಕಾರು ಡಿಕ್ಕಿಯಾಗಿ ಇಬ್ಬರು ಯುವತಿಯರು ಸ್ಥಳದಲ್ಲೇ ಮೃತಪಟ್ಟಿರುವಂತಹ ದಾರುಣ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದ ಬಳಿ ಸಂಭವಿಸಿದೆ. ಕಾರಿನಲ್ಲಿದ್ದ ಜೀವಿತಾ(24), ಪ್ರತೀಕ್ಷಾ(24) ಮೃತ ಯುವತಿಯರು. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತನ್ನ ಮಗುವನ್ನು ಬೇರೆಯವರಿಗೆ ಕೊಟ್ಟು ಡ್ರಾಮ ಮಾಡಿದ್ದ ತಾಯಿ ಬಂಧನ!
ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ರಾಯಚೂರು: ಬಟ್ಟೆ ತೊಳೆಯೊ ನೀರು ಸಿಡಿಯೊ ವಿಚಾರಕ್ಕೆ ವ್ಯಕ್ತಿ ಕೊಲೆ ಪ್ರಕರಣ ಜಿಲ್ಲೆಯ ಸಿರವಾರ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಶರಣಪ್ಪ ಹಾಗೂ ಆತನ ಮಗ ಅಂಬರೀಶ್ ಬಂಧಿತರು. ಇದೇ ಜೂನ್ 15 ರಂದು ಕೊಲೆ ನಡೆದಿತ್ತು. ಕೋಟೆ ಬಸವರಾಜ್ ಅನ್ನೋನನ್ನು ಕಲ್ಲು, ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿದೆ. ದಾಯಾದಿಗಳಾದ ಶರಣಪ್ಪ, ಆತನ ಮಕ್ಕಳಾದ ಅಂಬರೀಶ್, ಚನ್ನಬಸು, ಚಂದಣ್ಣ ಸೇರಿ ಆರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಶರಣಪ್ಪನ ಕುಟುಂಬಸ್ಥರು ಬಟ್ಟೆ ತೊಳೆಯೊ ನೀರು ಸಿಡಿಯೋ ಬಗ್ಗೆ ಬಸವರಾಜ್ ಕಿಡಿಕಾರಿದ್ದು, ಇದೇ ಕಾರಣಕ್ಕೆ ಕಾರಹುಣ್ಣಿಮೆಯಂದು ಬಸವರಾಜ್ ಕೊಲೆಯಾಗಿದೆ. ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ.