ಕಾಂಗ್ರೆಸ್ ಕೆಲ ಸೀಟ್ ಗೆಲ್ಲುವುದಕ್ಕೆ ಅವಕಾಶ ನೀಡಿದೆ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ

ಕಾಂಗ್ರೆಸ್ ಕೆಲ ಸೀಟ್ ಗೆಲ್ಲುವುದಕ್ಕೆ ಅವಕಾಶ ನೀಡಿದೆ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ

ಕಾಂಗ್ರೆಸ್ ಕೆಲ ಸೀಟ್ ಗೆಲ್ಲುವುದಕ್ಕೆ ಅವಕಾಶ ನೀಡಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಎಲ್ಲಿ ಬಿಜೆಪಿಗೆ ವ್ಯತ್ಯಾಸವಾಗಿದೆ ಅಲ್ಲಿ ಸರಿಪಡಿಸುತ್ತೇವೆ ಎಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ವಿಚಾರಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

TV9kannada Web Team

| Edited By: preethi shettigar

Jan 01, 2022 | 2:51 PM

ಶಿವಮೊಗ್ಗ: ಚುನಾವಣೆ ಅಂದ ಮೇಲೆ ಕಾಂಗ್ರೆಸ್ ಬದುಕಿರಬೇಕಲ್ಲವೇ. ನಮಗೆ ವಿರೋಧ ಪಕ್ಷವೇ ಇಲ್ಲ ಅಂದರೆ ಗತಿಯೇನು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಇರಬೇಕು. ಕಾಂಗ್ರೆಸ್ (Congress) ಕೆಲ ಸೀಟ್ ಗೆಲ್ಲುವುದಕ್ಕೆ ಅವಕಾಶ ನೀಡಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಎಲ್ಲಿ ಬಿಜೆಪಿಗೆ ವ್ಯತ್ಯಾಸವಾಗಿದೆ ಅಲ್ಲಿ ಸರಿಪಡಿಸುತ್ತೇವೆ ಎಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ (local body election) ಫಲಿತಾಂಶ ವಿಚಾರಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದವರನ್ನು ಹುಡುಕಬೇಕು: ಸಚಿವ ವಿ.ಸುನಿಲ್ ಕುಮಾರ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದವರನ್ನು ಹುಡುಕಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಹುಡುಕಬೇಕೆಂದು ಶಿವಮೊಗ್ಗದಲ್ಲಿ ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಬಳಿಕ ಮಾತಾಡಿದ ಅವರು, ನಿರಂತರ ಜ್ಯೋತಿ ಯೋಜನೆ 2017ರಲ್ಲಿ ರಾಜ್ಯಕ್ಕೆ ಮಂಜೂರು ಆಗಿತ್ತು. ಇದು ಶಿವಮೊಗ್ಗ ಜಿಲ್ಲೆಗೆ ಮಂಜೂರಾದ 220 ಕೋಟಿ ರೂಪಾಯಿ ಯೋಜನೆಯಾಗಿತ್ತು. ಯೋಜನೆ ಕಾಮಗಾರಿ ಎಲ್ಲ ಹಂತದಲ್ಲೂ ಲೋಪದೋಷವಾಗಿದೆ. ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಹಳ್ಳ ಹಿಡಿದಿದೆ ಎಂದು ಇಂಧನ ಇಲಾಖೆ ವೈಫಲ್ಯ ಬಹಿರಂಗಪಡಿಸಿದ್ದಾರೆ.

ಕಾರ್ಮಿಕ ಇಲಾಖೆಯ ಅಧಿಕಾರಿಗಳು ನಿಯಾವಳಿ ಪಾಲಿಸಿಲ್ಲ. ಕೇಂದ್ರದ ಯೋಜನೆಗೆ ಪ್ರಧಾನಿ ಭಾವಚಿತ್ರ ಹಾಕಬೇಕಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವನ್ನೇ ಹಾಕಿಲ್ಲ. 24 ಗಂಟೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಮೆಸ್ಕಾಂ ಎಂಡಿ ಪ್ರಶಾಂತ್‌ಗೆ ಸಚಿವ ವಿ.ಸುನಿಲ್ ಕುಮಾರ್ ಸೂಚಿಸಿದ್ದಾರೆ.

24 ಘಂಟೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಇಂಧನ ಇಲಾಖೆ ಕಾರ್ಯದರ್ಶಿ  ಜೊತೆ ಚರ್ಚಿಸಿ ಎಸಿಬಿ ಅಥವಾ ಇಲಾಖೆ ಅಥವಾ ಇತರೆ ತನಿಖೆಯ ಮೂಲಕ ಈ ಕುರಿತು ನಿರ್ಧಾರ ಮಾಡಲಾಗುತ್ತದೆ. ಈ ತನಿಖೆ ಮೂಲಕ ಎಲ್ಲ ಅವ್ಯವಹಾರ ಬಯಲಿಗೆ ಬರಲಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: 

ಬೆಂಗಳೂರು: ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಿಗೆ, ಕಾಂಗ್ರೆಸ್​ಗೆ ಜಿಗಣಿ, ಬಿಜೆಪಿಗೆ ಚಂದಾಪುರ ಪುರಸಭೆ

ಮೂರು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ಸಾಧ್ಯತೆ: ಸಚಿವ ಕೆಎಸ್ ಈಶ್ವರಪ್ಪ

Follow us on

Related Stories

Most Read Stories

Click on your DTH Provider to Add TV9 Kannada