Shivamogga: ರೈತನ ಜಮೀನು ಒತ್ತುವರಿ, ಪರಿಹಾರ ನೀಡದ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಜಪ್ತಿಗೆ ಕೋರ್ಟ್ ಆದೇಶ

TV9kannada Web Team

TV9kannada Web Team | Edited By: Kiran Hanumant Madar

Updated on: Jan 20, 2023 | 8:47 PM

ರೈತರ ಭೂಮಿಗೆ ನೀರು ಹರಿಸಲು ತುಂಗಾ ಕಾಲುವೆಗೆ ಜಮೀನು ನೀಡಿದ ರೈತರನಿಗೆ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ. ಆತ ಹೆಚ್ಚುವರಿ ಪರಿಹಾರಕ್ಕೆ ಕೋರ್ಟ್ ಮೊರೆ ಹೋಗಿದ್ದು, ಹೆಚ್ಚುವರಿ ಪರಿಹಾರ ನೀಡುವಂತೆ ಭೂ ಸ್ವಾಧೀನಾಧಿಕಾರಿಗಳಿಗೆ ಕೋರ್ಟ್ ಆದೇಶದ ಮಾಡಿತ್ತು. ಆದರೆ ಭೂಸ್ವಾಧೀನಾಧಿಕಾರಿಗಳು ಮಾತ್ರ ಪರಿಹಾರ ನೀಡದೇ ಸತಾಯಿಸುತ್ತಿದ್ದರು. ಇದೀಗ ಅಧಿಕಾರಿಗಳ ಬೇಜಾಬ್ದಾರಿಗೆ ಕೋರ್ಟ್ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡುವ ಮೂಲಕ ಖಡಕ್ ಎಚ್ಚರಿಕೆ ಕೊಟ್ಟಿದೆ.

Shivamogga: ರೈತನ ಜಮೀನು ಒತ್ತುವರಿ, ಪರಿಹಾರ ನೀಡದ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಜಪ್ತಿಗೆ ಕೋರ್ಟ್ ಆದೇಶ
ಕಚೇರಿ ಜಪ್ತಿಗೆ ಆದೇಶ ನೀಡಿದ ಕೋರ್ಟ್​

ಶಿವಮೊಗ್ಗ: ನಗರದ ತಹಶೀಲ್ದಾರ್ ಕಚೇರಿಯ ಕಟ್ಟಡದಲ್ಲಿರುವ ತುಂಗಾ ಮೇಲ್ಡಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯನ್ನ ಕೋರ್ಟ್​ ಆದೇಶದಂತೆ ಜಪ್ತಿ ಮಾಡಲಾಗಿದೆ. ತುಂಗಾ ಕಾಲುವೆಗೆ ತನ್ನ ಜಮೀನು ಕಳೆದುಕೊಂಡಿದ್ದ ರೈತ ವೆಂಕಟೇಶ್​ಗೆ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ. ಆತ ಶಿವಮೊಗ್ಗದ ಸಿವಿಲ್ ಕೋರ್ಟ್ ಮೊರೆ ಹೋಗಿದ್ದನು. ಕೋರ್ಟ್ ವೆಂಕಟೇಶ್​ಗೆ 2.40 ಕೋಟಿ ರೂಪಾಯಿ ಪರಿಹಾರದ ಆದೇಶ ಮಾಡಿತ್ತು. ಆದರೆ ಭೂ ಸ್ವಾಧೀನ ಅಧಿಕಾರಿಗಳು ಪರಿಹಾರ ನೀಡದೇ ಕೋರ್ಟ್ ಅದೇಶದ ಉಲ್ಲಂಘನೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಂದು(ಜ.18) ಕೋರ್ಟ್ ಸಿಬ್ಬಂದಿ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಪಿಠೋಪಕರಣಗಳು ಮತ್ತು ಕಂಪ್ಯೂಟರ್ ಜಪ್ತಿಗೆ ಆದೇಶದ ಮಾಡಿದ್ದರು.

ಶಿವಮೊಗ್ಗ ತಾಲೂಕಿನ ಅನುಪಿಕಟ್ಟೆ ಗ್ರಾಮದ ಸರ್ವೇ ನಂ. 75ರಲ್ಲಿ 1997 ರಲ್ಲಿ ವೆಂಕಟೇಶ್ ಎಂಬುವರ ಐದೂವರೆ ಎಕರೆ ಜಾಗವನ್ನ ತುಂಗಾ ಮೇಲ್ಡಂಡೆ ಯೋಜನೆಗೆ ಭೂ ಸ್ವಾಧೀನಪಡಿಸಿಕೊಂಡಿತ್ತು. ಆಗ ಅವರಿಗೆ ಎಕರೆಗೆ 3 ಲಕ್ಷ ರೂ ಪರಿಹಾರ ನೀಡಿತ್ತು. ಆದರೆ ವೆಂಕಟೇಶ್ ಹೆಚ್ಚಿನ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಶಿವಮೊಗ್ಗದ ಸಿವಿಲ್ ಕೋರ್ಟ್ 2 ಕೋಟಿ 40 ಲಕ್ಷ ರೂ ಹೆಚ್ಚುವರಿ ಪರಿಹಾರ ನೀಡಲು ಆದೇಶ ಮಾಡಿತ್ತು. ಆದರೆ ಭೂ ಸ್ವಾಧೀನ ಅಧಿಕಾರಿಗಳು ಕೋರ್ಟ್ ಆದೇಶದಂತೆ ಹೆಚ್ಚುವರಿ ಪರಿಹಾರ ನೀಡದೇ ಸಂತ್ರಸ್ತೆಗೆ ಸತಾಯಿಸುತ್ತಿದ್ದರು. ಇದು ಕೋರ್ಟ್ ಗಮನಕ್ಕೆ ಬಂದ ಬಳಿಕ ಕೋರ್ಟ್ ಆದೇಶದಂತೆ ಪರಿಹಾರ ಭೂ ಸ್ವಾಧೀನ ಕಚೇರಿಯ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಕಚೇರಿ ಜಪ್ತಿ ಪ್ರಕ್ರಿಯೆ ನಡೆದಿದೆ.

ಕಾರ್ಯಾಲಯದ ಐದು ಕಂಪ್ಯೂಟರ್, ಐದು ಚೇರು ಎರಡು ಟೇಬಲ್ ಜಪ್ತಿಮಾಡಲಾಗಿದೆ. ಕೋರ್ಟ್​ನ ನಾಗೇಶ್ ನೇತೃತ್ವದಲ್ಲಿ ನಾಲ್ಕು ಜನ ಅಮಿಂದಾರ್ ಬಂದು ವಾರೆಂಟ್ ಜಪ್ತಿ ಪ್ರಕ್ರಿಯೆ ಪೂರೈಸಿದ್ದಾರೆ. ಸಾಗರ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆಯ ಕಾರ್ಯಪಾಲಕ ಅಭಿಯಂತರ ಕಚೇರಿಯ ವಾಹನಗಳನ್ನ ಜಪ್ತಿ ಮಾಡಲು ಕೋರಲಾಗಿದೆ. ನಾಳೆ ವಾಹನ ಜಪ್ತಿ ಮಾಡಬೇಕೆಂದು ಸಂತ್ರಸ್ತ ರೈತರು ಸದ್ಯ ಒತ್ತಾಯಿಸಿದ್ದಾರೆ. ಕಳೆದ 20 ವರ್ಷಗಳಿಂದ ಹೆಚ್ಚುವರಿ ಪರಿಹಾಕ್ಕಾಗಿ ಅನುಪಿನಕಟ್ಟೆ ಭಾಗದ ಭೂಮಿ ಕಳೆದಕೊಂಡ ರೈತರು ಹೋರಾಟ ಮಾಡುತ್ತಿದ್ದರು.

ಇದನ್ನೂ ಓದಿ:ಚರ್ಮಗಂಟು ರೋಗದ ಭೀತಿ, ಜಿಲ್ಲಾಡಳಿತ ನಿರ್ಬಂಧಕ್ಕೂ ಜಗ್ಗದ ರೈತರು: ಘಾಟಿ ಸುಬ್ರಹ್ಮಣ್ಯದಲ್ಲಿ ನಿಲ್ಲದ ದನದ ಜಾತ್ರೆ

ರೈತನು ಕಳೆದುಕೊಂಡ ಜಮೀನಿಗೆ ಪರಿಹಾರ ನೀಡಲು ಸರಕಾರಿ ಕಚೇರಿಯ ಅಧಿಕಾರಿಗಳು ವಿಫಲರಾಗಿದ್ದು ಮಾತ್ರ ಅಚ್ಚರಿ ಸಂಗತಿ. ಕೋರ್ಟ್ ಕೊಟ್ಟಿರುವ ಆದೇಶದಂತೆ ಪರಿಹಾರ ನೀಡದ ಹಿನ್ನಲೆಯಲ್ಲಿ ಕಚೇರಿಯ ಪೀಠೋಪಕರಗಳ ಜಪ್ತಿ ಮಾಡಿದ್ದು ಮಾತ್ರ ಸಕರಾರಿ ಕಚೇರಿಯ ಅಧಿಕಾರಿಗಳಿಗೆ ದೊಡ್ಡ ಆಘಾತ ಮತ್ತು ಅವಮಾನ ತಂದಿದೆ.

ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada