10 ರೂ ಕೊಟ್ಟು ಖರೀದಿಸಿದ್ದ ಕೋಳಿ ಮರಿಗೆ 52 ರೂ ಟಿಕೆಟ್, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಶಿರಸಿ ಸಿದ್ದಾಪುರದಿಂದ ಬಂದ ಆ ಕುಟುಂಬ ರೂ.10 ಕೊಟ್ಟು ಮರಿ ತಂದಿದ್ದರು. ಬಸ್‌ನ ಟಿಕೆಟ್ ದರ ನೋಡಿ ಮೂಗಿಗಿಂತ ಮೂಗುತಿ ಭಾರ ಅಂದಂಗಾಯ್ತು. ಸದ್ಯ ಈ 10 ರೂಪಾಯಿ ಕೋಳಿ ಮರಿಗೆ ಟಿಕೆಟ್ ಪಡೆದಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

10 ರೂ ಕೊಟ್ಟು ಖರೀದಿಸಿದ್ದ ಕೋಳಿ ಮರಿಗೆ 52 ರೂ ಟಿಕೆಟ್, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
10 ರೂ ಕೊಟ್ಟು ಖರೀದಿಸಿದ್ದ ಕೋಳಿ ಮರಿಗೆ 52 ರೂ ಟಿಕೆಟ್, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Follow us
TV9 Web
| Updated By: ಆಯೇಷಾ ಬಾನು

Updated on: Jan 02, 2022 | 1:20 PM

ಶಿವಮೊಗ್ಗ: ನಮ್ಮ ಸುತ್ತಮುತ್ತಲು ನಡೆಯುವ ಕೆಲವೊಂದು ಘಟನೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಸಂಗತಿಯು ನಡೆದಿದ್ದು ಅದು ಆಶ್ಚರ್ಯ ಮತ್ತು ತಮಾಷೆಯಿಂದ ಕೂಡಿದೆ. ಕೇವಲ 10 ರೂಪಾಯಿ ಕೊಟ್ಟು ಖರೀದಿಸಿದ್ದ ಕೋಳಿ ಮರಿಗೆ ಬರೋಬ್ಬರಿ 52 ರೂ. ಬಸ್ ಚಾರ್ಜ್ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂತಹದೊಂದು ಘಟನೆ ನಡೆದಿದೆ. ಹೊಸನಗರ ಪಟ್ಟಣದಿಂದ ಬೈಂದೂರಿನ ಶಿರೂರಿಗೆ ಹೊರಟಿದ್ದ ಅಲೆಮಾರಿ ಕುಟುಂಬವೊಂದು ಸರ್ಕಾರಿ ಬಸ್ ಹತ್ತಿದ್ದರು. ಬಸ್‌ನ ಕಂಡಕ್ಟರ್ ಬಂದು ಎಲ್ಲಿಗೆ? ಎಂದು ಕೇಳಿದಾಗ ಶಿರೂರು ಹೋಗಬೇಕು ಮೂರು ಟಿಕೆಟ್ ಕೊಡಿ ಎಂದು ಹೇಳಿದ್ದಾರೆ. ಈ ವೇಳೆ ಪುಟ್ಟ ಚೀಲದಿಂದ ಚಿವ್… ಚಿವ್ ಎಂದು ಶಬ್ದ ಬರುತ್ತಿದ್ದನ್ನು ಆಲಿಸಿದ ಬಸ್ ಕಂಡಕ್ಟರ್ ಅದು ಏನು? ಎಂದು ಪ್ರಶ್ನಿಸಿದ್ದಾರೆ. ಆಗ ಅದು ಒಂದು ಕೋಳಿ ಮರೀರಿ ಎಂದು ಅಲೆಮಾರಿ ಕುಟುಂಬ ಪ್ರತಿಕ್ರಿಯೆ ನೀಡಿದೆ.

ಕೂಡಲೇ ಕಂಡಕ್ಟರ್ ಅದಕ್ಕೂ ಟಿಕೆಟ್ ಮಾಡಬೇಕು. ಅದಕ್ಕೂ ರೂಲ್ಸ್ ಇದೆ ಎಂದು ಅರ್ಧ ಚಾರ್ಜ್ ಮಾಡಿ, ಬರೋಬ್ಬರಿ 52 ರೂಪಾಯಿ ತೆಗೆದುಕೊಂಡು ಕೋಳಿ ಮರಿಗೂ ಆಫ್ ಟಿಕೆಟ್ ಕೊಟ್ಟಿದ್ದಾರೆ. ಮುಖಮುಖ ನೋಡಿಕೊಂಡ ಆ ಮೂವರು ಬೇರೆ ದಾರಿ ಕಾಣದೆ ಟಿಕೆಟ್ ತೆಗೆದುಕೊಂಡಿದ್ದಾರೆ. ಶಿರಸಿ ಸಿದ್ದಾಪುರದಿಂದ ಬಂದ ಆ ಕುಟುಂಬ ರೂ.10 ಕೊಟ್ಟು ಮರಿ ತಂದಿದ್ದರು. ಬಸ್‌ನ ಟಿಕೆಟ್ ದರ ನೋಡಿ ಮೂಗಿಗಿಂತ ಮೂಗುತಿ ಭಾರ ಅಂದಂಗಾಯ್ತು. ಸದ್ಯ ಈ 10 ರೂಪಾಯಿ ಕೋಳಿ ಮರಿಗೆ ಟಿಕೆಟ್ ಪಡೆದಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಜ.4ಕ್ಕೆ ಪ್ರಧಾನಿ ಮೋದಿ ತ್ರಿಪುರಾ ಭೇಟಿ; ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಿದ ಬಿಎಸ್​ಎಫ್​