ದ್ವೀಪ ಗ್ರಾಮದ ರೈತರಿಗೀಗ ಭೂಮಿ ಕಳೆದುಕೊಳ್ಳುವ ಆತಂಕ; ಸಾಗರದ ಶರಾವತಿ ಹಿನ್ನೀರಿನ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಇನ್ನೇನು ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದೆ. ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಈ ನಡುವೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಹತ್ತಾರು ಗ್ರಾಮಸ್ಥರು ಮುಂಬರುವ ಚುನಾವಣೆಗೆ ಮತದಾನದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಶರಾವತಿ ಹಿನ್ನೀರಿನ ದ್ವೀಪ ಗ್ರಾಮಸ್ಥರೇಕೆ ಮತದಾನಕ್ಕೆ ಹಿಂದೇಟು, ಅಂತೀರಾ ಈ ಸ್ಟೋರಿ ನೋಡಿ.

ದ್ವೀಪ ಗ್ರಾಮದ ರೈತರಿಗೀಗ ಭೂಮಿ ಕಳೆದುಕೊಳ್ಳುವ ಆತಂಕ; ಸಾಗರದ ಶರಾವತಿ ಹಿನ್ನೀರಿನ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ಮತದಾನ ಬಹಿಷ್ಕಾರ
Follow us
ಕಿರಣ್ ಹನುಮಂತ್​ ಮಾದಾರ್
| Updated By: Digi Tech Desk

Updated on:May 04, 2023 | 10:07 AM

ಶಿವಮೊಗ್ಗ: ಶರಾವತಿ ನದಿಯ ಹಿನ್ನೀರಿನ ಗ್ರಾಮಸ್ಥರ ಗೋಳಿಗೆ ಕೊನೆ ಇಲ್ಲದಂತಾಗಿದೆ. ಒಂದಲ್ಲ ಒಂದು ಸಮಸ್ಯೆಗಳನ್ನು ಶರಾವತಿ (Sharavati River)ಹಿನ್ನೀರಿನ ಗ್ರಾಮಸ್ತರು ಅನುಭವಿಸುತ್ತಾ ಬಂದಿದ್ದಾರೆ. ಸದ್ಯ ಸಾಗರ(Sagara) ತಾಲೂಕಿನ ಹಿನ್ನೀರಿನ ಜನವಸತಿ ಪ್ರದೇಶವನ್ನ ಜೀವ ವೈವಿಧ್ಯ ವಲಯ ಸೇರ್ಪಡೆಗೆ ಸರಕಾರ ಆರೇಳು ವರ್ಷದ ಹಿಂದೆ ಆದೇಶ ಮಾಡಿತ್ತು. ಆರಂಭದಲ್ಲಿ 300 ಎಕೆರೆ ಇದ್ದ ವ್ಯಾಪ್ತಿಯು ಈಗ ಅದು 3500 ಎಕರೆಯಾಗಿದೆ. ಜನವಸತಿ ಪ್ರದೇಶವನ್ನ ಜೀವ ವೈವಿಧ್ಯ ವಲಯಕ್ಕೆ ಸೇರ್ಪಡೆ ಮಾಡಿರುವುದನ್ನ ವಿರೋಧಿಸಿ ಇದೀಗ ಶರಾವತಿ ಹಿನ್ನೀರಿನ ಹಲವು ಗ್ರಾಮಗಳ ಗ್ರಾಮಸ್ಥರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದಾರೆ. ಶರಾವತಿ ಸಂತ್ರಸ್ಥ ಗ್ರಾಮಗಳ 2 ಗ್ರಾಮ ಪಂಚಾಯತ್ ವ್ಯಾಪ್ತಿಯ 20ಕ್ಕೂ ಅಧಿಕ ಹಳ್ಳಿಗಳಲ್ಲಿ ಮತದಾನ ಬಹಿಷ್ಕಾರದ ಪ್ಲೆಕ್ಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಶರಾವತಿ ಸಂತ್ರಸ್ಥ ಗ್ರಾಮಗಳ 2 ಗ್ರಾಮ ಪಂಚಾಯತ್ ವ್ಯಾಪ್ತಿಯ 20ಕ್ಕೂ ಅಧಿಕ ಹಳ್ಳಿಗಳಲ್ಲಿ ಮತದಾನ ಬಹಿಷ್ಕಾರದ ಪ್ಲೆಕ್ಸ್ ರಾರಾಜಿಸುತ್ತಿವೆ. ಇಲ್ಲಿನ ಅಂಬಾರಗುಡ್ಡ ಸುತ್ತಮುತ್ತಲಿನ ಸುಮಾರು 3500ಕ್ಕೂ ಅಧಿಕ ಎಕರೆ ಜಾಗವನ್ನ ಸರ್ಕಾರ ಜೀವವೈವಿಧ್ಯ ತಾಣವೆಂದು ಘೋಷಿಸಿದೆ. ಕುದರೂರು ಮತ್ತು ಸಂಕಣ್ಣ ಶಾನುಭೋಗ್ ಗ್ರಾಮ ಪಂಚಾಯತ್ ವ್ಯಾಪ್ತಿಯ 20ಕ್ಕೂ ಅಧಿಕ ಗ್ರಾಮಗಳು ಈ ವ್ಯಾಪ್ತಿಗೆ ಸೇರುತ್ತವೆ. ಈ 3500 ಎಕರೆ ಜಾಗದಲ್ಲಿ ರೈತರು ಕಳೆದ ಹಲವಾರು ವರ್ಷಗಳಿಂದ ಅಡಿಕೆತೋಟ, ಭತ್ತ, ಗೇರು, ಏಲಕ್ಕಿ ಮುಂತಾದ ಬೆಳೆ ಬೆಳೆಯುತ್ತಿದ್ದಾರೆ. ಈಗ ಏಕಾಏಕಿ ಅರಣ್ಯಧಿಕಾರಿಗಳು ಬಂದು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ರೈತರ ಜಮೀನಿನಲ್ಲಿ ಏನೂ ಅಭಿವೃದ್ಧಿ ಮಾಡಲು ಬಿಡುತ್ತಿಲ್ಲವೆಂದು ಸ್ಥಳೀಯರು ಆರೋಪವಾಗಿದೆ. ಕೊಡನವಳ್ಳಿ, ಹೊನಗೋಡು, ಹಾರೇಕೊಪ್ಪ, ಹಾಳಸಸಿ, ಆವಿಗೆ, ಮೆತ್ತಲಗೋಡು, ಬಾಳೇಕೆರಿ, ಚದುಕೊಳ್ಳಿ, ಹೊಸೂರು ಹೊಸಕೊಪ್ಪ, ಇಕ್ಕಿಬೇಳು ಮುಂತಾದ ಗ್ರಾಮಗಳು ಈ ವ್ಯಾಪ್ತಿಯಲ್ಲಿ ಸೇರುತ್ತಿದ್ದು ಯಾರೊಬ್ಬರೂ ಮತದಾನ ಮಾಡದೇ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ; ಒಂದೇ ವಾರದಲ್ಲಿ ಎರಡು ಖೈದಿಗಳ ಸಾವು

ಚುನಾವಣೆ ಸಮಯದಲ್ಲಿ ಮತದಾನ ಬಹಿಷ್ಕಾರ ಎನ್ನುವುದು ಒಂದು ಹೋರಾಟದ ಭಾಗವಾಗಿದೆ. ಈ ಸಮಯದಲ್ಲಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ಮತದಾನ ಬಹಿಷ್ಕಾರ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ ದಶಕಗಳಿಂದ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡುತ್ತಿದ್ದರು, ಇದೀಗ ಶರಾವತಿಯ ಹಿನ್ನೀರಿನ ಗ್ರಾಮಸ್ಥರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೊದಲೇ ಯಾವುದೇ ಸೌಲಭ್ಯಗಳಿಲ್ಲದೇ ದ್ವೀಪದಲ್ಲಿ ವಾಸ ಮಾಡುತ್ತಿರುವುದು ಒಂದು ಶಾಪವಾಗಿದೆ. ಇಂತಹ ಸಮಸ್ಯೆಗಳ ನಡುವೆ ದ್ವೀಪ ಗ್ರಾಮದ ರೈತರ ಭೂಮಿಯು ಕೈತಪ್ಪಿ ಹೋಗುವ ಆತಂಕ ಕಾಡುತ್ತಿವೆ. ಈ ಹಿನ್ನಲೆಯಲ್ಲಿ ಹತ್ತಾರು ಗ್ರಾಮದ ಗ್ರಾಮಸ್ಥರು ಈಗ ಮತದಾನ ಬಹಿಷ್ಕಾರ ಕ್ಕೆ ಮುಂದಾಗಿದ್ದಾರೆ.

ಸದ್ಯ ಸಾಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಹರತಾಳ ಹಾಲಪ್ಪ ಮತ್ತು ಕಾಂಗ್ರೆಸ್​ನಿಂದ ಬೇಳೂರು ಗೋಪಾಲ ಕೃಷ್ಣ ಇಬ್ಬರು ಕಣದಲ್ಲಿದ್ದಾರೆ. ಸದ್ಯ ಸಾವಿರಾರು ಮತಗಳಿರುವ ಶರಾವತಿ ಹಿನ್ನೀರಿನ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರವು, ಇಬ್ಬರು ಅಭ್ಯರ್ಥಿಗಳಿಗೆ ತಲೆ ಬಿಸಿ ಮಾಡಿದೆ. ಸದ್ಯ ಮತದಾನ ಬಹಿಷ್ಕಾರ ಮಾಡದಂತೆ ಸ್ಥಳೀಯ ಅಧಿಕಾರಿಗಳು ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ, ಅದು ಪ್ರಯೋಜನವಾಗಿಲ್ಲ.

ಇದನ್ನೂ ಓದಿ:ಶಿವಮೊಗ್ಗ: ಭದ್ರಾವತಿ ಬಳಿ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಇನ್ನು ಮಲೆನಾಡಿನಲ್ಲಿ ಮತದಾನ ಬಹಿಷ್ಕಾರದ ಮೂಲಕ ಸರಕಾರಕ್ಕೆ ಬಿಸಿಮುಟ್ಟಿಸಲು ಮತದಾರರು ಮುಂದಾಗಿದ್ದಾರೆ. ಶರಾವತಿ ಹಿನ್ನೀರಿನ ರೈತರು ಈಗ ತಮ್ಮ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸರಕಾರದ ಹೊಸ ಆದೇಶವು ಗ್ರಾಮಸ್ಥರ ನಿದ್ದೆಗೆಡಿಸಿದೆ. ಈ ಆದೇಶ ಹಿಂಡೆಯಲು ಗ್ರಾಮಸ್ಥರು ಈಗ ಮತದಾನ ಬಹಿಷ್ಕಾರದ ವಿಭಿನ್ನ ಹೋರಾಟಕ್ಕೆ ಮುಂದಾಗಿದ್ದಾರೆ. ಶರಾವತಿ ಹಿನ್ನೀರಿನ ಗ್ರಾಮಸ್ಥರ ಸಮಸ್ಯೆಗೆ ಜಿಲ್ಲಾಡಳಿತವು ಏನು ಪರಿಹಾರ ಸೂಚಿಸುತ್ತದೆ ಎನ್ನುವುದು ಕಾದು ನೋಡಬೇಕಿದೆ.

ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:58 am, Thu, 4 May 23

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!