ಮಾರುವೇಷದಲ್ಲಿ ದಾಳಿ, ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿ ಅರೆಸ್ಟ್
ಶಿವಮೊಗ್ಗ: ಅರಣ್ಯ ಜಾಗೃತ ದಳದ ಅಧಿಕಾರಿಗಳು ಮಾರುವೇಷದಲ್ಲಿ ದಾಳಿ ನಡೆಸಿ ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಆರೋಪಿಯಿಂದ ಕಾಡುಕೋಣ ಕೊಂಬು, ಚಿಪ್ಪು, ಹಂದಿಯ ಚಿಪ್ಪು ವಶ ಪಡಿಸಿಕೊಳ್ಳಲಾಗಿದೆ. ಹೊಸನಗರ ತಾಲೂಕಿನ ನಗರ ಸಮೀಪದ ಬ್ರಾಹ್ಮಣವಾಡದಲ್ಲಿ ಮಾರುವೇಷ ತೊಟ್ಟು ವ್ಯಾಪಾರ ಮಾಡುವ ಸೋಗಿನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೃಷ್ಣಮೂರ್ತಿ(47) ಎಂಬ ಆರೋಪಿಯನ್ನ ಬಂಧಿಸಲಾಗಿದೆ. ಆರೋಪಿಯಿಂದ ಕಾಡುಕೋಣದ ಎರಡು ಕೊಂಬು, ಸುಮಾರು ಒಂದುವರೆ ಕೆಜಿ ಮುಳ್ಳು ಹಂದಿಯ ಚಿಪ್ಪು, ಕೃತ್ಯಕ್ಕೆ ಬಳಿಸಿದ ಬೈಕ್, ಒಂದು ನಾಡಬಂದೂಕು, […]
ಶಿವಮೊಗ್ಗ: ಅರಣ್ಯ ಜಾಗೃತ ದಳದ ಅಧಿಕಾರಿಗಳು ಮಾರುವೇಷದಲ್ಲಿ ದಾಳಿ ನಡೆಸಿ ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಆರೋಪಿಯಿಂದ ಕಾಡುಕೋಣ ಕೊಂಬು, ಚಿಪ್ಪು, ಹಂದಿಯ ಚಿಪ್ಪು ವಶ ಪಡಿಸಿಕೊಳ್ಳಲಾಗಿದೆ.
ಹೊಸನಗರ ತಾಲೂಕಿನ ನಗರ ಸಮೀಪದ ಬ್ರಾಹ್ಮಣವಾಡದಲ್ಲಿ ಮಾರುವೇಷ ತೊಟ್ಟು ವ್ಯಾಪಾರ ಮಾಡುವ ಸೋಗಿನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೃಷ್ಣಮೂರ್ತಿ(47) ಎಂಬ ಆರೋಪಿಯನ್ನ ಬಂಧಿಸಲಾಗಿದೆ.
ಆರೋಪಿಯಿಂದ ಕಾಡುಕೋಣದ ಎರಡು ಕೊಂಬು, ಸುಮಾರು ಒಂದುವರೆ ಕೆಜಿ ಮುಳ್ಳು ಹಂದಿಯ ಚಿಪ್ಪು, ಕೃತ್ಯಕ್ಕೆ ಬಳಿಸಿದ ಬೈಕ್, ಒಂದು ನಾಡಬಂದೂಕು, ತಯಾರಿ ಹಂತದಲ್ಲಿದ್ದ ಮೂರು ನಾಡ ಬಂದೂಕು ಮತ್ತು ಬಂದೂಕು ತಯಾರಿಸಲು ಬಳಸುತ್ತಿದ್ದ ಬಿಡಿ ಭಾಗಗಳನ್ನು ಜಪ್ತಿ ಮಾಡಲಾಗಿದೆ.
Published On - 10:28 am, Wed, 5 February 20