ಶಿವಮೊಗ್ಗ, ಅ.12: ‘ಹಸಿರು ಬಣ್ಣ ಕಿತ್ತಾಕಿ, ಕೇಸರಿ ಬಣ್ಣ ಬರುವವರೆಗೆ ಬಿಜೆಪಿ ಹೋರಾಟ ಎನ್ನುವ ಮೂಲಕ ಮಾಜಿ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗ(Shivamogga) ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ ರಾಜ್ಯದ ಕುತಂತ್ರ ಸಿಎಂ ಸಿದ್ದರಾಮಯ್ಯ, ಸಿದ್ದು ಮೈಯಲ್ಲಿ ಹಸಿರು ರಕ್ತ ಅಥವಾ ಹಿಂದೂ ರಕ್ತ ಹರಿಯುವ ತೀರ್ಮಾನ ಆಗಬೇಕಿದೆ. ಪಾಕಿಸ್ತಾನ ದೇಶವೂ ಸೇರಿದಂತೆ ಅಖಂಡ ಭಾರತದ ಕನಸು ಇತ್ತು. ಆದ್ರೆ, ದೇಶದ್ರೋಹಿ ಮುಸ್ಲಿಮರು ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾವೇರಿ ನೀರನ್ನು ಡಿಸಿಎಂ ಡಿಕೆ ಶಿವಕುಮಾರ್ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಾನೆ, ಅವನೊಬ್ಬ ನೀರಿನ ಕಳ್ಳ. ನಾವೇ ಹಿಂದೂ ಸಮಾಜ ರಕ್ಷಣೆ ಮಾಡುವ ಸರ್ಕಾರ ರಚನೆ ಮಾಡುತ್ತೇವೆ. ಇದು ನಮ್ಮ ಗ್ಯಾರಂಟಿ ಆಗಿದೆ. ನಮಗೂ ಆಯುಧದಿಂದ ಉತ್ತರ ಕೊಡಲು ಬರುತ್ತದೆ. ಮುಸ್ಲಿಂರ ಗೂಂಡಾಗಳು ಹರ್ಷ ಕೊಲೆ ಮಾಡಿದ್ದಾರೆ. ‘ಸಿದ್ದರಾಮಯ್ಯನವರೇ ನಿಮ್ಮ ಮಗ ಯತೀಂದ್ರನ ಕೊಲೆ ಮಾಡಿದ್ದರೆ, ಅಥವಾ ಡಿ.ಕೆ.ಶಿವಕುಮಾರ್ ಅವರೇ ಸಂಸದ ಸುರೇಶ್ ಕೊಲೆ ಮಾಡಿದ್ದರೆ, ನಿಮಗೆ ಹೊಟ್ಟೆ ಉರಿ ಆಗುತ್ತಿರಲಿಲ್ಲವೇ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ K.S.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇನ್ನು ಶಿವಮೊಗ್ಗದ ರಾಗಿಗುಡ್ಡದಲ್ಲಿ ಹಿಂದೂಗಳ 8 ಮನೆ ಮೇಲೆ ದಾಳಿಯಾಗಿದೆ. ಆದರೆ, ನಮ್ಮ ಹುಡುಗನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದರೆ, ಮಕ್ಕಳೇ ಇಲ್ಲಿ ಜಾಗವಿಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಕಾಂಗ್ರೆಸ್ ಏಜೆಂಟ್ ಆಗಿದ್ದಾರೆ. ಎಷ್ಟು ದಿನಗಳ ಕಾಲ ಇವರ ಚೇಲಾ ಆಗುತ್ತೀರಿ. ನಮಗೂ ಅವಕಾಶ ಸಿಕ್ಕರೆ ಜಾತ್ರೆಯಲ್ಲಿ ಕುರಿ ಕಡಿದಂತೆ ಕಡಿಯುತ್ತೇವೆ. ನಾವೂ ಒಟ್ಟಾಗಿ ಇರಬೇಕೆಂದರೆ ಇವರು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ