ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತನ (Bajarangdal Hindu Activist) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ವಿಚಾರಗಳು ಬುಧವಾರ (ಫೆಬ್ರವರಿ 23) ಲಭ್ಯವಾಗಿದೆ. ಹರ್ಷ ಕೊಲೆ (Harsha Death) ನಡೆಯುವ ಕೆಲ ಗಂಟೆ ಮೊದಲು, ಹತ್ಯೆಗೆ ಸ್ಕೆಚ್ ಹಾಕಿದ್ದರು. ಸೆಕೆಂಡ್ ಹ್ಯಾಂಡ್ ಸ್ವಿಫ್ಟ್ ಕಾರ್ನಲ್ಲಿ ಬಂದಿದ್ದ ಹಂತಕರು ಕೊಲೆಗೆ ಸ್ಕೆಚ್ ಹಾಕಿದ್ರು ಎಂದು ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿದ್ದ 6 ಜನ ಒಟ್ಟಿಗೆ ಭಾರತಿ ಕಾಲೋನಿಗೆ ಎಂಟ್ರಿ ಕೊಟ್ಟಿದ್ದರು. ಕಾರು ಡೀಲರ್ ಬದ್ರುದ್ದೀನ್ ಮಗ ಜಿಲಾನ್ ಸಹ ಬಂದಿದ್ದ. ಪ್ರಮುಖ ಆರೋಪಿ ರಿಯಾನ್ ಬಾಲ್ಯ ಸ್ನೇಹಿತ ಜಿಲಾನ್ ಬಂದಿದ್ದ. ಹರ್ಷಗೂ ಜಿಲಾನ್ಗೂ ಯಾವುದೇ ರೀತಿ ವೈರತ್ವ ಇರಲಿಲ್ಲ. ಆದರೆ ರಿಯಾನ್ ಸಹಾಯಕ್ಕೆಂದು ಜಿಲಾನ್ ಬಂದಿದ್ದ ಎಂದು ತಿಳಿದುಬಂದಿದೆ.
ಹಿಂದೂ ಕಾರ್ಯಕರ್ತ ಹರ್ಷ ಕೊಲೆ ನಂತರ ಎಲ್ಲರ ಮೊಬೈಲ್ ಆಫ್ ಆಗಿತ್ತು. ಕಮ್ಯೂನಿಕೇಷನ್ಗಾಗಿ ಹಂತಕರ ಒರ್ವನ ಮೊಬೈಲ್ ಮಾತ್ರ ಆನ್ ಇತ್ತು. ಭದ್ರಾವತಿ ಮೂಲಕ ರೈಲಿನ ಮೂಲಕ ಹಂತಕರು ಪರಾರಿಯಾಗಿದ್ದರು. ರಾತ್ರಿ 10.30 ಗಂಟೆಯ ಶಿವಮೊಗ್ಗ ಟು ಬೆಂಗಳೂರು, ಶಿವಮೊಗ್ಗ ಟು ಮೈಸೂರುಗೆ ಹೊರಡುವ ರೈಲಿನ ಮೂಲಕ ಪರಾರಿ ಆಗಿದ್ದರು. ಭದ್ರಾವತಿ ರೈಲ್ವೆ ಸ್ಟೆಷನ್ವರೆಗೂ ಕಾರಿನಲ್ಲಿಯೇ ಬಂದಿದ್ದ ಹಂತಕರು ಬಳಿಕ, ಮೊದಲನೇ ಫ್ಲ್ಯಾನ್ನಂತೆ ಎಲ್ಲರೂ ಒಂದೊಂದು ಕಡೆ ಪಾರಾರಿ ಆಗಿದ್ದರು ಎಂದು ತಿಳಿದುಬಂದಿದೆ.
ಸಂಜೆ 4 ಗಂಟೆಗೆ ಕಾರ್ ಹೊರ ತಂದಿದ್ದ ಜಿಲಾನ್, ರಾತ್ರಿ 8.30 ರ ವರೆಗೂ ಸಿಟಿ ಸುತ್ತಾಡಿರುವ ಹಂತಕರು. ಸಂಜೆ 4 ಗಂಟೆಯಿಂದಲೇ ಹಂತರಕ ಟೀಂ ಶಿವಮೊಗ್ಗ ಸಿಟಿ ರೌಡ್ಸ್ ಹಾಕಿತ್ತು ಎಂದು ತಿಳಿದುಬಂದಿದೆ. ಸಿಗೆಹಟ್ಟಿ, ಭಾರತಿ ನಗರ ಆಸುಪಾಸಿನಲ್ಲಿ ಹಂತರಕ ಟೀಂ ಫುಲ್ರೌಂಡ್ಸ್ ಹಾಕಿತ್ತು. ಕಾರ್ನಲ್ಲಿ ಸುತ್ತಾಡಿಕೊಂಡೇ ಹರ್ಷ ಚಲನವಲನದ ಬಗ್ಗೆ ಗಮನ ಹರಿಸಲಾಗಿತ್ತು ಎಂದು ಮಾಹಿತಿ ಲಭಿಸಿದೆ.
ಪ್ರಕರಣ ಸಂಬಂಧಿಸಿ ಖಾಸಿಫ್ನನ್ನು ಭದ್ರಾವತಿಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ಹಾಸನದಲ್ಲಿ ಮೂವರು ರಿಹಾನ್, ಆಶೀಪ್, ನೀಹಾಲ್, ಶಿವಮೊಗ್ಗದಲ್ಲಿ ನದೀಮ್, ಬೆಂಗಳೂರು ಜಿಲಾನ್, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಫ್ನಾನ್ ಬಂಧಿಸಲಾಗಿದೆ.
ಈ ಮಧ್ಯೆ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಹರ್ಷನ ಶವಯಾತ್ರೆ ವೇಳೆ ಕಲ್ಲುತೂರಾಟ, ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಕೆ.ಎಸ್. ಈಶ್ವರಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಪ್ರಕರಣ: ಮೃತ ಹರ್ಷನ ಮೊಬೈಲ್ ಪತ್ತೆ, ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಬಂಧಿತ ಆರೋಪಿಗಳಿಗೆ ಇದೆ ಕ್ರಿಮಿನಲ್ ಹಿನ್ನೆಲೆ!
Published On - 7:55 pm, Wed, 23 February 22