ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ; ಸಂಕಷ್ಟಕ್ಕೆ ಸಿಲುಕಿದ ಸಾರ್ವಜನಿಕರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 04, 2023 | 4:14 PM

ಉದ್ವಿಗ್ನ ಪರಿಸ್ಥಿತಿ ನಿಭಾಯಿಸಲು ತೆಗೆದುಕೊಂಡ 144 ಸೆಕ್ಷನ್​ ಜಾರಿಯಿಂದ ಇದೀಗ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲದೆ ಬೇಕರಿ ಐಟಂಗಳು ಹಾಳಾಗಿದೆ. ಇದರಿಂದ ವ್ಯಾಪಾರಸ್ಥರು ಗೋಳಾಟ ನಡೆಸಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ; ಸಂಕಷ್ಟಕ್ಕೆ ಸಿಲುಕಿದ ಸಾರ್ವಜನಿಕರು
ಶಿವಮೊಗ್ಗ
Follow us on

ಶಿವಮೊಗ್ಗ, ಅ.04: ಇದೇ ಅಕ್ಟೋಬರ್​ 1 ರಂದು ಶಿವಮೊಗ್ಗ(Shivamogga)ದಲ್ಲಿ ಅದ್ಧೂರಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಅಷ್ಟೇ ಅಲ್ಲದೆ ಕೆಲ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ಕೂಡಲೇ ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದರು. ಬಳಿಕ ಲಘು ಲಾಠಿ ಪ್ರಹಾರ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

144 ಸೆಕ್ಷನ್​ ಜಾರಿಯಿಂದ ಸಂಕಷ್ಟಕ್ಕೆ ಸಿಲುಕಿದ ಸಾರ್ವಜನಿಕರು

ಉದ್ವಿಗ್ನ ಪರಿಸ್ಥಿತಿ ನಿಭಾಯಿಸಲು ತೆಗೆದುಕೊಂಡ 144 ಸೆಕ್ಷನ್​ ಜಾರಿಯಿಂದ ಇದೀಗ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲದೆ ಬೇಕರಿ ಐಟಂಗಳು ಹಾಳಾಗಿದೆ. ಇದರಿಂದ ವ್ಯಾಪಾರಸ್ಥರು ಗೋಳಾಟ ನಡೆಸಿದ್ದಾರೆ. ಸಾಲ ಮಾಡಿ ಸ್ವೀಟ್ಸ್ , ಬ್ರೆಡ್​​ಗಳಿಗೆಲ್ಲಾ ಬೂಸ್ಟ್ ಬಂದು ಹಾಳಾಗಿವೆ. ಯಾರೋ ಒಬ್ಬರು‌ ಮಾಡಿದ ಕೆಲಸಕ್ಕೆ ನೋವು ಅನುಭವಿಸಬೇಕಿದೆ ಎಂದು ಕಣ್ಣೀರು ಹಾಕುತ್ತಾ ಬೇಕರಿ ವ್ಯಾಪಾರಸ್ಥರು ಗೋಳಾಡುತ್ತಿದ್ದಾರೆ.

ಇದನ್ನೂ ಓದಿ:ಉಡುಪಿಗೂ ತಟ್ಟಿದ ಶಿವಮೊಗ್ಗದ ಈದ್​​ಮಿಲಾದ್​​ ಗಲಾಟೆ ಬಿಸಿ: ಅನಧಿಕೃತ ಬ್ಯಾನರ್​ಗಳ ತೆರವು

ಸೋಶಿಯಲ್​ ಮೀಡಿಯಾದಲ್ಲಿ ಊಹಾಪೋಹ ಹರಡುವವರ ವಿರುದ್ಧ ಕ್ರಮ

ಇನ್ನು ಈದ್​-ಮಿಲಾದ್​ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆ ಸಂದರ್ಭದಲ್ಲಿ ಶಿವಮೊಗ್ಗದ  ರಾಗಿಗುಡ್ಡ ಶಾಂತಿ ನಗರದಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಇದಾದ ಬಳಿಕ ಈ ಘಟನೆಗೆ ಸಂಬಂಧಿಸದಂತೆ ರಾಗಿಗುಡ್ಡದಲ್ಲಿ ಯಾರೋ ಒಬ್ಬರನ್ನು ಎನ್ ಕೌಂಟರ್ ಮಾಡಲಾಗಿದೆ ಎನ್ನುವ ಊಹಾಪೋಹ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸದ ಶಿವಮೊಗ್ಗ ಎಸ್ಪಿ ಅವರು ‘ ಆ ರೀತಿ ಊಹಾಪೋಹಗಳ ಕುರಿತು ಈಗಾಗಲೇ ನಾವು ಸ್ಪಷ್ಟನೆಯನ್ನ ಪಡೆದುಕೊಂಡಿದ್ದೇವೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಅಂತಹದನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ