ಹವಾಮಾನ ವೈಪರೀತ್ಯ: ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್​ ಆಗದೆ ಬೆಂಗಳೂರಿಗೆ ವಾಪಸ್ ಆದ ವಿಮಾನ

ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಿಂದ ಬಂದ ವಿಮಾನ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ವಿಮಾನ ವಾಪಸ್ ಬೆಂಗಳೂರಿಗೆ​ ತೆರಳಿರುವಂತಹ ಘಟನೆ ಭಾನುವಾರ ಬೆಳಗ್ಗೆ 9.50ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ವಲ್ಪ ಹೊತ್ತಿನ ನಂತರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದೆ.

ಹವಾಮಾನ ವೈಪರೀತ್ಯ: ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್​ ಆಗದೆ ಬೆಂಗಳೂರಿಗೆ ವಾಪಸ್ ಆದ ವಿಮಾನ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 04, 2023 | 3:51 PM

ಶಿವಮೊಗ್ಗ, ಅಕ್ಟೋಬರ್​ 04: ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಿಂದ ಬಂದ ವಿಮಾನ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ (Shivamogga airport)  ದಲ್ಲಿ ಲ್ಯಾಂಡ್ ಆಗದೆ ವಾಪಸ್​ ತೆರಳಿರುವಂತಹ ಘಟನೆ ಭಾನುವಾರ ಬೆಳಗ್ಗೆ 9.50ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಸ್ತುತ ಬೆಂಗಳೂರು-ಶಿವಮೊಗ್ಗ ನಡುವೆ ವಾಣಿಜ್ಯ ವಿಮಾನ ಹಾರಾಟ ಮಾಡುತ್ತಿದೆ. ಸ್ವಲ್ಪ ಹೊತ್ತಿನ ನಂತರ ಬೆಂಗಳೂರಿನಿಂದ ಮಲೆನಾಡು ನಗರಕ್ಕೆ ವಿಮಾನ ವಾಪಸ್​ ಆಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭಾನುವಾರದಂದು ತುಂತುರು ಮಳೆ ಆಗುತ್ತಿತ್ತು. ಜೊತೆಗೆ ಭಾರೀ ಪ್ರಮಾಣದ ಮೋಡ ಆವರಿಸಿತ್ತು ಎನ್ನಲಾಗಿದೆ. ಹಾಗಾಗಿ ಪೈಲೆಟ್​​ಗೆ ರನ್​ ವೇ ಸರಿಯಾಗಿ ಕಾಣಿಸಿಲ್ಲ. ಈ ಹಿನ್ನೆಲೆ ಇಂಡಿಗೋ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣ ಸುತ್ತ ಕೆಲ ಕಾಲ ಹಾರಾಟ ಮಾಡಿದೆ. ಆದರೂ ರನ್​ ವೇ ಸರಿಯಾಗಿ ಕಾಣಿಸದಿರುವುದರಿಂದ ಬೆಂಗಳೂರಿಗೆ ವಾಪಸ್​ ಆಗಿದೆ.

ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಕಮರ್ಷಿಯಲ್ ಸೇವೆ, ಮೊದಲ ವಿಮಾನದಲ್ಲಿ ತವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಬಿಎಸ್ ಯಡಿಯೂರಪ್ಪ

ಸದ್ಯ ಈ ಕುರಿತಾಗಿ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕ ಎನ್ ಶಮಂತ್​ರಿಂದ ಮಾಹಿತಿ ನೀಡಿದ್ದು, ಭಾನುವಾರ ಬೆಳಿಗ್ಗೆ ಮಂಜು ಕವಿದ ವಾತಾವರಣದಿಂದಾಗಿ ವಿಮಾನವು ಇಳಿಯಲು ಸಾಧ್ಯವಾಗಲಿಲ್ಲ. ಅದು ಬೆಂಗಳೂರಿಗೆ ಮರಳಿದೆ.  ಕೆಲವು ಗಂಟೆಗಳ ನಂತರ ಅದು ಮತ್ತೆ ಬಂದು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ನಿನ್ನೆ ಮಂಗಳವಾರ, ವಿಮಾನವನ್ನು ರದ್ದುಗೊಳಿಸಲಾಯಿತು. ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗಕ್ಕೆ ಬಂದೇಬಿಡ್ತು ವಿಮಾನ, ಮಲೆನಾಡಿಗರು ಬಹುದಿನಗಳ ಕನಸು ನನಸು

ಕಳೆದ ಫೆಬ್ರವರಿ.27ರಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಜನ್ಮದಿನದಂದೇ ಸುಮಾರು 450 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗದ ಸೋಗಾನೆ ಬಳಿ‌ ಇರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದರು. ಮಲೆನಾಡಿನ ಏಕೈಕ ಏರ್‌ಪೋರ್ಟ್‌ ಇದಾಗಿದ್ದು, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಕರಾವಳಿ ಭಾಗಕ್ಕೂ ಅನುಕೂಲವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.