ಶಿವಮೊಗ್ಗ ಏರ್​ಪೋರ್ಟ್​ನಿಂದ ಇಂಡಿಗೋ ವಿಮಾನ ಹಾರಾಟ: 4 ಹೊಸ ಮಾರ್ಗಗಳಲ್ಲಿ ಹಾರಾಟಕ್ಕೆ ಅನುಮತಿ

ಆ. 11ರಿಂದ ಶಿವಮೊಗ್ಗ ಏರ್​ಪೋರ್ಟ್​ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಬೆಂಗಳೂರು ಹೊರತುಪಡಿಸಿ ಇತರೆ 4 ವಿವಿಧ ಸ್ಥಳಗಳಿಗೆ ಶಿವಮೊಗ್ಗದಿಂದ ಪಯಣ ಆರಂಭವಾಗಲಿದೆ ಎಂದು ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ ಏರ್​ಪೋರ್ಟ್​ನಿಂದ ಇಂಡಿಗೋ ವಿಮಾನ ಹಾರಾಟ: 4 ಹೊಸ ಮಾರ್ಗಗಳಲ್ಲಿ ಹಾರಾಟಕ್ಕೆ ಅನುಮತಿ
ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jun 29, 2023 | 5:15 PM

ಶಿವಮೊಗ್ಗ: ಆ. 11ರಿಂದ ಶಿವಮೊಗ್ಗ ಏರ್​ಪೋರ್ಟ್​ (Shivamogga Airport) ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಿಂದ 11 ಸ್ಥಳಗಳಿಗೆ ವಿಮಾನ ಹಾರಾಟ ನಡೆಸಲು ಈ ಬಗ್ಗೆ 2022ರಲ್ಲಿ ವಿಮಾನಯಾನ ಸಚಿವಾಲಯಕ್ಕೆ ನಾನು ಪತ್ರ ಬರೆದಿದ್ದೆ. ಇದೀಗ ಆಗಸ್ಟ್​​ 11ರಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದ್ದು, ಬೆಂಗಳೂರು ಹೊರತುಪಡಿಸಿ ಇತರೆ 4 ವಿವಿಧ ಸ್ಥಳಗಳಿಗೆ ಶಿವಮೊಗ್ಗದಿಂದ ಪಯಣ ಆರಂಭವಾಗಲಿದೆ ಎಂದರು.

4 ಮಾರ್ಗಗಳಿಗೆ ಅನುಮತಿ

ರೂಟ್ 1: ಹೈದರಾಬಾದ್​, ಶಿವಮೊಗ್ಗ, ಗೋವಾ, ಶಿವಮೊಗ್ಗ, ತಿರುಪತಿ, ಶಿವಮೊಗ್ಗ, ಹೈದರಾಬಾದ್

ರೂಟ್ 2: ಹೈದರಾಬಾದ್​, ಶಿವಮೊಗ್ಗ, ದೆಹಲಿ, ಶಿವಮೊಗ್ಗ, ಚೆನೈ, ಶಿವಮೊಗ್ಗ, ಬೆಂಗಳೂರು, ಶಿವಮೊಗ್ಗ, ಹೈದರಾಬಾದ್

ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್​ 11ರಿಂದ ವಿಮಾನ ಸಂಚಾರ; ಸಂಸದ ರಾಘವೇಂದ್ರ ಮಾಹಿತಿ

ರೂಟ್ 3: ಹೈದರಾಬಾದ್​, ಶಿವಮೊಗ್ಗ, ಹೈದರಾಬಾದ್

ರೂಟ್ 4: ಬೆಂಗಳೂರು, ಸೇಲಂ, ಕೊಚ್ಚಿನ್​, ಸೇಲಂ, ಬೆಂಗಳೂರು, ಶಿವಮೊಗ್ಗ, ಬೆಂಗಳೂರಿಗೆ ವಿಮಾನ ಸಂಚರಿಸಲಿದೆ ಎಂದು ಇಂಡಿಗೋ ತನ್ನ ವೆಬ್ ಸೈಟ್​ನಲ್ಲಿ ಪ್ರಕಟಿಸಿದೆ. ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಖಾಸಗಿ ವಿಮಾನ ಸಂಸ್ಥೆಗಳಿಗೆ ಬಿಡ್​​ಗಾಗಿ ಆಹ್ವಾನಿಸಿದೆ.

ಪ್ರತಿ ವ್ಯಕ್ತಿಗೆ 2,500 ರಿಂದ 3,000 ರೂ

ಶಿವಮೊಗ್ಗದಿಂದ ಬೆಂಗಳೂರಿನ ನಡುವಿನ ಪ್ರಯಾಣ ದರದ ಪ್ರತಿ ವ್ಯಕ್ತಿಗೆ 2,500 ರಿಂದ 3,000 ರೂ. ಇರಲಿದೆ ಎನ್ನಲಾಗುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಮಾನ ನಿಲ್ದಾಣವು ಸಹಾಯವಾಗಲಿದೆ. ಪ್ರಸಿದ್ಧ ಜೋಗ ಜಲಪಾತ ಮತ್ತು ಅನೇಕ ಧಾರ್ಮಿಕ ಸ್ಥಳಗಳು ಜಿಲ್ಲೆಯಲ್ಲಿದ್ದು, ಇವುಗಳಿಗೆ ಭೇಟಿ ನೀಡಲು ಪ್ರವಾಸಿಗರಿಗೆ ನೆರವಾಗಲಿದೆ.

ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರುವ ಮೊದಲ ವಿಮಾನ ಪ್ರಧಾನಿ ಮೋದಿಯವರದ್ದು; ಸಂಸದ ಬಿ ವೈ ರಾಘವೇಂದ್ರ

ಸೋಗಾನೆ ಬಳಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸಲಾಗಿದ್ದು, ನಿಲ್ದಾಣದ ರನ್‌ ವೇ 3110 ಮೀಟ​ರ್‌ ಉದ್ದ, ಅದರ ಅಗಲ 45 ಮೀಟರ್‌ ಇದೆ. ಸುಮಾರು 220 ಕೋಟಿ ರೂ. ವೆಚ್ಚದಲ್ಲಿ 662.38 ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಉಡಾನ್‌ ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇದಕ್ಕಾಗಿ ಅವಿರತ ಪ್ರಯತ್ನ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:14 pm, Thu, 29 June 23