ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಯಡವಟ್ಟು; ಮಗು ಅದಲು ಬದಲು, ಹೆತ್ತವರು ಕಂಗಾಗಲು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 12, 2023 | 8:06 PM

ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಒಂದು ಯಡವಟ್ಟು ಆಗಿದೆ. ಹೌದು, ನಿಮಗೆ ಗಂಡು ಮಗು ಆಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ಮತ್ತು ಸಿಬ್ಬಂದಿ ಹೇಳಿದ್ದರು. ಗಂಡು ಮಗು ಹುಟ್ಟಿದ ಖುಷಿಯಲ್ಲಿ ತಂದೆ ಮತ್ತು ಆತನ ಸಂಬಂಧಿಗಳಿದ್ದರು. ಕೇವಲ ಒಂದೇ ಗಂಟೆಯಲ್ಲಿ ಅವರ ಸಂಭ್ರಮಕ್ಕೆ ಕತ್ತರಿ ಬಿದ್ದಿದೆ. ನಿಮಗೆ ಗಂಡು ಮಗು ಆಗಿಲ್ಲ. ಹೆಣ್ಣು ಮಗು ಎಂದು ಹೆರಿಗೆ ವಾರ್ಡ್ ಸಿಬ್ಬಂದಿಗಳು ಶಾಕ್ ಕೊಟ್ಟಿದ್ದಾರೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಮಗು ಅದಲು ಬದಲು ಆಗುವ ಮೂಲಕ ಹೆತ್ತವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಏನೀದು ಗಂಡು ಮಗುವಿನ ಯಡವಟ್ಟು ಅಂತೀರಾ: ಇಲ್ಲಿದೆ ನೋಡಿ.

ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಯಡವಟ್ಟು; ಮಗು ಅದಲು ಬದಲು, ಹೆತ್ತವರು ಕಂಗಾಗಲು
ಜಿಲ್ಲಾಸ್ಪತ್ರೆ ವೈದ್ಯರು
Follow us on

ಶಿವಮೊಗ್ಗ,ಅ.12: ಮೆಗ್ಗಾನ್ ಜಿಲ್ಲಾಸ್ಪತ್ರೆ(Megan Hospital) ಯಲ್ಲಿ ಒಂದಲ್ಲ ಒಂದು ಅವಾಂತರಗಳು ನಡೆಯುತ್ತಿರುತ್ತವೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಮಗು ಅದಲು ಬದಲು ಆಗಿದೆ ಎನ್ನುವ ಗೊಂದಲ ಶುರುವಾಗಿದೆ. ಶಿಕಾರಿಪುರದ ಸಬೀನ್ ಬಾನು ಎಂಬುವವರು ಇಂದು(ಅ.12) ಬೆಳಗ್ಗೆ ಹೆರಿಗೆ ಆಗಿದೆ. ತಾಯಿ ಮತ್ತು ತಂದೆ ಕುಟುಂಬಸ್ಥರಿಗೆ ನಿಮಗೆ ಗಂಡು ಮಗು ಆಗಿದೆ ಎಂದಿದ್ದಾರೆ. ಈ ಸುದ್ದಿಯಿಂದ ಸಬೀನಾ ಮತ್ತು ಪತಿ ಕುಟುಂಬಸ್ಥರು ಸಂತಸಗೊಂಡಿದ್ದರು. ಮಗು ಹುಟ್ಟಿದ ಒಂದು ಗಂಟೆಯಲ್ಲಿ ಗಂಡು ಮಗು ನಿಮ್ಮದಲ್ಲ, ನಿಮಗೆ ಹೆಣ್ಣು ಮಗು ಆಗಿದೆ ಎಂದು ಗಂಡು ಮಗುವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಹೌದು, ನವಜಾತ ಶಿಶುವಿಗೆ ಕೈಗೆ ಹಾಕಿದ ಟ್ಯಾಗ್​ನಿಂದ ಈ ಯಡವಟ್ಟು ಸಂಭವಿಸಿದೆ.

ಮಗು ಹುಟ್ಟಿದ ತಕ್ಷಣ ಯಾವ ಮಗು ಮತ್ತು ತಾಯಿಯ ಹೆಸರು ಟ್ಯಾಗ್ ಮೇಲೆ ಬರೆಯುತ್ತಾರೆ. ಹೀಗೆ ಸಬೀನಾಗೆ ಗಂಡು ಮಗು ಆಗಿದೆ ಎನ್ನುವ ಟ್ಯಾಗ ಕೈಮೇಲೆ ಇತ್ತು. ತಮಗೆ ಗಂಡು ಮಗುವಾಗಿದೆ ಎಂದು ಸಬೀನಾ ಕುಟುಂಬಸ್ಥರು ಖುಷಿ ಪಡುತ್ತಿದ್ದರು. ಆದ್ರೆ, ಕೇವಲ ಒಂದೇ ಗಂಟೆಯಲ್ಲಿ ಗಂಡು ಮಗು ಸಬೀನಾದಲ್ಲ ಅದು ಕಾವ್ಯ ಎನ್ನುವ ತಾಯಿಯದ್ದು ಎನ್ನುವುದು ಗೊತ್ತಾಗಿದೆ. ಸಬೀನಾಗೆ ಹೆಣ್ಣು ಮಗು ಆಗಿದೆ. ಆ ಹೆಣ್ಣು ಮಗುವನ್ನು ಸಬೀನಾಗೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ಮುಂದಾಗಿದ್ದರು. ಇದಕ್ಕೆ ಸಬೀನಾ ಪತಿ ಮತ್ತು ಕುಟುಂಬಸ್ಥರು ವಿರೋಧ ಮಾಡಿದ್ದಾರೆ. ತನ್ನ ಪತ್ನಿಗೆ ಗಂಡು ಆಗಿದೆ. ಮಗುವಿನ ಕೈಮೇಲೆ ಟ್ಯಾಗ್ ಕೂಡಾ ಆಸ್ಪತ್ರೆಯವರೇ ಹಾಕಿದ್ದಾರೆ. ಈಗ ಹೆಣ್ಣು ಮಗು ಎಂದು ಸುಳ್ಳು ಹೇಳುತ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ದಾವಣಗೆರೆ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಮಗು ಅದಲು ಬದಲು; ಪಾಲಕರ ಆರೋಪ

ಈ ಸುದ್ದಿಯು ತಿಳಿಯುತ್ತಿದ್ದಂತೆ ಹೆರಿಗೆ ವಾರ್ಡ್ ಮುಂದೆ ಜನರು ಸೇರಿಕೊಂಡಿದ್ದು, ಮೆಗ್ಗಾನ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಲು ಶುರುಮಾಡಿದರು. ನಮ್ಮ ಮಗು ಯಾವುದು ಎನ್ನುವುದನ್ನು ವೈದ್ಯರೇ ತೀರ್ಮಾನ ಮಾಡಲಿ. ಮೊದಲು ಗಂಡು ಮಗು ಎಂದು ಹೇಳಿ, ಈಗ ಹೆಣ್ಣು ಮಗು ಎಂದು ಹೇಳುತ್ತಿರುವುದು ಸರಿಯಿಲ್ಲ. ಹೆರಿಗೆ ವಾರ್ಡ್​ನಲ್ಲಿ ಸಿಬ್ಬಂದಿಗಳು ತಪ್ಪಿನಿಂದ ಗಂಡು ಮತ್ತು ಹೆಣ್ಣು ಮಗು ಎನ್ನುವ ಗೊಂದಲ ಸೃಷ್ಟಿ ಮಾಡಿದ್ದಾರೆಂದು ಸಬೀನಾ ಪತಿ ಮತ್ತು ಅವರ ತಾಯಿ ನೇರವಾಗಿ ಆರೋಪ ಮಾಡಿದ್ದಾರೆ.

ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಹುಟ್ಟಿದ ನವಜಾತ ಶಿಶುವಿನ ಕೈಗೆ ಟ್ಯಾಗ್ ತಪ್ಪಾಗಿ ಹಾಕಿದ್ದರಿಂದ ಈ ಗಂಡು ಮತ್ತು ಹೆಣ್ಣು ಮಗುವಿನ ಗೊಂದಲ ಶುರುವಾಗಿತ್ತು. ಕಾವ್ಯ ಎನ್ನುವ ಮಹಿಳೆಗೆ ಗಂಡು ಮಗು ಆಗಿದೆ. ಆ ಮಗುವಿನ ಕೈಗೆ ಕಾವ್ಯ ತಾಯಿಯ ಹೆಸರು ಬರೆಯುವ ಬದಲಿಗೆ ಸಬೀನಾ ಎಂದು ಬರೆದಿದ್ದಾರೆ. ಅದರ ಬಳಿಕ ಮಗುವಿನ ತಂದೆ ಮತ್ತು ಸಂಬಂಧಿಗಳಿಗೆ ಗಂಡು ಮಗುವನ್ನು ತೋರಿಸಿದ್ದಾರೆ. ಸ್ವಲ್ಪ ಹೊತ್ತು ಆದ ಬಳಿಕ ಕಾವ್ಯಗೆ ಹೆಣ್ಣು ಮಗುವನ್ನು ಕೊಡಲು ಹೋಗಿದ್ದಾರೆ. ಕಾವ್ಯ ತನಗೆ ಗಂಡು ಆಗಿತ್ತು. ಹೆಣ್ಣು ಮಗು ಯಾಕೇ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಗಲಿಬಿಲಿಯಾದ ಸಿಬ್ಬಂದಿಗಳು ಗಂಡು ಮಗು ಹುಡುಕಾಡಿದ್ಧಾರೆ. ಅದು ಆಗಲೇ ಸಬೀನಾ ಕುಟುಂಬಸ್ಥರ ಕೈ ಸೇರಿತ್ತು.

ಇದನ್ನೂ ಓದಿ:ಹುಬ್ಬಳ್ಳಿ ಕಿಮ್ಸ್​ನಲ್ಲಿ ಜನಿಸಿದ ಮಗು ಅದಲು ಬದಲು; ಗಂಡಿನ ಬದಲಾಗಿ ಪಾಲಕರಿಗೆ ಹೆಣ್ಣು ಮಗು ನೀಡಿದ ವೈದ್ಯರು

ತಮಗೆ ಆಗಿರುವ ಮಗುವಿನ ಸತ್ಯ ಬಾಯ್ಬಿಟ್ಟ ತಾಯಿಂದಿರು

ಸಬೀನಾ ಕುಟುಂಬಸ್ಥರಿಂದ ಮಗುವನ್ನು ಸಿಬ್ಬಂದಿಗಳು ವಾಪಸ್ ಪಡೆದಿದ್ಧಾರೆ. ಬಳಿಕ ಆಸ್ಪತ್ರೆಯ ಹೊರಗೆ ಸಬೀನಾ ಕುಟುಂಬಸ್ತರು ಆಕ್ರೋಶ ಹೊರಹಾಕಿದ್ದರು. ಈ ಗಲಾಟೆಯ ಬಳಿಕ ಎಚ್ಚೆತ್ತ ಮೆಗ್ಗಾನ್ ಜಿಲ್ಲಾಶ್ಪತ್ರೆಯ ಅಧಿಕಾರಿಗಳು. ಹೆರಿಗೆ ಆದ ಬಳಿಕ ಇಬ್ಬರು ಬಾಣಂತಿಯರಿಗೆ ಅವರಿಗೆ ಆಗಿರುವ ಮಗುವನ್ನು ತೋರಿಸಿದ್ದಾರೆ. ಕಾವ್ಯಗೆ ಗಂಡು ಮತ್ತು ಸಬೀನಾಗೆ ಹೆಣ್ಣು ಮಗು ಎನ್ನುವ ಮಾಹಿತಿ ನೀಡಿದ್ದರು. ಹೆರಿಗೆ ಆದ ಬಳಿಕ ಅಸ್ವಸ್ಥಗೊಂಡಿರುವ ಬಾಣಂತಿಯರು ಚೇತರಿಸಿಕೊಳ್ಳುತ್ತಿದ್ದರು. ಈ ನಡುವೆ ಈ ಮಗುವಿನ ಅದಲು ಬದಲು ಪ್ರಕರಣ ನಡೆದು ಹೋಗಿದೆ. ಸಬೀನಾ ಪೋಷಕರು ಗಂಡು ಮಗು ಎಂದು ಪಟ್ಟು ಹಿಡಿದಿದ್ದರು. ಅಸ್ಪತ್ರೆಯ ವೈದ್ಯರು ಡಿಎನ್​ಎ ಟೇಸ್ಟ್ ಗೆ ಮುಂದಾಗಿದ್ದರು. 15 ದಿನ ವರದಿ ಬಂದ ಬಳಿಕ ನಿಮಗೆ ಮಗುವನ್ನು ಕೊಡುವುದಾಗಿ ಹೇಳಿದ್ದರು. ಬಳಿಕ ಇಬ್ಬರು ತಾಯಂದಿರಿಗೆ ವಾಸ್ತವ ಸಂಗತಿ ತಿಳಿಸಿದ್ದಾರೆ. ಇಬ್ಬರು ಬಾಣಂತಿಯರು ತಮಗೆ ಆಗಿರುವ ಮಗುವನ್ನು ಈಗ ಸ್ವೀಕರಿಸಿದ್ದಾರಂತೆ. ಕಾವ್ಯಗೆ ಗಂಡು ಮತ್ತು ಸಬೀನಾಗೆ ಹೆಣ್ಣು ಮಗುವನ್ನು ವೈದ್ಯರು ನೀಡಿದ್ದಾರೆ. ಕೊನೆಗೂ ತಾಯಿಂದಿರು ತಮಗೆ ಆಗಿರುವ ಮಗುವಿನ ಸತ್ಯ ಹೇಳಿದ್ದರಿಂದ ವಿವಾದಕ್ಕೆ ತೆರೆ ಬಿದ್ದಿದೆ.

ಮಗು ಅದಲು ಬದಲು ಪ್ರಕರಣ; ಮೆಗ್ಗಾನ್ ಆಸ್ಪತ್ರೆ ಸರ್ಜನ್ ಹೇಳಿದ್ದಿಷ್ಟು

ಶಿವಮೊಗ್ಗ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್​ನಲ್ಲಿ ಮಗು ಅದಲು ಬದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಸರ್ಜನ್ ಡಾ.ಸಿದ್ದನಗೌಡ ಮಾತನಾಡಿ ‘
ಸಬೀನಾಗೆ ಹೆಣ್ಣು ಮಗುವಾಗಿತ್ತು, ಕಾವ್ಯಾಗೆ ಗಂಡು ಮಗು ಜನಿಸಿತ್ತು. ಹೆರಿಗೆ ವಾರ್ಡ್​ ಸಿಬ್ಬಂದಿ ನಿರ್ಲಕ್ಷ್ಯದಿಂದ ಗೊಂದಲ ಸೃಷ್ಟಿಯಾಗಿತ್ತು. ಗಂಡು ಮಗುವಿನ ಕೈಗೆ ತಾಯಿ ಸಬೀನಾ ಎನ್ನುವ ಟ್ಯಾಗ್ ಹಾಕಿದ್ದರು. ಸ್ವಲ್ಪ ಹೊತ್ತಿನ ನಂತರ ಅದಲು ಬದಲಾಗಿರುವುದು ಗಮನಕ್ಕೆ ಬಂದಿದೆ. ಸಬೀನಾ ಕುಟುಂಬಸ್ಥರಿಂದ ಗಂಡು ಮಗುವನ್ನು ವಾಪಸ್ ಪಡೆದಿದ್ದ ಸಿಬ್ಬಂದಿ, ಹೆರಿಗೆ ವಾರ್ಡ್​ನಲ್ಲೇ ತಾಯಂದಿರಿಗೆ ಮಗುವನ್ನು ತೋರಿಸಿರುತ್ತಾರೆ. ಗಂಡು ಮಗುವಿಗೆ ಟ್ಯಾಗ್​ ಹಾಕುವಾಗ ಸಿಬ್ಬಂದಿ ಎಡವಟ್ಟಿನಿಂದ ಈ ಗೊಂದಲ ಸೃಷ್ಠಿ ಆಗಿದೆ. ಬಳಿಕ ಇಬ್ಬರು ತಾಯಂದಿರು ತಮಗೆ ಆಗಿರುವ ಮಗುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಬೀನಾಗೆ ಹೆಣ್ಣು ಮಗು, ಕಾವ್ಯಾಗೆ ಗಂಡು ಮಗು ಹಸ್ತಾಂತರ ಮಾಡಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ