Love Marriage; ಯುವತಿ ಪೋಷಕರಿಂದ ಜೀವ ಬೆದರಿಕೆ, ಎಸ್ಪಿಗೆ ದೂರು ಕೊಟ್ಟ ಪ್ರೇಮಿಗಳು

ಪದವಿ ವ್ಯಾಸಾಂಗ ಮಾಡುತ್ತಿರುವಾಗಲೇ ಯುವತಿಗೆ ಲವ್ ಶುರುವಾಗಿತ್ತು. ಆದರೆ, ಇಬ್ಬರು ಬೇರೆ ಬೇರೆ ಜಾತಿ. ಈ ನಡುವೆ ಪ್ರೇಮಿಗಳು ಗಪ್ ಚುಪ್ ಆಗಿ ಕಳೆದ ಎರಡು ತಿಂಗಳ ಹಿಂದೆ ತಮಿಳುನಾಡಿಗೆ ಹೋಗಿ ಮದುವೆ ಆಗಿದ್ದಾರೆ. ಮದುವೆ ಆಗಿರುವ ಸುದ್ದಿಯು ಯುವತಿಯ ಪೋಷಕರಿಗೆ ಗೊತ್ತಾಗುತ್ತಿದ್ದಂತೆ ಅವರು ಕೆರಳಿದ್ದು, ಈ ಲವ್ ಮ್ಯಾರೇಜ್​ಗೆ ಈಗ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದಡೆ ಮಗಳ ಭವಿಷ್ಯಕ್ಕೆ  ಪೋಷಕರು ಹೋರಾಡುತ್ತಿದ್ದರೆ, ಮತ್ತೊಂದಡೆ ಮಗಳು ಪ್ರೀಯಕರನಿಗಾಗಿ ಪೋಷಕರ ವಿರುದ್ದವೇ ಎಸ್ಪಿ ಕಚೇರಿ ಮೆಟ್ಟಿಲು ಏರಿದ್ದಾಳೆ.

Love Marriage; ಯುವತಿ ಪೋಷಕರಿಂದ ಜೀವ ಬೆದರಿಕೆ, ಎಸ್ಪಿಗೆ ದೂರು ಕೊಟ್ಟ ಪ್ರೇಮಿಗಳು
ಲವ್​ ಮ್ಯಾರೇಜ್​ಗೆ ಯುವತಿ ಮನೆಯವರ ವಿರೋಧ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2023 | 5:53 PM

ಶಿವಮೊಗ್ಗ, ಅ.13: ನಗರದ ವಿನೋಬನಗರ ಕಾಶಿಪುರ ಬಡಾವಣೆಯಲ್ಲಿ ಅಮೃತ ಮತ್ತು ಗೋಪಿನಾಥ್ ಇಬ್ಬರು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರೀತಿ(Love) ಮಾಡುತ್ತಿದ್ದಾರೆ. ಯುವತಿಯು ಲಿಂಗಾಯತ ಜಾತಿಗೆ ಸೇರಿದರೆ, ಯುವಕನು ತಮಿಳು ಜಾತಿಗೆ ಸೇರಿದ್ದಾನೆ. ಆತ ಇದೇ ಕಾಶಿಪುರದ ಮುಖ್ಯ ರಸ್ತೆಯಲ್ಲಿ ಪುಟ್ಟ ಗೋಬಿ ರೈಸ್ ಅಂಗಡಿ ಮಾಡಿಕೊಂಡು ಉಪಜೀವನ ಮಾಡಿಕೊಂಡಿದ್ದಾನೆ. ಅಮೃತ ಪದವಿ ವ್ಯಾಸಾಂಗ ಮಾಡಿಕೊಂಡಿದ್ದಾಳೆ. ಕಳೆದ ಎರಡು ತಿಂಗಳ ಹಿಂದೆ ಪ್ರೇಮಿಗಳು ಕದ್ದು ಮುಚ್ಚಿ ಹೋಗಿ ಅಗಸ್ಟ್ 15 ರಂದು ತಮಿಳುನಾಡಿನ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಈ ವಿಷಯ ಯುವತಿಯ ಪೋಷಕರಿಗೆ ಗೊತ್ತಾಗಿದ್ದು, ಮಗಳನ್ನು ಮುದ್ದಾಗಿ ಸಾಕಿ, ಕನಸು ಕಟ್ಟಿಕೊಂಡಿರುವ ಪೋಷಕರಿಗೆ ದೊಡ್ಡ ಆಘಾತವಾಗಿದೆ.

ಮಗಳು ತನ್ನ ಜೀವನ ಹಾಳು ಮಾಡಿಕೊಂಡಲೆಂದು ಪೋಷಕರು ಗಾಬರಿಯಾಗಿದ್ದಾರೆ. ಮಗಳ ಈ ಲವ್ ಮ್ಯಾರೇಜ್​ಗೆ ಯುವತಿಯ ತಂದೆ ವಿಜಯ್​ ಹಾಗೂ ತಾಯಿ ಸುನೀತ ಮತ್ತು ಸಂಬಂಧಿ ಗೌತಮ್ ಇವರು ವಿರೋಧ ಮಾಡಿದ್ದಾರೆ. ವಿನೋಬ ನಗರದಲ್ಲಿ ಮಗಳು ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು. ಈಗ ಪೊಲೀಸರು ಇಬ್ಬರನ್ನು ಪತ್ತೆ ಮಾಡಿಕೊಂಡು ಬಂದಿದ್ದಾರೆ. ಇಬ್ಬರು ಮಾತ್ರ ನಾವು ಮೇಜರ್. ಮದುವೆಯಾಗಿದ್ದೇವೆ ಎನ್ನುತ್ತಿದ್ದಾರೆ. ಇನ್ನು ಯುವತಿ ತನ್ನ ಪೋಷಕರ ವಿರುದ್ದವೇ ತನಗೆ ಮತ್ತು ತನ್ನ ಪ್ರೇಮಿಗೆ ಜೀವ ಭಯ ಇದೆ ಎಂದು ಶಿವಮೊಗ್ಗ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾಳೆ.

ಇದನ್ನೂ ಓದಿ:Love, Marriage and Dhoka: ಪ್ರಿಯಕರನಿಗಾಗಿ ಗಂಡನನ್ನು ತೊರೆದು ಬಂದ ಕೋಲಾರದ ಯುವತಿಗೆ ಈಗ ತ್ರಿಶಂಕು ಸ್ಥಿತಿ!

ರಕ್ಷಣೆ ಬೇಕೆಂದು ಎಸ್ಪಿ ಕಚೇರಿಗೆ ಬಂದು ದೂರು ಕೊಟ್ಟ ಪ್ರೇಮಿಗಳು

ಇನ್ನು ಇಬ್ಬರದ್ದು ಬೇರೆ ಬೇರೆ ಜಾತಿ ಆಗಿದ್ದು, ಯುವಕ ಮತ್ತು ಯುವತಿ ಬರೊಬ್ಬರಿ ಮೂರ್ನಾಲ್ಕು ವರ್ಷದಿಂದ ಪ್ರೀತಿ ಮಾಡಿಕೊಂಡಿದ್ದರು. ಇವರ ಪ್ರೀತಿ ವಿಚಾರ ಕುಟುಂಬಕ್ಕೆ ಗೊತ್ತಾಗಿದೆ. ನಂತರ ಯುವತಿಗೆ ಪೋಷಕರು ಇದನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಯುವತಿಯು ಮಾತ್ರ ಪ್ರೀತಿಸಿದ ಯುವಕನೇ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಈ ನಡುವೆ ಪೋಷಕರ ಕಣ್ಣು ತಪ್ಪಿಸಿ ಮನೆಯಿಂದ ಅಮೃತ ಪ್ರೀಯಕರನ ಜೊತೆ ಓಡಿ ಆಗಿದ್ದಳು. ಬಳಿಕ ಪ್ರೇಮಿಯ ಜೊತೆ ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದಾಳೆ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರಿಂದ ಪೋಷಕರು ಇವರಿಗೆ ತೊಂದರೆ ಕೊಡುತ್ತಿದ್ದಾರಂತೆ. ಜೊತೆಗೆ ಪ್ರೇಮಿಗಳಿಗೆ ಯುವತಿಯ ತಂದೆ ಸ್ನೇಹಿತರು ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮದುವೆಯಾಗಿರುವ ತಮಗೆ ಪೊಲೀಸ್ ರಕ್ಷಣೆ ಬೇಕೆಂದು ಯುವತಿಯು ಪ್ರೇಮಿಯ ಜೊತೆ ಎಸ್ಪಿ ಕಚೇರಿಗೆ ಬಂದು ದೂರು ಕೊಟ್ಟಿದ್ದಾಳೆ.

ಪ್ರೀತಿ ಅಂದ ಮೇಲೆ ಇಲ್ಲಿ ಜಾತಿ, ಅಂತಸ್ತು ಯಾವುದು ಇರುವುದಿಲ್ಲ. ಅಮೃತ ಮತ್ತು ಗೋಪಿನಾಥ್ ನಡುವೆ ಕೂಡ ಈಗ ಇದೇ ಆಗಿದೆ. ಬಡ ಬೇರೆ ಜಾತಿಯ ಯುವಕನನ್ನು ಯುವತಿಯು ಪ್ರೀತಿಸಿದ್ದು, ಸಮಸ್ಯೆಗೆ ಕಾರಣವಾಗಿದೆ. ಏನಾದರೂ ಮಾಡಿ ಇಬ್ಬರನ್ನು ದೂರ ಮಾಡಬೇಕೆಂದು ಯುವತಿಯ ಪೋಷಕರು ಮತ್ತು ಸ್ನೇಹಿತರು ಮುಂದಾಗಿದ್ದಾರೆ. ಆದ್ರೆ, ಯುವತಿ ಮಾತ್ರ ಚಲನಚಿತ್ರದಂತೆ ತನ್ನ ಪ್ರೀತಿಗಾಗಿ ಹೋರಾಟಕ್ಕೆ ಮುಂದಾಗಿದ್ದಾಳೆ. ಹೆತ್ತವರ ವಿರುದ್ಧವೇ ದೂರು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಸದ್ಯ ಎಸ್ಪಿ ಅವರು ವಿನೋಬ ನಗರ ಪೊಲೀಸರಿಗೆ ಈ ಲವ್ ಮ್ಯಾರೇಜ್ ಪ್ರಕರಣದ ಸೂಕ್ತ ತನಿಖೆಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ