Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಾವಿದರ ಬಳಿ ಕಮಿಷನ್ ಕೇಳಿದವರು ಲಕ್ವಾ ಹೊಡೆದು ಸಾಯುತ್ತಾರೆ: ಕೆಎಸ್ ಈಶ್ವರಪ್ಪ

ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್​ ವಿರುದ್ಧವೂ ಕಮಿಷನ್ ಆರೋಪ ಕೇಳಿಬರಲಾರಂಭಿಸಿದೆ. ಈ ಹಿಂದೆ ಅನೇಕ ಆರೋಪಗಳನ್ನು ಬಿಜೆಪಿ ಮಾಡತ್ತು. ಇದೀಗ ಮೈಸೂರು ದಸರಾದಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಸಿಗಬೇಕಾದರೆ ಕಮಿಷನ್ ನೀಡಬೇಕು ಎಂದು ಅಧಿಕಾರಿಗಳು ಕೇಳಿದ್ದಾಗಿ ಸರೋದ್ ವಾದಕ ಪಿ.ಟಿ.ರಾಜೀವ್ ತಾರಾನಾಥ್ ಆರೋಪಿಸಿದ್ದು ಸುದ್ದಿಯಾಗಿದೆ. ಇದು ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದ್ದು, ತನಿಖೆಗೆ ಕೆಎಸ್​ ಈಶ್ವರಪ್ಪ ಆಗ್ರಹಿಸಿದ್ದಾರೆ.

ಕಲಾವಿದರ ಬಳಿ ಕಮಿಷನ್ ಕೇಳಿದವರು ಲಕ್ವಾ ಹೊಡೆದು ಸಾಯುತ್ತಾರೆ: ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ
Follow us
Basavaraj Yaraganavi
| Updated By: Rakesh Nayak Manchi

Updated on: Oct 14, 2023 | 1:36 PM

ಶಿವಮೊಗ್ಗ, ಅ.14: ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತಾರಾಷ್ಟ್ರೀಯ ಖ್ಯಾತೀಯ ಸರೋದ್​ ವಾದಕ ಪಂ. ರಾಜೀವ ತಾರಾನಾಥ ಅವರ ಬಳಿಯೇ ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa), ಕಲಾವಿದರ ಬಳಿ ಕಮಿಷನ್ ಕೇಳಿದವರು ಮತ್ತು ಅವರ ಮಕ್ಕಳು ಲಕ್ವಾ ಹೊಡೆದು ಸಾಯುತ್ತಾರೆ ಎಂದಿದ್ದಾರೆ.

ಕಲಾವಿದರ ಬಳಿ ಲಂಚದ ಆಮಿಷದ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ವಿರುದ್ಧ ತನಿಖೆ ಆಗಬೇಕು. ಕಲಾವಿದರ ಬಳಿ ಕಮೀಷನ್ ಕೇಳುವ ಮೂಲಕ ಅವಮಾನ ಮಾಡಿದ್ದಾರೆ. ಇವರು ಮತ್ತು ಇವರ ಮಕ್ಕಳು ಲಕ್ವಾ ಹೊಡೆದು ಸಾಯುತ್ತಾರೆ ಎಂದರು.

ಇದನ್ನೂ ಓದಿ: ಮೈಸೂರು ದಸರಾದಲ್ಲೂ ಭ್ರಷ್ಟಾಚಾರದ ಘಾಟು; ಸರೋದ್​ ವಾದಕ ಪಂ. ರಾಜೀವ್​ ತಾರಾನಾಥರ ಬಳಿ ಕಮಿಷನ್ ಕೇಳಿದ ಅಧಿಕಾರಿಗಳು

ಇದು ಮುಖ್ಯಮಂತ್ರಿ ಅವರ ಕ್ಷೇತ್ರ ಆಗಿದೆ. ಕಮಿಷನ್ ದಂಧೆಗೆ ಕಡಿವಾಣ ಹಾಕಬೇಕು. ಇಂತಹ ಉಡಾಫೆ ಮುಖ್ಯಮಂತ್ರಿ ಮತ್ತು ಡಿಸಿಎಂ ಅವರನ್ನು ನಾನು ರಾಜ್ಯ ಎಂದೂ ಕಂಡಿರಲಿಲ್ಲ. ಅವನಿಗೆ ಆಯನೂರಿಗೆ ಬುದ್ಧಿ ಇಲ್ಲ. ನಿಮಗೂ ಬುದ್ಧಿ ಇಲ್ವಾ? ನಿಮಗೆ ಬುದ್ಧಿ ಇದೆ ಅಂದುಕೊಂಡಿರುವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕೆಪಿಸಿಸಿ ವಕ್ತಾಯ ಅಯನೂರು ಮಂಜುನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು ದಸರಾ ವಿಶ್ವ ಪ್ರಸಿದ್ಧ ಆಗಿದೆ. ಈ ದಸರಾದಲ್ಲಿ ಯಾರೋ ನಾಲ್ವರು ಬಂದು ಮಹಿಷಾಸುರನ ದಸರಾ ಮಾಡಲು ಹೊರಟಿದ್ದರು. ಅವರನ್ನು ಒದ್ದು ಒಳಗೆ ಹಾಕಬೇಕಿತ್ತು. ಅವರನ್ನು ಪತ್ರಿಕಾಗೋಷ್ಠಿಯಲ್ಲೇ ಬಂಧಿಸಬೇಕಿತ್ತು. ಅದನ್ನೂ ಬಿಟ್ಟು ಚಾಮುಂಡಿ ಬೆಟ್ಟಕ್ಕೆ ನಿಷೇಧ ಹೇಳಿದ್ದು ತಪ್ಪು ಎಂದು ಈಶ್ವರಪ್ಪ ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ