ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆ ಕಣ ರಂಗೇರಿದೆ. ಚುನಾವಣೆಯಲ್ಲಿ ಗೆಲ್ಲಲು ಪಕ್ಷಗಳು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಹಣ ಹಂಚುತ್ತಿರುವುದು ಸೇರಿದಂತೆ ಅನೇಕ ಅವ್ಯವಹಾರಗಳ ಬಗ್ಗೆ ಮಾಹಿತಿ ಬಯಲಾಗುತ್ತಿದೆ. ಪ್ರತಿಷ್ಟೆಯ ಕಣವಾಗಿ ಎಮ್ಎಲ್ಸಿ ಚುನಾವಣೆ ನಡೆಯುತ್ತಿದ್ದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷ ನಾನಾ ರೀತಿಯ ತಂತ್ರವನ್ನು ಹೆಣೆಯುತ್ತಿದೆ.
ಸದ್ಯ ಪರಿಷತ್ ಚುನಾವಣೆ ಹಿನ್ನೆಲೆ ಆಪರೇಷನ್ ಆಟ ಶುರುವಾಗಿದೆ. ಬೆಳಗ್ಗೆ ಬಿಜೆಪಿ ಸೇರ್ಪಡೆಯಾಗಿದ್ದವರು ಸಂಜೆ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಒಂದೇ ದಿನದಲ್ಲಿ 2 ಬಾರಿ ಪಕ್ಷ ಬದಲಿಸಿದ್ದಾರೆ. ಬೆಳಿಗ್ಗೆ ಆಪರೇಶನ್ ಬಿಜೆಪಿ ಆದ್ರೆ ಸಂಜೆ ಆಪರೇಶನ್ ಕಾಂಗ್ರೆಸ್ ಆಗಿ ಮತ್ತೆ ಕಾಂಗ್ರೆಸ್ಗೆ ಮರಳಿದ್ದಾರೆ.
ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ನಿನ್ನೆ ಬೆಳಗ್ಗೆ ನಡೆದ ಬಿಜೆಪಿ ಎಂಎಲ್ಸಿ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಸಾಗರ ಶಾಸಕ ಹರತಾಳು ಹಾಲಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯೆ ಪೂರ್ಣಿಮಾ ಬಿಜೆಪಿ ಸೇರಿದ್ದರು. ಸಂಜೆಯಾಗುವಷ್ಟರಲ್ಲಿ ಮತ್ತೆ ಮರಳಿ ಕಾಂಗ್ರೆಸ್‌ಗೆ ಸೇರಿದ್ದಾರೆ. ಮಾಜಿ ಶಾಸಕ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ವಾಪಸ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇದೀಗ ಮಾಜಿ ಮತ್ತು ಹಾಲಿ ಶಾಸಕರ ಪೈಪೋಟಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಹಣದ ದರ್ಬಾರ್; ಒಂದು ವೋಟಿಗೆ 1 ಲಕ್ಷ ರೂ.ವರೆಗೂ ಹಂಚಿಕೆ!