ಮದುವೆಯಾಗಿ (wedding) ಕೇವಲ 14 ತಿಂಗಳು ಆಗಿತ್ತು. ತುಂಬಾ ಆಸೆ ಪಟ್ಟು ಸುಂದರಿಯ ಮದುವೆಯಾಗಿದ್ದ ಪತಿಗೆ ಬಿಗ್ ಶಾಕ್. ಮದುವೆಯಾಗಿ ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಇಬ್ಬರ ನಡುವೆ ಹೊಂದಾಣಿಕೆ ಆಗುತ್ತಿರಲಿಲ್ಲ. ಈ ನಡುವೆ ಪತ್ನಿಯು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ನನವಿವಾಹಿತೆಯ ನಿಗೂಢ ಸಾವಿನ (suicide) ಕುರಿತು ಒಂದು ವರದಿ ಇಲ್ಲಿದೆ. ಶಿವಮೊಗ್ಗದ (shivamogga) ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರ ಎದುರು ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು. ಮಗಳ ಮದುವೆ ಮಾಡಿ ಇನ್ನೂ 14 ತಿಂಗಳು ಅಷ್ಟೇ ಆಗಿತ್ತು. ಮದುವೆ ಮಾಡಿದ ಸಂಭ್ರಮದ ಕ್ಷಣಗಳು ಮಾಸುವ ಮುನ್ನವೇ ಮಗಳು ಮೃತಪಟ್ಟಿದ್ದಾಳೆ. ಮಗಳ ಸಾವಿನ ದೊಡ್ಡ ಆಘಾತ ಹೆತ್ತವರಿಗೆ ಕಾಯಂ ಆಗಿ ಉಳಿದಿದೆ. ಮೃತಪಟ್ಟ ನವವಿವಾಹಿತೆಯ ಹೆಸರು ಧನ್ಯಶ್ರೀ (23). ಚಿಕ್ಕಮಗಳೂರು (chikmagalur) ಜಿಲ್ಲೆಯ ಎನ್ ಆರ್ ಪುರ ನಿವಾಸಿ.
ಶಿವಮೊಗ್ಗದ ಆರ್ ಎಂಎಲ್ ನಗರದ ಚಂದ್ರಶೇಖರ್ (26) ಎನ್ನುವ ಯುವಕನ ಜೊತೆ ಮದುವೆಯಾಗಿತ್ತು. ಶಿವಮೊಗ್ಗದ ಗಾಂಧಿಬಜಾರ್ ನ ವಾಸವಿ ಮ್ಯಾರೇಜ್ ಹಾಲ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿತ್ತು. ಪತಿ ಚಂದ್ರಶೇಖರ್ ವಾದ್ಯಮೇಳದ ತಂಡದಲ್ಲಿ ವಾಲಗ ನುಡಿಸುತ್ತಾನೆ. ಧಾರ್ಮಿಕ ಮತ್ತು ಸಭೆ ಸಮಾರಂಭ, ಮದುವೆ ಮುಂತಾದ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ವಾದ್ಯ ನುಡಿಸುತ್ತಿದ್ದನು.
ಬಿ.ಕಾಂ ವಿದ್ಯಾವಂತೆ ಮತ್ತು ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡಿದ ಪತಿ ಚಂದ್ರಶೇಖರ್ ನಡುವೆ ಹೊಂದಾಣಿಕೆ ಸಮಸ್ಯೆ ಎದುರಾಗಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಚಂದ್ರಶೇಖರ್ ತಂದೆಗೆ ಸ್ಟ್ರೋಕ್ ಆಗಿತ್ತು. ಮಗ ಮತ್ತು ಸೊಸೆ ನಡುವೆ ಜಗಳ ನೋಡಿದ ಹೆತ್ತವರು ನವದಂಪತಿಗಳು ಇಬ್ಬರೇ ಸಂಸಾರ ಮಾಡಲಿ ಅಂತಾ ತಮ್ಮ ಮೂಲ ಊರು ತಮಿಳುನಾಡಿಗೆ ವಾಪಸ್ ಹೋಗಿದ್ದರು.
ಪತಿ ಪತ್ನಿ ಇಬ್ಬರೇ ಮನೆಯಲ್ಲಿದ್ದರು. ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್ ಶುರುವಾಗಿದ್ದವು. ಇದರ ಮುಂದುವರೆದ ಭಾಗವಾಗಿ ನಿನ್ನೆ ಸಂಜೆ ಪತಿಯು ಸಂಗೀತ ಕಾರ್ಯಕ್ರಮಕ್ಕೆ ಹೋಗಬೇಕೆಂದು ಸ್ನಾನ ಮಾಡಲು ಹೋಗಿದ್ದಾನೆ. ಇದರ ನಡುವೆ ಬೆಡ್ ರೂಂ ನಲ್ಲಿ ಧನ್ಯಶ್ರೀ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸದ್ಯ ಮೃತಳ ಕುಟುಂಬಸ್ಥರು ವರದಕ್ಷಿಣಿಗಾಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಸದ್ಯ ದೊಡ್ಡಪೇಟೆ ಪೊಲೀಸರು ವಿಚಾರಣೆಗೆಂದು ಪತಿ ಚಂದ್ರಶೇಖರ್ ನನ್ನು ವಶಕ್ಕೆ ಪಡೆದಿದ್ದಾರೆ.
ಹೀಗೆ ಪತಿ ಮತ್ತು ಪತ್ನಿಯ ನಡುವೆ ವಿದ್ಯಾಭ್ಯಾಸದ ಸಮಸ್ಯೆ ಎದುರಾಗಿದೆ. ಎನ್ ಆರ್ ಪುರದ ತವರು ಮನೆಯಲ್ಲಿ ಚೆನ್ನಾಗಿಯೇ ಬೆಳೆದಿದ್ದ ಧನ್ಯಶ್ರೀಗೆ ಪತಿಯ ಮನೆಯಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಿದೆ. ಅವಳು ನೂರೆಂಟು ಕನಸು ಕಟ್ಟಿಕೊಂಡು ಮದುವೆಯಾಗಿದ್ದಳು. ಆದ್ರೆ ಪತಿಯು ಅವಳಿಗೆ ತಕ್ಕಂತೆ ಅಂತಸ್ತು ಮತ್ತು ವಿದ್ಯಾಭ್ಯಾಸ, ಆಲೋಚನೆಗಳ ಹೊಂದಾಣಿಕೆ ಆಗಲಿಲ್ಲ. ಈ ವಿಚಾರದಲ್ಲೇ ಪದೇ ಪದೇ ಇಬ್ಬರ ನಡುವೆ ಗಲಾಟೆ ಆಗುತ್ತಿದ್ದವು. ತನ್ನ ಬದುಕು ಹಾಳಾಯಿತು ಎನ್ನುವ ಕೊರಗು ಧನ್ಯಶ್ರೀಗೆ ಶುರುವಾಗಿತ್ತು.
ಮಾನಸಿಕವಾಗಿ ನೊಂದಿದ್ದ ಧನ್ಯಶ್ರೀ ಕೊನೆಗೂ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ನಿನ್ನೆ ಸಂಜೆ ನಗರದ ಪ್ರತಿಷ್ಠಿತ ದೇವಸ್ಥಾನಕ್ಕೆ ವಾಲ್ಗ ಊದಲು ಪತಿ ಚಂದ್ರಶೇಖರ್ ಸಿದ್ದರಾಗುತ್ತಿದ್ದನು. ಈ ಸಮದಯಲ್ಲಿ ಪತಿಯ ಗಡ್ಡದ ವಿಚಾರದಲ್ಲಿ ದಂಪತಿ ನಡುವೆ ಜಗಳವಾಗಿದೆ. ಪತಿಯು ಅತ್ತ ಸ್ನಾನಕ್ಕೆ ತೆರಳಿದ್ರೆ ಪತ್ನಿಯು ಇತ್ತ ಸಾವಿನ ಮನೆ ಸೇರಿದ್ದಳು. ಪತ್ನಿ ಧನ್ಯಶ್ರೀ ನೇಣು ಹಾಕಿಕೊಂಡಿದ್ದಾಳೆ ಎನ್ನುವುದು ಮೃತಳ ಗಂಡನ ಮನೆಯವರ ವಾದವಾಗಿದೆ.
ಧನ್ಯಶ್ರೀ ಆರ್ ಎಂಎಲ್ ನಗರದ ಸ್ವಂತ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಡ್ ರೂಮ್ ನಲ್ಲಿ ಸೀರೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆಂತೆ.. ಆದರೆ ಧನ್ಯಶ್ರೀ ತವರು ಮನೆಯವರು ಇದು ಕೊಲೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಲ್ಲ. ಪತಿಯೇ ಮಾನಸಿಕ ಕಿರುಕುಳದಿಂದ ಪತ್ನಿ ಮೃತಪಟ್ಟಿದ್ದಾಳೆಂದು ಮೃತಳ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇಂದು ಬೆಳಿಗ್ಗೆ ಮೆಗ್ಗಾನ್ ನಲ್ಲಿ ಚಂದ್ರಶೇಖರ್ ಕುಟುಂಬ ಮತ್ತು ಧನ್ಯಶ್ರೀ ಕುಟುಂಬ ಸಾವಿನ ಕುರಿತು ಗಲಾಟೆ ಆಗಿದೆ. ಮಗಳ ಸಾವಿಗೆ ಕಾರಣರಾದ ಗಂಡ ಮನೆಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಂಡ ಮನೆಯವರಿಗೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಟ್ಟಿಲ್ಲ. ಮರಣೋತ್ತರ ಪರೀಕ್ಷೆ ಆಗುತ್ತಿದ್ದಂತೆ ಮೃತಳ ಶರೀರವನ್ನು ಎನ್ ಆರ್ ಪುರಕ್ಕೆ ಕುಟಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯ ಅತ್ತೆಯು ತನ್ನ ನೋವು ಹೊರಹಾಕಿದ್ದಾರೆ.
ಮದುವೆಯಾಗಿ ಇನ್ನೂ ಒಂದು ವರ್ಷ ತುಂಬಿತ್ತು ಅಷ್ಟೆ. ನವ ದಂಪತಿಗಳಿಗೆ ಪರಸ್ಪರ ಅರ್ಥಮಾಡಿಕೊಳ್ಳಲು ಒಂದಿಷ್ಟು ಸಮಯಬೇಕಿತ್ತು. ಆದರೆ ಈ ನಡುವೆ ಪತ್ನಿಯು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ದೊಡ್ಡಪೇಟೆ ಪೊಲೀಸರಿಂದ ಧನ್ಯಶ್ರೀ ಸಾವಿನ ತನಿಖೆಯಿಂದ ಅಸಲಿ ಕಾರಣವೇನು ಎನ್ನುವ ರಹಸ್ಯ ಬಯಲು ಆಗಲಿದೆ.
ವರದಿ -ಬಸವರಾಜ್ ಯರಗಣವಿ, ಟವಿ 9, ಶಿವಮೊಗ್ಗ