ಡಿ.ಕೆ.ಶಿವಕುಮಾರ್ಗೆ E.D ನೋಟಿಸ್ ವಿಚಾರ: ವಾಗ್ದಾಳಿ ನಡೆಸಿದ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಜಾರಿನಿರ್ದೇಶನಾಲಯ ನೀಡಿದ ನೋಟಿಸ್ ವಿಚಾರವಾಗಿ ಮೊದಲು ಡಿಕೆಶಿ ಟಾರ್ಚರ್ ಕೊಡ್ತಿದ್ದಾರೆಂದು ಗೊಣಗಾಡುವುದನ್ನು ಬಿಡಲಿ ಎಂದಿದ್ದಾರೆ. ಇದರ ಜೊತೆ ಸಿದ್ದರಾಮಯ್ಯ, H.D.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಜಾರಿ ನಿರ್ದೇಶನಾಲಯ (E.D) ನೋಟಿಸ್ ನೀಡಿರುವ ವಿಚಾರವಾಗಿ, ಡಿಕೆಶಿಗೆ ಟಾರ್ಚರ್ ಕೊಡ್ತಿದ್ದಾರೆಂದು ಗೊಣಗಾಡುವುದನ್ನು ಮೊದಲು ಬಿಡಲಿ, ಕಾನೂನಿಗೆ ಗೌರವ ಕೊಡುತ್ತೇನೆ ಅಂತಾ ಹೇಳಲಿ ನೋಡೋಣ, ಪ್ರತಿ ಬಾರಿ ನೋಟಿಸ್ ಕೊಟ್ಟಾಗ ಈ ರೀತಿ ಹೇಳೋದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇ.ಡಿ, ಸಿಬಿಐ ಇತ್ತು ಎಂದು ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪ್ರಹ್ಲಾದ್ ಜೋಶಿ ಸಿಎಂ ಮಾಡಲು RSS ಹುನ್ನಾರ ಎಂಬ ಹೆಚ್ಡಿಕೆ ಹೇಳಿಕೆ ಕುರಿತು ಮಾತನಾಡಿದ ಕೆ.ಎಸ್.ಈಶ್ವರಪ್ಪ ಯಾರನ್ನ ಸಿಎಂ ಮಾಡಬೇಕೆಂಬುದು ಹೈಕಮಾಂಡ್ಗೆ ಬಿಟ್ಟ ವಿಚಾರ ಅದರ ಬಗ್ಗೆ ಬಾಯಿಗೆ ಬಂದಂತೆ ಮಾತಾಡೋದು ಹೆಚ್ಡಿಕೆಗೆ ಶೋಭೆ ತರುವುದಿಲ್ಲ. ಬಿಜೆಪಿಗೆ ಬಹುಮತ ಬರುತ್ತೆ ಅಂತಾ H.D.ಕುಮಾರಸ್ವಾಮಿಗೆ ಗೊತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಜಾತಿಯ ವಿಷಬೀಜ ಬಿತ್ತಿ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಸಿದ್ದರಾಮಯ್ಯ ಮಾಡಿದ ಕುತಂತ್ರದಿಂದ ಸಿಎಂ ಸ್ಥಾನ ಕಳೆದುಕೊಂಡ್ರು, ಸಮಾಜದಲ್ಲಿ ಸಾಕಷ್ಟು ಗೌರವಯುತವಾದ ಜಾತಿಗಳಲ್ಲಿ ಬ್ರಾಹ್ಮಣರು ಒಬ್ಬರು, ಅಂತರವನ್ನು ಅಪಮಾನ ಮಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಸಿದ್ದರಾಮಯ್ಯ ಹಿಂದೂನಾ ಅಲ್ವಾ ಅನ್ನೋದನ್ನು ಹೇಗೆ ಹೇಳಲಿ, ವೈಚಾರಿಕವಾಗಿ ಏನು ಹೇಳಬೇಕು ಅನ್ನೋದು ಅವರಿಗೆ ಗೊತ್ತಿಲ್ಲ. ಮುಸ್ಲಿಮರ ಮತ ಎಷ್ಟು ಮುಖ್ಯವೋ ಹಿಂದೂಗಳ ಮತವೂ ಮುಖ್ಯವಾಗಿದೆ. ಹಿಂದೂ ನಂಬುತ್ತೇನೆ, ಹಿಂದುತ್ವ ನಂಬಲ್ಲ ಅಂತಾ ಹೇಗೆ ಹೇಳುತ್ತಾರೆ. ನಾನು ಮುಸಲ್ಮಾನ, ಮುಸಲ್ಮಾನತ್ವವನ್ನು ನಂಬಲ್ಲ ಅಂತಾ ಹೇಳಲಿ ನೋಡೋಣ. ಹಿಂದುತ್ವ ನಂಬಲ್ಲ ಅಂತಾ ಹೇಳಿದ್ರೆ ಸಿದ್ದರಾಮಯ್ಯ ಮುಸಲ್ಮಾನನಾ? ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ವಿಚಾರ ಏನು ಅಂತಾ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:24 pm, Wed, 8 February 23