Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಜಮೀನಿನಲ್ಲಿ ರಸ್ತೆ ಮಾಡಲು ರಾಜಕೀಯ ಹುನ್ನಾರ ಆರೋಪ: ಸಚಿವ ಎಂಟಿಬಿ ನಾಗರಾಜ್ ವಿರುದ್ದ ಆಕ್ರೋಶ‌

ಖಾಸಗಿ ಜಮೀನಿನಲ್ಲಿ ರಸ್ತೆ ಮಾಡಲು ಹೊರಟ್ಟಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ವಿರುದ್ದ ರಾಜಕೀಯ ಹುನ್ನಾರ ಆರೋಪ ಕೇಳಿಬಂದಿದೆ.

ಖಾಸಗಿ ಜಮೀನಿನಲ್ಲಿ ರಸ್ತೆ ಮಾಡಲು ರಾಜಕೀಯ ಹುನ್ನಾರ ಆರೋಪ: ಸಚಿವ ಎಂಟಿಬಿ ನಾಗರಾಜ್ ವಿರುದ್ದ ಆಕ್ರೋಶ‌
ಸಚಿವ ಎಂಟಿಬಿ ನಾಗರಾಜ್Image Credit source: etvbharat.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 08, 2023 | 8:13 PM

ಬೆಂಗಳೂರು ಗ್ರಾಮಾಂತರ: ಖಾಸಗಿ ಜಮೀನಿನಲ್ಲಿ ರಸ್ತೆ ಮಾಡಲು ಹೊರಟ್ಟಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ (Minister MTB Nagaraj) ವಿರುದ್ದ ರಾಜಕೀಯ ಹುನ್ನಾರ ಆರೋಪ ಕೇಳಿಬಂದಿದೆ. ಹೊಸಕೋಟೆ ತಾಲೂಕಿನ ವಳಗೆರೆಪುರ ಗ್ರಾಮದಲ್ಲಿ ಘಟನೆ ಕಂಡುಬಂದಿದ್ದು, ಗ್ರಾಮದ ಮಾರಪ್ಪ ಎಂಬುವವರ ಖಾಸಗಿ ಜಮೀನಿನಲ್ಲಿ ರಸ್ತೆ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರ್ಟ್ ನಲ್ಲಿ ಕೇಸ್ ನಡೆಯುತ್ತಿದ್ರು ಪೊಲೀಸ್ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ರಸ್ತೆ ಮಾಡಿಸುತ್ತಿದ್ದಾರೆ ಎಂದು ಮಾರಪ್ಪ ಕುಟುಂಬಸ್ಥುರು ಆಕ್ರೋಶಿಸಿದ್ದಾರೆ. ಇನ್ನು ರಸ್ತೆಗೆ ಅಡ್ಡಿಪಡಿಸಿದ ಮನೆಯವರನ್ನ ಬಂಧಿಸಿ ಕರೆದೋಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಪೊಲೀಸ್ ಬಂದೋಬಸ್ತ್​ನಲ್ಲಿ ರಸ್ತೆ ಮಾಡಿದಕ್ಕೆ ಸದ್ಯ ಸಚಿವ ಎಂಟಿಬಿ ನಾಗರಾಜ್ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

ಸಚಿವ ಎಂಟಿಬಿ ನಾಗರಾಜ್ ಹೇಳುವುದೇನು?

ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆರೋಪಕ್ಕೆ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ಬಹಳ ವರ್ಷಗಳಿಂದ ಅದು ಉಭಯೇತರರ ಉಪಯೋಗದ ರಸ್ತೆ ಎಂದಿದೆ. ಈ‌ ಬಗ್ಗೆ ರಸ್ತೆ ಬೇಕು ಅಂತ ಗ್ರಾಮಸ್ಥರು ಬಂದಿದ್ರು. ಗ್ರಾಮದವರನ್ನ ಕರೆಸಿ ನಾನು ಮಾತನಾಡಿ ರಸ್ತೆ ಮಾಡಲು ಮನವೊಲಿಸಿದ್ದೆ. ಹೀಗಾಗೆ ಸಾರ್ವಜನಿಕರಿಗೆ ಅನುಕೂಲವಾಗಲಿ ಅಂತ ಕಾಂಕ್ರೀಟ್ ರಸ್ತೆ ಮಾಡಿಸಿದ್ದೇನೆ. ಅವರು ಪದೇ ಪದೇ ಗಲಾಟೆ ಮಾಡ್ತಿದ್ದ ಕಾರಣ ಪೊಲೀಸ್ ಬಂದೋಬಸ್ತ್​ನಲ್ಲಿ ರಸ್ತೆ ಮಾಡಿದ್ದಾರೆ. ಇದೀಗ ಶಾಸಕ ಶರತ್​ ಕಡೆಯವರು ಈ ರೀತಿ ಆರೋಪಗಳನ್ನ ಮಾಡಿಸುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ಪ್ರತ್ಯಾರೋಪ ಮಾಡಿದರು.

ಇದನ್ನೂ ಓದಿ: ಪೋಕ್ಸೋ ಪ್ರಕರಣದ ಆರೋಪಿಯಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ

ರಾಗಿ ಖರೀದಿ ಕೇಂದ್ರದ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ರಾಮನಗರ: ರಾಗಿ ಖರೀದಿ ಕೇಂದ್ರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿರುವಂತಹ ಘಟನೆ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ. ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ಬಗ್ಗೆ ದೂರು ಹಿನ್ನೆಲೆ ಲೋಕಾಯುಕ್ತ ಎಸ್​ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಯಿತು. ಅಧಿಕಾರಿಗಳು, ರೈತರಿಂದ ಲೋಕಾಯುಕ್ತ ಪೊಲೀಸರು ಮಾಹಿತಿ ಪಡೆದರು.

ಲೇಔಟ್​ ಸೈಟ್ ಹಂಚಿಕೆಯಲ್ಲಿ ವಂಚನೆ ಆರೋಪ: ಬಿಜೆಪಿ MLC ಆರ್.ಶಂಕರ್ ಪತ್ನಿ, ಪುತ್ರನ ವಿರುದ್ಧ FIR

ಬೆಂಗಳೂರು: ಲೇಔಟ್​ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪದಡಿ ಬಿಜೆಪಿ MLC ಆರ್.ಶಂಕರ್ ಪತ್ನಿ ಮತ್ತು ಪುತ್ರನ ವಿರುದ್ಧ ಇಂದಿರಾನಗರ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಕಂಪನಿ ಪಾರ್ಟನರ್ ಆಗಿರುವ ಪ್ರಭಾವತಿ ಎಂಬುವವರಿಂದ ದೂರು ನೀಡಲಾಗಿದೆ. ಪಾರ್ಟನರ್​​ಗೆ ವಂಚಿಸಿ ಅಕ್ರಮವಾಗಿ 23 ಸೈಟ್​ ಮಾರಾಟ ಆರೋಪ ಕೇಳಿಬಂದಿದೆ.  ಆರ್.ಶಂಕರ್ ಪುತ್ರ, ಪತ್ನಿ ಸೇರಿ ಒಟ್ಟು ನಾಲ್ವರು ಕಂಪನಿ ಆರಂಭಿಸಿದ್ದು, ಕಂಪನಿ ಹೆಸರಿನಲ್ಲಿ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಿಸಿದ್ದರು.

ಲೇಔಟ್ ನಿರ್ಮಾಣದ ವೇಳೆ ನಾಲ್ವರೂ ಪಾರ್ಟನರ್​ಗಳು ಒಪ್ಪಂದ ಮಾಡಿಕೊಂಡಿದ್ದು, ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯವೆಂದು ಅಗ್ರಿಮೆಂಟ್ ಮಾಡಲಾಗಿದೆ. ಆದರೆ ಇದೀಗ ಪ್ರಭಾವತಿ ಕೈಬಿಟ್ಟು ಮೂವರಿಂದ ಸೈಟ್ ಮಾರಾಟ ಮಾಡಿದ್ದು, ಅಕ್ರಮವಾಗಿ ಬ್ಯಾಂಕ್​ನಲ್ಲಿ ಖಾತೆ ತೆಗೆದು ವಂಚಿಸಿರುವುದಾಗಿ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಮೂವರ ಮೇಲೆ ಕೇಸ್ ದಾಖಲಿಸದ ಇಂದಿರಾನಗರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:13 pm, Wed, 8 February 23