ಶಿವಮೊಗ್ಗ: ಕಾಂಗ್ರೆಸ್ ಅಭ್ಯರ್ಥಿ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ನನಗೆ ಮಾಹಿತಿಯಿಲ್ಲ. ಸರ್ಕಾರದ ಸಚಿವನಾಗಿ ಆಧಾರವಿಲ್ಲದೆ ಮಾತನಾಡುವುದಿಲ್ಲ ಎಂದು ಶಿವಮೊಗ್ಗದಲ್ಲಿ ಸಹಕಾರ ಸಚಿವ ಸೋಮಶೇಖರ್ ಹೇಳಿದರು. ನಾನು ಆರೋಪ ಮಾಡಿರುವ ಅಭ್ಯರ್ಥಿಯ ಮೇಲೆ 21 ಎಫ್ಐಆರ್ಗಳು ದಾಖಲಾಗಿವೆ. ನಾನು ಆಧಾರವಿಲ್ಲದ ತೇಜೋವಧೆ ಮಾಡಲು ಹೋಗುವುದಿಲ್ಲ. ಇಷ್ಟು ಎಫ್ಐಆರ್ ಇರುವ ವ್ಯಕ್ತಿಗೆ ಟಿಕೆಟ್ ಹೇಗೆ ಕೊಟ್ಟರು ಎಂದು ಪ್ರಶ್ನಿಸಿದರು. ಮೈಸೂರು ಜೆಡಿಎಸ್ ಅಭ್ಯರ್ಥಿ ಬರೆದ ಪತ್ರ ಇನ್ನೂ ತಲುಪಿಲ್ಲ. ಪತ್ರ ತಲುಪಿದ ಮೇಲೆ ನನ್ನ ಹೇಳಿಕೆ ನೀಡುತ್ತೇನೆ ಎಂದು ಹೇಳಿದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿರುವ ಆರೋಪ ಕೇಳಿಬಂದಿರುವ ಕುರಿತು ಪ್ರಸ್ತಾಪಿಸಿದ ಅವರು, ಈ ವಿಷಯ ತಿಳಿದು ನನಗೆ ಬೇಸರವಾಯಿತು. ಜನಪ್ರತಿನಿಧಿಗಳು ಕೆಲಸ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಶಾಸಕ ಎಸ್.ಆರ್.ವಿಶ್ವನಾಥ್ಗೆ ಸೂಕ್ತ ರಕ್ಷಣೆ ಕೊಡಬೇಕು. ಈ ಪ್ರಕರಣದ ಹಿಂದಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವರ ಗಮನಕ್ಕೂ ತರುತ್ತೇನೆ ಎಂದು ಸಹಕಾರ ಸಚಿವ ಸೋಮಶೇಖರ್ ಹೇಳಿಕೆ ನೀಡಿದರು.
ಈ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ 4ನೇ ತಾರೀಖು ಸುದ್ದಿಗೋಷ್ಠಿ ಕರೆಯುತ್ತೇನೆ. ಏನೆಲ್ಲಾ ಆಗಿದೆ ಎಂಬುದನ್ನು ವಿವರಿಸುತ್ತೇನೆ. ಉದ್ದೇಶಪೂರ್ವಕವಾಗಿ ಯಾರನ್ನು ತೇಜೋವಧೆ ಮಾಡಲು ನಾನು ಹೋಗಿಲ್ಲ. ಎಫ್ಐಆರ್ ಆಧಾರದ ಮೇಲೆ ಮಾತನಾಡಿದ್ದೇನೆ. ಇಷ್ಟು ಎಫ್ಐಆರ್ ಇರುವ ವ್ಯಕ್ತಿಗೆ ಕಾಂಗ್ರೆಸ್ ಪಕ್ಷ ಹೇಗೆ ಟಿಕೆಟ್ ಕೊಡ್ತು ಎಂದು ಕೇಳಿದ್ದೇನೆ ಅಷ್ಟೇ. ಧ್ರುವ ನಾರಾಯಣ್ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲ. ನನ್ನ ಮೊಬೈಲ್ನಲ್ಲೇ ಮಾಹಿತಿ ಇದೆ. ಮಾಹಿತಿ ಕೋಡ್ತಿನಿ. ಅದನ್ನು ನೋಡಿದ ನಂತರ ನನ್ನ ಬಗ್ಗೆ ಮಾತನಾಡಲಿ ಎಂದು ಸಲಹೆ ಮಾಡಿದರು.
ಇದನ್ನೂ ಓದಿ: ಮೈಸೂರು: ಮಳೆ ಹಾನಿಗೆ ಪರಿಹಾರವಾಗಿ ನಗರ ಪಾಲಿಕೆಯ ಪ್ರತಿ ವಾರ್ಡ್ಗೆ ತಲಾ ₹ 8 ಲಕ್ಷ ಅನುದಾನ; ಎಸ್.ಟಿ ಸೋಮಶೇಖರ್
ಇದನ್ನೂ ಓದಿ: ಧಾರವಾಡ ವಿಧಾನ ಪರಿಷತ್ ಚುನಾವಣೆ; ಸಿಎಂ ಬೊಮ್ಮಾಯಿಗೆ ರಾಜಕೀಯ ನೆಲೆ ಕಲ್ಪಿಸಿದ ಕ್ಷೇತ್ರ ಈ ಬಾರಿ ಯಾರ ಕೈ ಹಿಡಿಯುತ್ತೆ?