ಶಿವಮೊಗ್ಗ: ಉದ್ಯಾನವನಕ್ಕೆ ಪುನೀತ್ ಹೆಸರು; ಪಾರ್ಕ್ನಲ್ಲಿ ಗಿಡ ನೆಡುವ ಮೂಲಕ ಅಪ್ಪು ನಮನ ಕಾರ್ಯಕ್ರಮಕ್ಕೆ ಚಾಲನೆ
ಪುನೀತ್ ಅರಣ್ಯ ಇಲಾಖೆಗೆ ಸಂಬಂಧಿಸಿದ ಡಾಕ್ಯುಮೆಂಟ್ರಿ ಮಾಡುತ್ತಿದ್ದರು. ಪುನೀತ್ ಅವರಿಗೆ ಅರಣ್ಯ ಸಂಪತ್ತು ಹಾಗೂ ಪರಿಸರ ಮತ್ತು ವನ್ಯಜೀವಿಗಳ ಕುರಿತು ಸಾಕಷ್ಟು ಕಾಳಜಿ ಇತ್ತು ಹೀಗಾಗಿ ಅವರ ಹೆಸರನ್ನು ಉದ್ಯಾನವನಕ್ಕೆ ಇಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಶಿವಮೊಗ್ಗ: ಪುನಿತ್ ರಾಜ್ಕುಮಾರ್ ಅಕಾಲಿಕ ಮರಣ ಹೊಂದಿ ಹೆಚ್ಚು ಕಡಿಮೆ ಒಂದು ತಿಂಗಳ ಹತ್ತಿರವಾಯ್ತು. ಮಲೆನಾಡಿನಲ್ಲಿ ಇನ್ನು ಕೂಡಾ ಪುನೀತ್ ಅಗಲಿಕೆ ನೋವು ಎಲ್ಲರನ್ನು ಕಾಡುತ್ತಿದೆ. ಅವರ ಹೆಸರಿನಲ್ಲಿ ನಿತ್ಯ ಅನೇಕ ನಮನ, ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಅದರಂತೆ ನಿನ್ನೆ (ನವೆಂಬರ್ 28) ಉದ್ಯಾನವನಕ್ಕೆ ಪುನೀತ್ ರಾಜ್ಕುಮಾರ್ ಹೆಸರು ಇಡುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ. ಶಿವಮೊಗ್ಗದ ಗೋಪಾಲ ಗೌಡ ಬಡಾವಣೆ, ರಂಗನಾಥ್ ಬಡಾವಣೆಯ ನಿವಾಸಿಗಳು ಕೆಲವು ವರ್ಷಗಳ ಹಿಂದೆ ಒಂದು ಪಾರ್ಕ್ ಅಭಿವೃದ್ಧಿ ಮಾಡಿದ್ದರು. ಅವರು ಉಳಿಸಿ ಬೆಳಿಸಿದ ಸುಂದರ ಉದ್ಯಾನವನಕ್ಕೆ ಪುನೀತ್ ರಾಜ್ಕುಮಾರ್ (Puneeth rajkumar) ಹೆಸರು ನಾಮಕರಣ ಮಾಡುವ ಮೂಲಕ ಸಂತಸ ಪಟ್ಟಿದ್ದಾರೆ. ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಧ್ವಜಾರೋಹಣ ಮಾಡಿ ಈ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಬಂದ ಗಣ್ಯರು ಈ ಉದ್ಯಾನವನದಲ್ಲಿ ಸಸಿಗಳನ್ನು ನೆಡುವ ಮೂಲಕ ಪುನೀತ್ ನಮನ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಣೆ ಮಾಡಿದರು.
ಹೀಗೆ ಪುನೀತ್ ರಾಜ್ಕುಮಾರ್ ಹೆಸರನ್ನು ಉದ್ಯಾನವನಕ್ಕೆ ಇಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಸೆಪ್ಟೆಂಬರ್ ತಿಂಗಳಲ್ಲಿ ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರಕ್ಕೆ ಕೊನೆ ಬಾರಿ ಭೇಟಿ ನೀಡಿದ್ದರು. ಪುನೀತ್ ಅರಣ್ಯ ಇಲಾಖೆಗೆ ಸಂಬಂಧಿಸಿದ ಡಾಕ್ಯುಮೆಂಟ್ರಿ ಮಾಡುತ್ತಿದ್ದರು. ಪುನೀತ್ ಅವರಿಗೆ ಅರಣ್ಯ ಸಂಪತ್ತು ಹಾಗೂ ಪರಿಸರ ಮತ್ತು ವನ್ಯಜೀವಿಗಳ ಕುರಿತು ಸಾಕಷ್ಟು ಕಾಳಜಿ ಇತ್ತು ಹೀಗಾಗಿ ಅವರ ಹೆಸರನ್ನು ಉದ್ಯಾನವನಕ್ಕೆ ಇಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಪುನೀತ್ ಅವರ ಕಾಳಜಿಗೆ ಮನಸೋತು ಶಿವಮೊಗ್ಗದಲ್ಲಿನ ಬಡಾವಣೆಯ ಜನರೇ ಉದ್ಯಾನವನ ಮಾಡಿದ್ದರು. ಸದ್ಯ ಅದೇ ಉದ್ಯಾನವನಕ್ಕೆ ಪುನೀತ್ ರಾಜ್ಕುಮಾರ್ ಹೆಸರು ಇಡುವ ಮೂಲಕ ಯುವಕರು ಮತ್ತು ಹಿರಿಯರು ವಿಶೇಷ ಗೌರವವನ್ನು ನೀಡಿದ್ದಾರೆ. ಇನ್ನೂ ಈ ಉದ್ಯಾವನವನದ ಮೂಲಕ ಪುನೀತ್ ಸದಾ ಜನರೊಂದಿಗೆ ಇರುತ್ತಾರೆ ಎನ್ನುವ ಭಾವನೆ ಇಲ್ಲಿಯವರದ್ದಾಗಿದೆ.
ವರದಿ: ಬಸವರಾಜ್ ಯರಗಣವಿ
ಇದನ್ನೂ ಓದಿ: ಶಿವಮೊಗ್ಗ: ಬಡಾವಣೆಗೆ ಪುನೀತ್ ರಾಜ್ಕುಮಾರ್ ಹೆಸರು; ಮಲೆನಾಡಿಗರಿಂದ ಅಪ್ಪುಗೆ ವಿಶೇಷ ಗೌರವ
ದೇವರ ಮಧ್ಯೆ ಪುನೀತ್ ಫೋಟೋ ಇಟ್ಟು ಪೂಜೆ, ಸದ್ಯದಲ್ಲೇ ದೇವಸ್ಥಾನ ನವೀಕರಿಸಿ ನಿತ್ಯಪೂಜೆ; ಇದು ಅಪ್ಪು ಅಭಿಮಾನಿ ಅಭಿಲಾಷೆ