ಶಿವಮೊಗ್ಗ: ಬಡಾವಣೆಗೆ ಪುನೀತ್​ ರಾಜ್​ಕುಮಾರ್​ ಹೆಸರು; ಮಲೆನಾಡಿಗರಿಂದ ಅಪ್ಪುಗೆ ವಿಶೇಷ ಗೌರವ

ಇಂದು ಪುನೀತ್ ರಾಜ್​ಕುಮಾರ್​ ಎಲ್ಲರನ್ನೂ ಅಗಲಿ ಒಂದು ತಿಂಗಳವಾಗಿದೆ. ಹೀಗಾಗಿ ಬಡಾವಣೆಗೆ ಪುನೀತ್ ರಾಜ್​ಕುಮಾರ್ ಹೆರಸರನ್ನು ನಾಮಕರಣ ಮಾಡುವ ಮೂಲಕ ಬಡಾವಣೆಯ ಜನರು ಪುನೀತ್​ಗೆ ವಿಶೇಷ ಗೌರವ ನೀಡಿದ್ದಾರೆ.

ಶಿವಮೊಗ್ಗ: ಬಡಾವಣೆಗೆ ಪುನೀತ್​ ರಾಜ್​ಕುಮಾರ್​ ಹೆಸರು; ಮಲೆನಾಡಿಗರಿಂದ ಅಪ್ಪುಗೆ ವಿಶೇಷ ಗೌರವ
ಬಡಾವಣೆಗೆ ಪುನೀತ್ ರಾಜ್ಕುಮಾರ್ ಹೆಸರನ್ನು ಸ್ಥಳೀಯರು ನಾಮಕರಣ ಮಾಡಿದ್ದಾರೆ
Follow us
TV9 Web
| Updated By: preethi shettigar

Updated on: Nov 29, 2021 | 1:03 PM

ಶಿವಮೊಗ್ಗ: ಪುನೀತ್ ರಾಜ್​ಕುಮಾರ್​ ಅವರ ಮೇಲಿನ ಪ್ರೀತಿ ದಿನೇ ದಿನೇ ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ. ಪುನೀತ್  ರಾಜ್​ಕುಮಾರ್​ ಅವರ ಅಕಾಲಿಕ ಮರಣವು ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ದೊಡ್ಡ ಶಾಕ್ ಕೊಟ್ಟಿದೆ. ಪುನೀತ್ ರಾಜ್​ಕುಮಾರ್ (Puneeth rajkumar)​ ನಮ್ಮೆಲ್ಲರನ್ನು ಅಗಲಿ ಇಂದಿಗೆ (ನವೆಂಬರ್ 29) ಒಂದು ತಿಂಗಳು ಆಗಿದೆ. ಆದರೆ ಪುನೀತ್ ನೆನಪು ಮಾತ್ರ ಇನ್ನೂ ಎಲ್ಲರ ಮನದಲ್ಲಿ ಹಾಗೇ ಹಚ್ಚ ಹಸಿರಾಗಿ ಉಳಿದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಶಿವಮೊಗ್ಗ ನಗರದ ಆಲ್ಕೋಳದ ಮಂಗಳ ಮುಂದಿರುವ ಬಡಾವಣೆಗೆ ಪುನೀತ್ ರಾಜ್​ಕುಮಾರ್​ ಹೆಸರನ್ನು ಇಡಲಾಗಿದೆ. ಅನೇಕ ವರ್ಷಗಳಿಂದ ಈ ಬಡಾವಣೆಗೆ ಯಾವುದೇ ಹೆಸರು ಇಟ್ಟಿರಲಿಲ್ಲ. ಬಡಾವಣೆಯ ಮಕ್ಕಳು ಮತ್ತು ಯುವಕರು ಪುನೀತ್ ನಿಧನದ ಬಳಿಕ ತಮ್ಮ ಬಡಾವಣೆಗೆ ಪುನೀತ್ ರಾಜ್​ಕುಮಾರ್​ ಹೆಸರು ಇಡಬೇಕೆಂದು ನಿರಂತರವಾಗಿ ಬಡಾವಣೆಯ ನಿವಾಸಿಗಳಿಗೆ ಒತ್ತಾಯಿಸುತ್ತಿದ್ದರು ಅದರಂತೆ ಇಂದು ಬಡಾವಣೆಗೆ ಪುನೀತ್ ರಾಜ್​ಕುಮಾರ್​ ಹೆಸರನ್ನು ಸ್ಥಳೀಯರು ನಾಮಕರಣ ಮಾಡಿದ್ದಾರೆ.

ಇಂದು ಪುನೀತ್ ರಾಜ್​ಕುಮಾರ್​ ಎಲ್ಲರನ್ನೂ ಅಗಲಿ ಒಂದು ತಿಂಗಳವಾಗಿದೆ. ಹೀಗಾಗಿ ಬಡಾವಣೆಗೆ ಪುನೀತ್ ರಾಜ್​ಕುಮಾರ್ ಹೆರಸರನ್ನು ನಾಮಕರಣ ಮಾಡುವ ಮೂಲಕ ಬಡಾವಣೆಯ ಜನರು ಪುನೀತ್​ಗೆ ವಿಶೇಷ ಗೌರವ ನೀಡಿದ್ದಾರೆ. ಬಡಾವಣೆಯ ಜನರು ಪುನೀತ್ ರಾಜ್​ಕುಮಾರ್ ನಾಮಫಲಕ ಹಾಕಿ, ಅದನ್ನು ಬಲೂನ್​ಗಳಿಂದ ಅಲಂಕಾರಗೊಳಿಸಿದ್ದರು. ಮಕ್ಕಳು ಪುನೀತ್ ರಾಜ್​ಕುಮಾರ್ ನಾಮಕರಣ ಮಾಡುತ್ತಿದ್ದಂತೆ ಖುಷಿ ಪಟ್ಟಿದ್ದಾರೆ. ಇನ್ನೂ ಬಡಾವಣೆಯಲ್ಲಿ ಪುನೀತ್ ರಾಜ್​ಕುಮಾರ್ ಹೆಸರಿನೊಂದಿಗೆ ನೆನಪು ಸದಾ ಅವರೊಂದಿಗೆ ಇರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ಪುನೀತ್ ಅವರ ಸಮಾಜಮುಖಿ ಕೆಲಸಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಉದ್ದೇಶದಿಂದ ಪುನೀತ್ ಹೆಸರನ್ನು ಬಡಾವಣೆಗೆ ಇಟ್ಟಿದ್ದಾರೆ. ಇನ್ನೂ ಪುನೀತ್ ತುಳಿದ ಹಾದಿಯಲ್ಲಿ ಬಡಾವಣೆಯ ಅನೇಕರು ನೇತ್ರದಾನ ಮಾಡಲು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ ಎನ್ನುವುದು ವಿಶೇಷ. ಪುನೀತ್ ರಾಜ್​ಕುಮಾರ್ ಬಡಾವಣೆಯ ಹೆಸರನ್ನು ಪಾಲಿಕೆಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸಲು ಬಡಾವಣೆಯ ನಿವಾಸಿಗಳು ಪಾಲಿಕೆ ಅಧಿಕಾರಿಗಳಿಗೆ ದಾಖಲೆಗಳನ್ನು ಕೂಡ ನೀಡಿದ್ದಾರೆ.

ವರದಿ: ಬಸವರಾಜ್ ಯರಗಣವಿ

ಇದನ್ನೂ ಓದಿ: ಪುನೀತ್ ನಿಧನದ ಬಳಿಕ ಹೊಸ ಬದಲಾವಣೆಯತ್ತ ಶಾಸಕ ರೇಣುಕಾಚಾರ್ಯ; ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು

ದೇವರ ಮಧ್ಯೆ ಪುನೀತ್​ ಫೋಟೋ ಇಟ್ಟು ಪೂಜೆ, ಸದ್ಯದಲ್ಲೇ ದೇವಸ್ಥಾನ ನವೀಕರಿಸಿ ನಿತ್ಯಪೂಜೆ; ಇದು ಅಪ್ಪು ಅಭಿಮಾನಿ ಅಭಿಲಾಷೆ