ಪಿಎಫ್ಐ ಸಿದ್ದರಾಮಯ್ಯನವರ ಪಾಪದ ಕೂಸು: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
ಇಡೀ ದೇಶದ ಜನ ನಮ್ಮ ಜತೆಗಿದ್ದಾರೆ. ಅದನ್ನು ನೋಡಿ ಸಿದ್ದರಾಮಯ್ಯನವರಿಗೆ ಸಹಿಸಲಾಗುತ್ತಿಲ್ಲ. ಏನೂ ತೋಚದೆ ಹುಚ್ಚರಂತೆ ಮಾತನಾಡುತ್ತಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ನಾಡಿನ ಜನರಿಗೆ ಕ್ಷಮೆ ಕೇಳಬೇಕಿತ್ತು.
ಶಿವಮೊಗ್ಗ: ಪಿಎಫ್ಐ (PFI) ಸಿದ್ದರಾಮಯ್ಯನವರ ಪಾಪದ ಕೂಸು. ಸಿದ್ದರಾಮಯ್ಯರ ಅಪರಾಧದಿಂದ ಇಷ್ಟೆಲ್ಲ ಅನಾಹುತವಾಗಿದೆ ಎಂದು ನಗರದಲ್ಲಿ ಮಾಜಿ ಸಿಎಂ B.S.ಯಡಿಯೂರಪ್ಪ ಹೇಳಿಕೆ ನೀಡಿದರು. ಇಡೀ ದೇಶದ ಜನ ನಮ್ಮ ಜತೆಗಿದ್ದಾರೆ. ಅದನ್ನು ನೋಡಿ ಸಿದ್ದರಾಮಯ್ಯನವರಿಗೆ ಸಹಿಸಲಾಗುತ್ತಿಲ್ಲ. ಏನೂ ತೋಚದೆ ಹುಚ್ಚರಂತೆ ಮಾತನಾಡುತ್ತಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ನಾಡಿನ ಜನರಿಗೆ ಕ್ಷಮೆ ಕೇಳಬೇಕಿತ್ತು. ಈಗಲಾದರೂ ಸಿದ್ದರಾಮಯ್ಯನವರು ಜಾಗೃತರಾಗಬೇಕು ಎಂದು ಹೇಳಿದರು. ಸೊರಬ ಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಬಿಜೆಪಿ ಪಕ್ಷ ಸೇರ್ಪಡೆಯಾದರು. ಮಡಿವಾಳ ಸಮಾಜದ ಮುಖಂಡರಾಗಿದ್ದಾರೆ. ಅವರು ಬಿಜೆಪಿಯ ಪಕ್ಷ ಸೇರ್ಪಡೆಯಿಂದ ನಾಲ್ಕು ಐದು ಕ್ಷೇತ್ರಕ್ಕೆ ಅನುಕೂಲ. ಯಾವುದೇ ಬೇಡಿಕೆ ಇಲ್ಲದೇ ಅವರು ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ. ರಾಜು ತಲ್ಲೂರು ಬಿಜೆಪಿ ಪಕ್ಷ ಸೇರ್ಪಡೆಯಿಂದ ಸೊರಬ ಕ್ಷೇತ್ರದಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು. ರಾಜ್ಯ ಪ್ರವಾಸ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಒಂದೆರಡು ದಿನಗಳಲ್ಲಿ ತೀರ್ಮಾನವಾಗಲಿದೆ. ಮುಂದಿನ ನಾಲ್ಕು ದಿನಗಳಲ್ಲಿ ಪ್ರವಾಸ ಕೈಗೊಳುತ್ತೇನೆ ಎಂದು ಹೇಳಿದರು.
ಪಿಎಫ್ಐಗೆ ಸಿದ್ದರಾಮಯ್ಯ ಸಾಥ್: ಗೃಹ ಸಚಿವ ಆರಗ ಜ್ಞಾನೇಂದ್ರ
ಕೇಂದ್ರ ಸರ್ಕಾರ ಸೂಚಿಸಿದಂತೆ ನಾವು ನಡೆದುಕೊಳ್ಳುತ್ತೇವೆ. PFI ಆಸ್ತಿ ಗುರುತಿಸಿ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಸಿದ್ದರಾಮಯ್ಯರಿಗೆ ಪಿಎಫ್ಐ ಮೇಲೆ ಸಾಫ್ಟ್ ಕಾರ್ನರ್. ಪಿಎಫ್ಐ ವಿರುದ್ಧ ಪ್ರಕರಣ ವಾಪಸ್ ಪಡೆದಿದ್ದೇ ಅವರು. PFIಗೆ ನಾನಿದ್ದೇನೆ ಎಂಬ ಅಭಯ ನೀಡಿದ್ದೇ ಸಿದ್ದರಾಮಯ್ಯ. RSS ಸಂಘಟನೆಯನ್ನು PFIಗೆ ಹೋಲಿಸುವುದು ತಪ್ಪು. ಆರ್ಎಸ್ಎಸ್ ದೇಶಭಕ್ತರನ್ನ ಹುಟ್ಟುಹಾಕುವ ಸಂಘಟನೆ. RSS ಬ್ಯಾನ್ ಮಾಡಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇದು ಸಿದ್ದರಾಮಯ್ಯನವರ ಮಾನಸಿಕ ದಾರಿದ್ರ್ಯ ತೋರಿಸುತ್ತೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನಳಿನ್‌ಕುಮಾರ್ ಕಟೀಲು ಟಾಂಗ್
ದೇಶದಲ್ಲಿ ಮೊದಲು ನಿಷೇಧ ಮಾಡಬೇಕಿರೋದು ಕಾಂಗ್ರೆಸ್ ಪಕ್ಷವನ್ನ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲು ಹೇಳಿಕೆ ನೀಡಿದರು. ದೇಶದಲ್ಲಿ PFI, SDPI ನಂತರ ಸಂಘಟನೆಗಳಿಗೆ ಶಕ್ತಿ ಕೊಟ್ಟಿದ್ದೆ ಕಾಂಗ್ರೆಸ್. ಆಂತರಿಕ ಭಯೋತ್ಪಾದನೆಯಂತ ಚಟುವಟಿಕೆ ನಡೆಸಲು ಆ ಸಂಘಟನೆಗಳಿಗೆ ಶಕ್ತಿ ಕೊಟ್ಟಿದ್ದೆ ಕಾಂಗ್ರೆಸ್. ಮಹಾತ್ಮ ಗಾಂಧಿಯವರಿಗೆ ಗೊತ್ತಿತ್ತು. ಕಾಂಗ್ರೆಸ್ ಸ್ವಾತಂತ್ರ್ಯಾನಂತರ ದೇಶದಲ್ಲಿ ಆಡಳಿತ ಮಾಡಿದರೆ ಈ ದೇಶ ಹಾಳು ಮಾಡುತ್ತೆ ಅಂತಾ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಲಿ ಅಂತಾ ಹೇಳಿದರು ಮಾಡಲಿಲ್ಲ. ಸಿದ್ದರಾಮಣ್ಣ ಒಮ್ಮೆ ಅಧ್ಯಯನ ಮಾಡಲಿ. ಅವರ ಕಾಲಘಟ್ಟದಲ್ಲಿ ಎಷ್ಟು PFI ಕಾರ್ಯಕರ್ತರನ್ನ ರಕ್ಷಣೆ ಮಾಡಿದ್ದಾರೆ, ಹಂತಕರನ್ನ ರಕ್ಷಣೆ ಮಾಡಿದ್ದಾರೆ. ಗೋ ಹಂತಕರನ್ನ ರಕ್ಷಣೆ ಮಾಡಿರುವ ಬಗ್ಗೆ ಅಧ್ಯಯನ ಮಾಡಲಿ. ಆಗ ಅವರೇ ಹೇಳುತ್ತಾರೆ ಕಾಂಗ್ರೆಸ್ನ್ನು ನಿಷೇಧ ಮಾಡಲಿ ಅಂತಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನಳಿನ್‌ಕುಮಾರ್ ಕಟೀಲು ಟಾಂಗ್ ನೀಡಿದರು.
ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:52 am, Thu, 29 September 22