AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಪ್ರೀತಿಗೆ ಹುಡುಗಿ ಮನೆಯವರ ನಿರಾಕರಣೆ; ಪ್ರೇಯಸಿ ಮನೆ ಹತ್ತಿರ ಹೋಗಿದ್ದ ಪ್ರೀಯಕರನಿಗೆ ಹಿಗ್ಗಾ ಮುಗ್ಗಾ ಥಳಿತ

ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಪ್ರೀತಿಸಿ ಮದುವೆಯಾಗಬೇಕೆಂದು ನೂರೆಂಟು ಕನಸು ಕಟ್ಟಿಕೊಂಡಿದ್ದರು. ಈ ಲವ್ ಸ್ಟೋರಿ ಅದ್ಯಾಕೋ ಯುವತಿಯ ಮನೆಯವರಿಗೆ ಸರಿ ಕಾಣಲಿಲ್ಲ. ಲವ್ ಬ್ರೇಕ್ ಅಪ್ ಮಾಡಿದ್ದರು. ಜೊತೆಗೆ ಯುವಕನಿಗೆ ತಂಟೆಗೆ ಬರಬೇಡ ಎಂದು ವಾರ್ನಿಂಗ್ ಕೂಡ ಮಾಡಿದ್ರೂ. ಆದ್ರೆ, ಪ್ರೀತಿ ಮಾಡಿದ ಮನಸ್ಸು ಸುಮ್ಮನೆ ಇರಬೇಕಲ್ಲ. ಪ್ರೇಯಿಸಿ ಮನೆ ಹತ್ತಿರ ಹೋಗಿದ್ದ ಪ್ರೀಯಕರನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಶಿವಮೊಗ್ಗ: ಪ್ರೀತಿಗೆ ಹುಡುಗಿ ಮನೆಯವರ ನಿರಾಕರಣೆ; ಪ್ರೇಯಸಿ ಮನೆ ಹತ್ತಿರ ಹೋಗಿದ್ದ ಪ್ರೀಯಕರನಿಗೆ ಹಿಗ್ಗಾ ಮುಗ್ಗಾ ಥಳಿತ
ಪ್ರಾತಿನಿಧಿಕ ಚಿತ್ರ
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್|

Updated on: Aug 27, 2023 | 8:35 PM

Share

ಶಿವಮೊಗ್ಗ, ಆ.27: ಜಿಲ್ಲೆಯ ಭದ್ರಾವತಿ(Bhadravati)  ತಾಲೂಕಿನ ಅರಕೆರೆ ಗ್ರಾಮದ ಯುವಕ ಪವನ್ ಎಂಬಾತನ ಜೊತೆ ಅದೇ ಗ್ರಾಮದ ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿ ಪರಿಚಯವಾಗಿ, ಬಳಿಕ ಇಬ್ಬರು ಪರಸ್ಪರ ಪ್ರೀತಿ(Love) ಮಾಡಲು ಶುರು ಮಾಡುತ್ತಾರೆ. ಈ ವಿಷಯ ಯುವತಿಯ ಪೋಷಕರಿಗೆ ಗೊತ್ತಾಗುತ್ತದೆ. ನಂತರ ಪವನ್​ಗೆ ಮಗಳ ತಂಟೆಗೆ ಬರಬೇಡ ಎಂದು ಯುವತಿ ತಂದೆ ಮತ್ತು ಆತನ ಅಣ್ಣ ಸೇರಿದಂತೆ ಕುಟುಂಬಸ್ಥರು ವಾರ್ನಿಂಗ್ ಮಾಡುತ್ತಾರೆ. ಕಳೆದ ಎರಡು ಮೂರು ತಿಂಗಳಿನಿಂದ ಇಬ್ಬರನ್ನು ದೂರ ಮಾಡುವಲ್ಲಿ ಯುವತಿಯ ಕುಟುಂಬಸ್ಥರು ಯಶಸ್ವಿಯಾಗಿದ್ದರು.

ಮನೆ ಮುಂದೆ ಓಡಾಡಿದ್ದಕ್ಕೆ ಹಲ್ಲೆ ಮಾಡಿದ ಯುವತಿ ಮನೆಯವರು

ಈ ನಡುವೆ ನಿನ್ನೆ(ಆ.26) ಪವನ್​ ಯುವತಿ ಮನೆ ಮುಂದೆ ಬೈಕ್ ತೆಗೆದುಕೊಂಡು ಹೋಗುವ ಸಮಯದಲ್ಲಿ ಯುವತಿಯ ಕುಟುಂಬಸ್ಥರು ತಡೆದಿದ್ದಾರೆ. ಮತ್ತೆ ತಮ್ಮ ಮನೆಯ ಮುಂದೆ ಓಡಾಡುತ್ತಿದ್ದೀಯಾ, ಯಾಕೇ ಏನು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಮತ್ತೆ ಮಗಳ ಮೇಲೆ ಕಣ್ಣು ಹಾಕುತ್ತೀಯಾ ಎಂದು ಆಕ್ರೋಶಗೊಂಡ ಯುವತಿಯ ಅಣ್ಣಂದಿರಾದ ಅಣ್ಣ ನಂದೀಶ್, ವಿವೇಕ, ಸಂದೀಪ್ ಸಹೋದರರು ಏಕಾಏಕಿ ಹಲ್ಲೆ ಮಾಡಿ, ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಆತನ ಬಳಿ ಇದ್ದ ಮೊಬೈಲ್ ಕಸಿದುಕೊಂಡು, ಯುವತಿಯ 8 ರಿಂದ10 ಕುಟುಂಬಸ್ಥರು ಸೇರಿಕೊಂಡು ರಾಡ್ ನಿಂದ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ:ಮಂಗಳೂರು: ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ; ಏಳು ಜನ ಆರೋಪಿಗಳ ಬಂಧನ

ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ದಾಖಲು

ಯುವಕನ ಸ್ಥಿತಿ ಸದ್ಯ ಗಂಭೀರವಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆ ಮೆಗ್ಗಾನ್​ಗೆ ದಾಖಲು ಮಾಡಿದ್ದಾರೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರೀತಿ ವಿಷಯ ಗೊತ್ತಾಗಿ, ಯುವತಿಯ ಪೋಷಕರು ಮನೆಗೆ ಕರೆದು ವಾರ್ನಿಂಗ್ ಮಾಡಿ ಯುವಕನ ಎರಡು ಮೊಬೈಲ್ ಕಿತ್ತುಕೊಂಡಿದ್ದರಂತೆ. ಈ ನಡುವೆ ಕಳೆದ ಆರು ತಿಂಗಳಿನಿಂದ ಲವ್ ಬ್ರೇಕ್ ಅಪ್ ಆಗಿತ್ತು. ಆದ್ರೆ, ಯುವತಿ ತನ್ನ ಸ್ನೇಹಿತೆ ಮೂಲಕ ಯುವಕನಿಗೆ ಇನ್​ಸ್ಟಾಗ್ರಾಂ ಮೂಲಕ ಮೆಸೇಜ್ ಹಾಕಿದ್ದಳಂತೆ. ಪ್ರೀತಿಸಿದ ಯುವತಿ ನಿನ್ನ ನೆನೆದು ಕಣ್ಣೀರು ಹಾಕುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದಳು.

ಪವನ್ ಲವ್ ಎಲ್ಲ ಬೇಡ. ವಿದ್ಯಾಭ್ಯಾಸದತ್ತ ಗಮನ ಹರಿಸಲಿ ಎಂದು ಮೆಸೇಜ್​ಗೆ ರಿಪ್ಲೈ ಮಾಡಿದ್ದನು. ಇದಾದ ಬಳಿಕ ಪವನ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಸುಮ್ಮನೆ ಇದ್ದನಂತೆ. ಪ್ರೇಯಸಿ ಮಾತ್ರ ಪವನ್​ನನ್ನು ಮರೆಯಲು ಆಗದೆ ಪರದಾಡುತ್ತಿದ್ದಳು. ಈ ವಿಷಯ ಕುಟುಂಬಸ್ಥರಿಗೆ ಗೊತ್ತಾಗಿದೆ. ಪವನ್​ಗೆ ಸರಿಯಾದ ಬುದ್ದಿ ಕಲಿಸಬೇಕೆಂದು ಕುಟುಂಬಸ್ಥರು ಎಲ್ಲರೂ ಸೇರಿ ಹಲ್ಲೆ ಮಾಡಿದ್ದಾರೆ. ಇದೀಗ ಪ್ರೀತಿಸಿದ ತಪ್ಪಿಗಾಗಿ ಯುವಕನು ಮಾರಣಾಂತಿಕ ಹಲ್ಲೆಗೊಳಗಾಗಿದ್ದಾನೆ.

ಇದನ್ನೂ ಓದಿ:ಮಂಗಳೂರು: ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ; ಏಳು ಜನ ಆರೋಪಿಗಳ ಬಂಧನ

ಘಟನೆ ನಡೆದು ಎರಡು ದಿನವಾದ್ರೂ ಕ್ರಮ ಕೈಗೊಳ್ಳದ ಪೊಲಿಸರು

ಇನ್ನು ಯವಕನ‌ ಮೇಲೆ ಹಲ್ಲೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದಾಖಲಿಸಲಾಗಿದೆ. ಘಟನೆ ನಡೆದು ಎರಡು ದಿನವಾದ್ರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಹಲ್ಲೆಗೊಳಗಾದ ಯುವಕನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪ್ರೀತಿಸಿದ ಜೋಡಿ ದೂರ ಮಾಡಲು ಕುಟುಂಬಸ್ಥರು ಕಾನೂನು ಕೈಗೆತ್ತಿಕೊಂಡಿದ್ದಾರೆ. ಅದರಲ್ಲೂ ಯುವತಿಯ ಮನೆಯವರು ಹಣ ಮತ್ತು ತೋಳ್ಬಲ ಹೊಂದಿದ್ದಾರೆ. ಹೀಗಾಗಿ ಬಡಪಾಯಿ ಕಾರ್ಪೇಂಟರ್ ಪ್ರೀಯಕರ ಕೈ ಕಾಲು, ತಲೆ ಎದೆಗೆ ಗಂಭೀರ ಗಾಯ ಆದ್ರೂ, ಪೊಲೀಸರು ಅವರ ವಿರುದ್ದ ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರಂತೆ.

ಇಂದಿನ ಯುಗದ ಯುವಕ ಯುವತಿಯರಿಗೆ ಯಾವುದು ತಪ್ಪು, ಯಾವುದು ಸರಿ ಎನ್ನುವ ಯೋಚನೆ ಮಾಡುವ ಬುದ್ದಿ ಇರುವುದಿಲ್ಲ. ಚೆಲುವಿನ ಚಿತ್ತಾರ ಚಿತ್ರದಂತೆ ಈ ಲವ್ ಸ್ಟೋರಿಯಲ್ಲೂ ಇಬ್ಬರು ಪರಸ್ಪರ ಪ್ರೀತಿ ಮಾಡಿ ಈಗ ಇಕ್ಕಟ್ಟಿಗೆ ಸಿಲುಕೊಂಡಿದ್ದಾರೆ. ಸದ್ಯ ಈ ಲವ್ ಸ್ಟೋರಿ ಇಬ್ಬರ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಪ್ರೀತಿ ವಿಶ್ವಾಸದಿಂದ ಬುದ್ದಿ ಹೇಳಬೇಕಿದ್ದ ಯುವತಿಯ ಪೋಷಕರು ಮತ್ತು ಕುಟುಂಬಸ್ಥರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ