ಅಮ್ಮ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ನೇಣಿಗೆ ಶರಣಾದ ಏಳನೇ ತರಗತಿ ಬಾಲಕಿ
ತಾಯಿ ಬುದ್ದಿವಾದ ಹೇಳಿದ್ದನ್ನೇ ಮನಸ್ಸಿಗೆ ಗಂಭೀರವಾಗಿ ತೆಗೆದುಕೊಂಡು ಬೇಸರಗೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಬಾಲಕಿಯೊಬ್ಬಳು ನೇಣಿಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀರೆಯಿಂದ ನೇಣು ಹಾಕಿಕೊಂಡ ಹುಡುಗಿ ಸಾವಿಗೀಡಾಗಿದ್ದಾಳೆ. ಸಹನಾ (13 ವರ್ಷ) ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದು, ಆಕೆಯ ತಾಯಿ ಬುದ್ದಿವಾದ ಹೇಳಿದ್ದನ್ನೇ ಮನಸ್ಸಿಗೆ ಗಂಭೀರವಾಗಿ ತೆಗೆದುಕೊಂಡು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಂಗಾ ನದಿಗೆ ಹಾರಿ ಅಪರಿಚಿತ ಮಹಿಳೆ ಆತ್ಮಹತ್ಯೆ ಶಿವಮೊಗ್ಗ: ಸುಮಾರು 40 ವರ್ಷ ಪ್ರಾಯದ ಅಪರಿಚಿತ ಮಹಿಳೆಯೊಬ್ಬರು ತುಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಸವಾಯಿ ಪಾಳ್ಯ ಮಸೀದಿ ಹಿಂಬದಿಯ ತುಂಗಾ ನದಿ ಬಳಿ ಘಟನೆ ಸಂಭವಿಸಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದ್ದು, ನದಿಯ ನಡುವೆ ಪೊದೆಗಳಿಗೆ ಸಿಲುಕಿಕೊಂಡಿದ್ದ ಶವವನ್ನು ಹೊರತೆಗೆಯಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಧೂರ ಹಚ್ಚಿದಕ್ಕೆ ಮಗಳನ್ನು ಕೊಂದ ತಾಯಿ ಲಕ್ನೋ: ನೀವು ಅಪರಾಧ ಲೋಕದಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ನಡೆದ ಹಲವು ಹತ್ಯೆಗಳ ಬಗ್ಗೆ ಓದಿರುತ್ತೀರಿ. ಆದರೆ ಇಲ್ಲೊಂದು ಕೊಲೆ ನಡೆದಿದೆ. ಅದು ಕೂಡ ಪ್ರೀತಿಯ ಹೆಸರಿನಲ್ಲಿಯೇ. ಆದರೆ ಅದನ್ನು ಮಾಡಿರೋದು ಸ್ವಂತ ತಾಯಿ. ಈ ಕೊಲೆಯ ಕಾರಣ ಕೂಡ ವಿಚಿತ್ರ. ಹೌದು, ಇಂತಹದೊಂದು ಹೃದಯ ಕಲಕುವ ಘಟನೆ ನಡೆದಿರುವುದು ಉತ್ತರ ಪ್ರದೇಶದ ಇಟವಾ ಪ್ರದೇಶದಲ್ಲಿ.
ಆರೋಪಿ ಮಹಿಳೆಯ ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಪ್ರೇಮದ ವಿಚಾರ ಮನೆಯಲ್ಲಿ ಗೊತ್ತಾದ ಬಳಿಕ ಹಲವು ಬಾರಿ ತಾಯಿ ಮಗಳ ನಡುವೆ ಜಗಳವಾಗಿತ್ತು. ಆದರೆ ತಾಯಿಯ ಮಾತು ಕೇಳಲು ಮಗಳು ಸಿದ್ದಳಿರಲಿಲ್ಲ. ಹೀಗೆ ಕೆಲ ದಿನಗಳ ಹಿಂದೆ ತನ್ನ ಪ್ರಿಯಕರನನ್ನು ಮದುವೆಯಾಗುವ ಬಗ್ಗೆ ತಾಯಿಗೆ ಹೇಳಿದಳು. ಈ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಜಗಳವಾಗಿದೆ.
ಇದೇ ಕೋಪದಲ್ಲಿ, ತಾಯಿ ಮಗಳ ಕುತ್ತಿಗೆಯನ್ನು ಕತ್ತು ಕೊಯ್ದಿದ್ದಾಳೆ. ಆ ಬಳಿಕ ಈ ಘಟನೆಯನ್ನು ಮುಚ್ಚಿಟ್ಟ ಮಹಿಳೆಯ ಕುಟುಂಬಸ್ಥರು ಮಗಳ ಪ್ರಿಯಕರ ರಾಜಕುಮಾರ್ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಯುವಕರ ತಂಡ ಕೂಡ ಪರಾರಿಯಾಗಿತ್ತು. ಹೀಗಾಗಿ ಪ್ರಿಯಕರನೇ ಯುವತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಗುಲ್ಲೆದ್ದಿತ್ತು.
ಇದಾಗ್ಯೂ ಪೊಲೀಸರು ಹಲವು ರೀತಿಯಲ್ಲಿ ತನಿಖೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮಗಳ ಕೊಲೆಗೆ ಸಂಬಂಧಿಸಿದಂತೆ ಆಕೆಯ ತಾಯಿ ನಿರ್ಮಲಾ ದೇವಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಮಗಳ ಹಣೆಗೆ ರಾಜಕುಮಾರ್ ಸಿಂಧೂರ ಹಚ್ಚಿದ್ದಾನೆ ಎಂಬ ಮಾಹಿತಿಯೊಂದನ್ನು ನಿರ್ಮಲಾ ದೇವಿ ಬಾಯಿಬಿಟ್ಟಿದ್ದಾಳೆ. ಈ ಎಳೆಯನ್ನು ಆಧರಿಸಿ ತನಿಖೆ ನಡೆಸಿದಾಗ, ಸಿಂಧೂರದ ವಿಚಾರ ಆಕೆಯ ಮನೆಯ ಬಾಗಿಲಿಗೆ ಬಂದು ನಿಂತಿದೆ.
ಇದನ್ನೂ ಓದಿ: Murder: ಲೇಡಿ ಪೊಲೀಸ್ಗಾಗಿ ಹೆಂಡತಿ, ಮಕ್ಕಳನ್ನೇ ಕೊಂದ ಗಂಡ; ಸತ್ತು ಹೋಗಿದ್ದ ಕೊಲೆಗಾರ ಎದ್ದು ಬಂದ ಕತೆಯಿದು!