Shivamogga Violence: ಹರ್ಷ ಹತ್ಯೆಗಾಗಿ ಹಿಂಬಾಲಿಸುತ್ತಿದ್ದ ಗ್ಯಾಂಗ್, 24 ಗಂಟೆಯಲ್ಲಿ 12 ಆರೋಪಿಗಳು ಶಿವಮೊಗ್ಗ ಪೊಲೀಸರ​ ವಶಕ್ಕೆ

Shivamogga murder: ಹರ್ಷನ ಕೊಲೆಗೆ 3 ದಿನಗಳಿಂದ ಸ್ಕೆಚ್ ಹಾಕಿದ್ದ 12ಕ್ಕೂ ಹೆಚ್ಚು ಆರೋಪಿಗಳು ಹತ್ಯೆಗೈದು ಪರಾರಿಯಾಗಿದ್ದರು. ಮೊಬೈಲ್ ಫೋನ್ ಸ್ವಿಚ್‌ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. 24 ಗಂಟೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್​ ಸರ್ಕಲ್​ ಇನ್ಸ್​​ಪೆಕ್ಟರ್​​ಗಳಾದ ಅಭಯ್ ಪ್ರಕಾಶ್, ಗುರುರಾಜ್ ಮತ್ತು ಸತೀಶ್ ತಂಡದಿಂದ 7 ಆರೋಪಿಗಳ ಬಂಧನವಾಗಿದೆ ಎಂದು ತಿಳಿದುಬಂದಿದೆ.

Shivamogga Violence: ಹರ್ಷ ಹತ್ಯೆಗಾಗಿ ಹಿಂಬಾಲಿಸುತ್ತಿದ್ದ ಗ್ಯಾಂಗ್, 24 ಗಂಟೆಯಲ್ಲಿ 12 ಆರೋಪಿಗಳು ಶಿವಮೊಗ್ಗ ಪೊಲೀಸರ​ ವಶಕ್ಕೆ
ಹರ್ಷ ಹತ್ಯೆ: 24 ಗಂಟೆಯಲ್ಲಿ ಎಲ್ಲ ಆರೋಪಿಗಳ ಅರೆಸ್ಟ್​ ಮಾಡಿದ ಶಿವಮೊಗ್ಗ ಪೊಲೀಸರು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 22, 2022 | 10:47 AM

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ (bajrang dal) 24 ವರ್ಷದ ಹರ್ಷನ ಎದೆಗೆ ಇರಿದ ಅಷ್ಟೂ ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಶಿವಮೊಗ್ಗ ಪೊಲೀಸ್​ ಮೂಲಗಳು (shivamogga police) ತಿಳಿಸಿವೆ. 12 ಮಂದಿಯನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಂತಕ ಪಡೆಯ 12 ಮಂದಿ ತಲೆಮರೆಸಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಇನ್ನು ಉಳಿದ ಇಬ್ಬರನ್ನು ಶಿವಮೊಗ್ಗದಲ್ಲಿಯೇ ತಕ್ಷಣ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 24 ಗಂಟೆಯಲ್ಲಿ ಪ್ರಕರಣ ಭೇದಿಸಲಾಗಿದೆ. ಹರ್ಷನ ಹತ್ಯೆಯಲ್ಲಿ ಭಾಗಿಯಾಗಿದ್ದ 12 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇನ್ನೂ ಮೂರು ಜನರ ಮೇಲೆ ಗಂಭೀರ ಶಂಕೆ ಇದೆ. ಇಂದು ಮಧ್ಯಾಹ್ನ ಅಥವಾ ಸಂಜೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಟಿವಿ9ಗೆ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.

ಆರೋಪಿಗಳು ಹಲವು ದಿನಗಳಿಂದ ಹರ್ಷನ ಚಲನವಲನ ಗಮನಿಸುತ್ತಿದ್ರು. ಹರ್ಷ ಒಂಟಿಯಾಗಿ ಸಿಕ್ಕಾಗ ಇರಿದು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಹರ್ಷ ಹತ್ಯೆಗೆ ಹಂತಕ ಪಡೆ ಮೊದಲೇ ಪ್ಲ್ಯಾನ್ ಮಾಡಿಕೊಂಡಿತ್ತು. ಘಟನೆ ನಡೆದ ಭಾನುವಾರ ಬೆಳಗ್ಗೆಯಿಂದಲೇ ಹರ್ಷನನ್ನು ಓರ್ವ ಹಿಂಬಾಲಿಸುತ್ತಿದ್ದ. ಹರ್ಷ ಚಲನವಲನಗಳ ಮೇಲೆ ಬೆಳಗ್ಗೆಯಿಂದಲೇ ನಿಗಾ ಇಟ್ಟಿದ್ದರು ಎಂದು ಪೊಲೀಸ್​ ಮೂಲಗಳು ಹೇಳಿವೆ.

ಹರ್ಷನ ಕೊಲೆಗೆ 3 ದಿನಗಳಿಂದ ಸ್ಕೆಚ್ ಹಾಕಿದ್ದ 7 ಆರೋಪಿಗಳು ಹತ್ಯೆಗೈದು ಪರಾರಿಯಾಗಿದ್ದರು. ಮೊಬೈಲ್ ಫೋನ್ ಸ್ವಿಚ್‌ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್​ ಸರ್ಕಲ್​ ಇನ್ಸ್​​ಪೆಕ್ಟರ್​​ಗಳಾದ ಅಭಯ್ ಪ್ರಕಾಶ್, ಗುರುರಾಜ್ ಮತ್ತು ಸತೀಶ್ ತಂಡದಿಂದ 7 ಆರೋಪಿಗಳ ಬಂಧನವಾಗಿದೆ ಎಂದು ತಿಳಿದುಬಂದಿದೆ.

Bajrang Dal Activist Murder Case: ಮೂರು ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ!

ಪ್ರತಿ ಮನೆಯಲ್ಲಿಯೂ ಹರ್ಷನಂತಹ ಮಕ್ಕಳು ಹುಟ್ಟಬೇಕು -ಅಬ್ಬರಿಸಿದ ಹರ್ಷನ ತಾಯಿ ಪದ್ಮ ಈ ಮಧ್ಯೆ, ಹತ್ಯೆಗೀಡಾದ ಹರ್ಷನ ತಾಯಿ ಪದ್ಮ ಅವರು ಶಿವಮೊಗ್ಗದಲ್ಲಿ ಟಿವಿ9 ಜೊತೆ ಮಾತನಾಡುತ್ತಾ, ನನ್ನ ಮಗನ ಕೊಲೆ ಮಾಡಿದವರನ್ನು ತುಂಡುತುಂಡು ಮಾಡಬೇಕು. ಎನ್‌ಕೌಂಟರ್ ಮಾಡಿದ್ರೆ ಸಾಲಲ್ಲ, ತುಂಡುತುಂಡು ಮಾಡಬೇಕು. ಪ್ರತಿ ಮನೆಯಲ್ಲಿಯೂ ಹರ್ಷನಂತಹ ಮಕ್ಕಳು ಹುಟ್ಟಬೇಕು ಎಂದು ಅಬ್ಬರಿಸಿದ್ದಾರೆ. ನಮ್ಮ ಸಮಾಜ ಉಳಿಯಲಿ ಎಂದ ಹರ್ಷ ತಾಯಿ. ನನ್ನ ಮಗನಿಗೆ ಯೋಗಿ ಆದಿತ್ಯ ನಾಥ್​ ಅಂದ್ರೆ ತುಂಬಾ ಇಷ್ಟ. ಬೈಕ್​ನಲ್ಲಿ ಅವರ ಪೋಟೋ ಹಾಕಿಕೊಂಡು ಓಡಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

Harsha Murder Case: ನನ್ನ ಮಗನನ್ನ ಕೊಲೆ ಮಾಡಿದವರನ್ನ ಎನ್​ಕೌಂಟರ್ ಮಾಡಿದ್ರೆ ಸಾಲಲ್ಲ

ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ಹೇಗಾಯ್ತು? ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಕೊಲೆಯ ಕಂಪ್ಲೀಟ್ ಡಿಟೇಲ್ಸ್

Published On - 9:06 am, Tue, 22 February 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ