Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ-ಬೆಂಗಳೂರು ವಿಮಾನಯಾನ ಸೇವೆ ಗುರುವಾರದಿಂದ ಆರಂಭ; ಎಂಬಿ ಪಾಟೀಲ್​​

ವಿಮಾನಯಾನ ಸೇವೆಗಳ ಮೊದಲ ಹೆಜ್ಜೆಯಾಗಿ ಇಂಡಿಗೋ ಸಂಸ್ಥೆಯು ವಿಮಾನವು ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲ ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಬಿವೈ ರಾಘವೇಂದ್ರ ಹಾಗೂ ಸಚಿವರು ಪ್ರಯಾಣಿಸಲಿದ್ದಾರೆ.

ಶಿವಮೊಗ್ಗ-ಬೆಂಗಳೂರು ವಿಮಾನಯಾನ ಸೇವೆ ಗುರುವಾರದಿಂದ ಆರಂಭ; ಎಂಬಿ ಪಾಟೀಲ್​​
ಶಿವಮೊಗ್ಗ ವಿಮಾನ ನಿಲ್ದಾಣ
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 29, 2023 | 2:36 PM

ಬೆಂಗಳೂರು: ಶಿವಮೊಗ್ಗದಲ್ಲಿ (Shivamogga) ರಾಜ್ಯ ಸರಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ (Airport) ವಿಮಾನಯಾನ ಸೇವೆಗಳು ಗುರುವಾರದಿಂದ (ಆ.31) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಎತ್ತರವನ್ನು ತಲುಪಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ (MB Patil) ಹೇಳಿದರು.

ಮಂಗಳವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ವಿಮಾನಯಾನ ಸೇವೆಗಳ ಮೊದಲ ಹೆಜ್ಜೆಯಾಗಿ ಇಂಡಿಗೋ ಸಂಸ್ಥೆಯು ವಿಮಾನವು ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲ ಯಾನದಲ್ಲಿ ಸಚಿವ ಎಂ. ಬಿ ಪಾಟೀಲ್​ ಪ್ರಯಾಣಿಸಲಿದ್ದು, ಜೊತೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳೂ ಇರಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದೊಡನೆಯೇ ವಾಟರ್‍‌ ಸೆಲ್ಯೂಟ್‌ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು” ಎಂದರು.

ಇದು ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣವಾಗಿದ್ದು, ಇದಕ್ಕೆ 450 ಕೋಟಿ ರೂ. ವಿನಿಯೋಗಿಸಲಾಗಿದೆ. ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆ ಎಂಬಲ್ಲಿ 779 ಎಕರೆ ಜಾಗದಲ್ಲಿ ಏರ್‍‌ಪೋರ್ಟ್ ಮೈದಾಳಿದ್ದು, ಇದರಲ್ಲಿ ಏರ್‍‌ಬಸ್‌ ಮಾದರಿಯ ವಿಮಾನಗಳೂ ಬಂದಿಳಿಯುವ ಅನುಕೂಲಗಳನ್ನು ಕಲ್ಪಿಸಲಾಗಿದೆ. ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: Karnataka Airports: ಮೋದಿ ಉದ್ಘಾಟಿಸಿದ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದಲ್ಲಿ ಎಷ್ಟು ಏರ್​ಪೋರ್ಟ್​ಗಳಿವೆ? ಇಲ್ಲಿದೆ ವಿವರ

ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗೋವಾ ಮುಂತಾದ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು. ತಕ್ಷಣಕ್ಕೆ ಬೆಂಗಳೂರಿನಲ್ಲಿ ಈ ಸ್ಥಳಗಳಿಗೆ ಕನೆಕ್ಟಿಂಗ್‌ ವಿಮಾನಗಳು ಲಭ್ಯ ಇರಲಿವೆ. ಜೊತೆಗೆ, ಉಡಾನ್‌ ಯೋಜನೆಯಡಿ ವಿಮಾನಯಾನ ಸೇವೆ ವಿಸ್ತರಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ಮೂಲ ಯೋಜನೆಯಲ್ಲಿ ಈ ಏರ್‍‌ಪೋರ್ಟ್​​​ನಲ್ಲಿ ನೈಟ್‌ ಲ್ಯಾಂಡಿಂಗ್‌ ಸೌಲಭ್ಯ ಇರಲಿಲ್ಲ. ಈಗ ಅದನ್ನು ಪರಿಷ್ಕರಿಸಿ, ಆ ಅನುಕೂಲವನ್ನೂ ನೀಡಲಾಗಿದೆ. 4,340 ಚದರ ಮೀಟರ್ ವಿಸ್ತೀರ್ಣದ ಪ್ರಯಾಣಿಕರ ಟರ್ಮಿನಲ್‌ ಮತ್ತು 3,050 ಮೀಟರ್ ಉದ್ದದ ರನ್‌ವೇಯನ್ನು ಇದು ಒಳಗೊಂಡಿದೆ. ಮುಂದಿನ ಮೂರು ವಾರಗಳ ವಿಮಾನಯಾನ ಟಿಕೆಟ್‌ ಮುಂಗಡವಾಗಿ ಬುಕಿಂಗ್‌ ಆಗಿದ್ದು, ಒಳ್ಳೆಯ ಬೇಡಿಕೆ ವ್ಯಕ್ತವಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:35 pm, Tue, 29 August 23

ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!
ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ಸಚಿವ ಸತೀಶ್ ಜಾರಕಿಹೊಳಿ ಬಾಂಬ್​: ನಮ್ಮ ಮಂತ್ರಿ ಮೇಲೆ ಹನಿಟ್ರ್ಯಾಪ್ ಆಗಿದೆ​
ಸಚಿವ ಸತೀಶ್ ಜಾರಕಿಹೊಳಿ ಬಾಂಬ್​: ನಮ್ಮ ಮಂತ್ರಿ ಮೇಲೆ ಹನಿಟ್ರ್ಯಾಪ್ ಆಗಿದೆ​
ಸಾರ್ವಜನಿಕ ಹಣ ಪೋಲು ಮಾಡುವ ವಿಷಯದಲ್ಲಿ ಕಾಂಗ್ರೆಸ್ ವಿವಿ ಆರಂಭಿಸಿದೆ: ಅಶೋಕ
ಸಾರ್ವಜನಿಕ ಹಣ ಪೋಲು ಮಾಡುವ ವಿಷಯದಲ್ಲಿ ಕಾಂಗ್ರೆಸ್ ವಿವಿ ಆರಂಭಿಸಿದೆ: ಅಶೋಕ
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ಕುಮಾರಸ್ವಾಮಿ ಹಾಸನ ಬಿಟ್ಟು ರಾಮನಗರ ಬಂದಿದ್ದು ಯಾಕೆ? ಶಿವಕುಮಾರ್
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ