ಶಿವಮೊಗ್ಗ: ಕುವೆಂಪು ವಿವಿಯ ವೆಬ್ ಸೈಟ್ ಹ್ಯಾಕ್; ಆ್ಯಂಟಿ ಇಸ್ರೇಲ್ ಪ್ಯಾಲೆಸ್ಟೈನ್​ನ ಜಕಾರ್ತಾ ಮೂಲದಿಂದ ಹ್ಯಾಕ್

| Updated By: Rakesh Nayak Manchi

Updated on: Dec 21, 2023 | 2:25 PM

ಸೈಬರ್ ಅಪರಾಧಿಗಳು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ವೆಬ್​ಸೈಟ್ ಹ್ಯಾಕ್ ಮಾಡಿದ್ದಾರೆ. ಆ್ಯಂಟಿ ಇಸ್ರೇಲ್ ಪ್ಯಾಲೆಸ್ಟೈನ್​ನ ಜಕಾರ್ತಾ ಮೂಲದಿಂದ ಹ್ಯಾಕ್ ಆಗಿದ್ದು, ಕಲಿಂಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಹ್ಯಾಕ್ ಮಾಡಿದೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಕುವೆಂಪು ವಿವಿ ವೆಬ್​ಸೈಟ್ ಹ್ಯಾಕ್ ಆಗಿತ್ತು.

ಶಿವಮೊಗ್ಗ: ಕುವೆಂಪು ವಿವಿಯ ವೆಬ್ ಸೈಟ್ ಹ್ಯಾಕ್; ಆ್ಯಂಟಿ ಇಸ್ರೇಲ್ ಪ್ಯಾಲೆಸ್ಟೈನ್​ನ ಜಕಾರ್ತಾ ಮೂಲದಿಂದ ಹ್ಯಾಕ್
ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ
Follow us on

ಶಿವಮೊಗ್ಗ, ಡಿ.21: ಜಿಲ್ಲೆಯ (Shivamogga) ಭದ್ರವಾತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ (Kuvempu University) ವೆಬ್​​ಸೈಟ್ ಅನ್ನು ಮತ್ತೊಮ್ಮೆ ಹ್ಯಾಕ್ ಮಾಡಲಾಗಿದೆ. ಆ್ಯಂಟಿ ಇಸ್ರೇಲ್ ಪ್ಯಾಲೆಸ್ಟೈನ್​ನ ಜಕಾರ್ತಾ ಮೂಲದಿಂದ ಹ್ಯಾಕ್ ಆಗಿದ್ದು, ಕಲಿಂಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಹ್ಯಾಕ್ ಮಾಡಿದೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಕುವೆಂಪು ವಿವಿ ವೆಬ್​ಸೈಟ್ ಹ್ಯಾಕ್ ಆಗಿತ್ತು.

ಸೇವ್ ಪ್ಯಾಲೆಸ್ಟೈನ್ – ಇಸ್ರೇಲ್ ಡಾಗ್ ಎಂದು ವೆಬ್​ಸೈಟ್​ನಲ್ಲಿ ಉಲ್ಲೇಖಿಸಲಾಗಿದೆ. ಹ್ಯಾಕ್ ಬಳಿಕ ವೆಬ್ ಸೈಟ್ ಸ್ಥಗಿತಗೊಳಿಸಿರುವ ವಿವಿ ಆಡಳಿತ ಮಂಡಳಿ, ತಾಂತ್ರಿಕ ತಂಡದಿಂದ ವೆಬ್​ಸೈಟ್ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ವಿವಿ ಆಡಳಿತ ಮಂಡಳಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದ್ದರೆ ಈ ಲಕ್ಷಣ ಕಂಡುಬರಬಹುದು ಎಚ್ಚರ!

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ