AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಖಾಸಗಿ ಶಾಲಾ ಬಸ್ ಪಲ್ಟಿ, 25 ಕ್ಕೂ ಅಧಿಕ ಮಕ್ಕಳಿಗೆ ಗಾಯ

ಭದ್ರಾವತಿ(Bhadravathi)ತಾಲೂಕಿನ ಬಿಳಕಿ ಗ್ರಾಮದ ಬಳಿ ಖಾಸಗಿ ಶಾಲಾ ಬಸ್ ಪಲ್ಟಿ(Private school bus overturns)ಯಾಗಿ 25 ಕ್ಕೂ ಅಧಿಕ ಮಕ್ಕಳಿಗೆ ಗಾಯವಾದ ಘಟನೆ ನಡೆದಿದೆ. ಗಾಯಾಳು ಮಕ್ಕಳಿಗೆ ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು,

ಶಿವಮೊಗ್ಗ: ಖಾಸಗಿ ಶಾಲಾ ಬಸ್ ಪಲ್ಟಿ, 25 ಕ್ಕೂ ಅಧಿಕ ಮಕ್ಕಳಿಗೆ ಗಾಯ
ಪ್ರಾತಿನಿಧಿಕ ಚಿತ್ರ
Basavaraj Yaraganavi
| Edited By: |

Updated on:Feb 17, 2024 | 4:55 PM

Share

ಶಿವಮೊಗ್ಗ, ಫೆ.17: ಖಾಸಗಿ ಶಾಲಾ ಬಸ್ ಪಲ್ಟಿ(Private school bus overturns)ಯಾಗಿ 25 ಕ್ಕೂ ಅಧಿಕ ಮಕ್ಕಳಿಗೆ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ(Bhadravathi)ತಾಲೂಕಿನ ಬಿಳಕಿ ಗ್ರಾಮದ ಬಳಿ ನಡೆದಿದೆ. ಭದ್ರಾವತಿಯ ಸ್ಫೂರ್ತಿ ಇಂಟರ್ ನ್ಯಾಷನಲ್ ಶಾಲೆಗೆ ಸೇರಿದ ಶಾಲಾ ಬಸ್ ಇದಾಗಿದ್ದು, ಎದುರುಗಡೆಯಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡಲು ಹೋಗಿ ಪಲ್ಟಿಯಾಗಿದೆ. ಗಾಯಾಳು ಮಕ್ಕಳಿಗೆ ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸರಕಾರಿ ಬಸ್‌ನಲ್ಲಿ ತಾಂತ್ರಿಕ ಸಮಸ್ಯೆ; ನಿಯಂತ್ರಣ ತಪ್ಪಿ ಹೊಲದೊಳಗೆ ನುಗ್ಗಿಸಿದ ಚಾಲಕ

ಧಾರವಾಡ: ಧಾರವಾಡದಿಂದ ಬ‌್ಯಾಲ್ಯಾಳ ಗ್ರಾಮಕ್ಕೆ ಹೋಗುತ್ತಿದ್ದ ಸರಕಾರಿ ಬಸ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ನಿಯಂತ್ರಣ ತಪ್ಪಿದ ಬಸ್​ನ್ನು ಚಾಲಕ ಹೊಲಕ್ಕೆ ನುಗ್ಗಿಸಿದ್ದಾನೆ. ಬಸ್​ನ ಶಾಕ್ ಆಬ್ಸರ್ವರ್ ಕತ್ತರಿಸುತ್ತಿದ್ದಂತೆಯೇ ಎಚ್ಚೆತ್ತ ಚಾಲಕ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಲಿದ್ದ ಬಸ್​ನ್ನು ಚಾಲಕನ ಸಮಯ ಪ್ರಜ್ಞೆಯಿಂದ ಹೊಲದೊಳಗೆ ನುಗ್ಗಿಸಿದ್ದ ಹಿನ್ನಲೆ 30 ಜನರ ಪ್ರಾಣ ಉಳಿದಿದೆ. ಈ ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೂಡ್ಸ್​ ವಾಹನ ಡಿಕ್ಕಿ, ಬೈಕ್​ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವು

ಬೆಂಗಳೂರು: ನಗರದ ಬಿಜಿಎಸ್​ ಆಸ್ಪತ್ರೆ ಬಳಿ ಸ್ಕೂಟರ್ ಒಂದಕ್ಕೆ ಟೆಂಪೋ ಟ್ರಾವಲರ್ ಡಿಕ್ಕಿ ಹೊಡದಿದ್ದು, ಸ್ಕೂಟರ್​ನಲ್ಲಿದ್ದ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಮಂಜುಳ (40) ಮೃತ ಮಹಿಳೆ. ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಹಾವೇರಿಯಲ್ಲಿ ಸರ್ಕಾರಿ ಬಸ್ ಪಲ್ಟಿಯಾಗಿ 45 ಮಕ್ಕಳಿಗೆ ಗಾಯ, ನಾಲ್ವರು ಗಂಭೀರ

ಲಾರಿ, ಟಿಟಿ ವಾಹನ ನಡುವೆ ಅಪಘಾತ; ಮೂವರು ಸ್ಥಳದಲ್ಲೇ ಸಾವು

ರಾಮನಗರ: ಚನ್ನಪಟ್ಟಣದ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು ಬಳಿ ಲಾರಿ ಹಾಗೂ ಟಿಟಿ ವಾಹನ ನಡುವೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 6 ಜನರಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾವೇರಿಯಲ್ಲಿ ಮದುವೆ ಮುಗಿಸಿಕೊಂಡು ಕುಟುಂಬ ಸಮೇತ ವಾಪಸ್ ಆಗ್ತಿದ್ದಾಗ ಹಿಂಬದಿಯಿಂದ ಟಿಟಿ ವಾಹನ ಲಾರಿಗೆ ಡಿಕ್ಕಿ ಹೊಡೆದಿದೆ. ಸೋಮಲಿಂಗಪ್ಪ (70), ಶಿವಲಿಂಗಪ್ಪ (66) ಹಾಗೂ ರಾಜೇಶ್ವರಿ ಎಂಬುವವರು ಸೇರಿ ಮೂವರು ಕೊನೆಯುಸಿರೆಳೆದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದರನ್ನು‌‌ ಬೆಂಗಳೂರು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Sat, 17 February 24