ಶಿವಮೊಗ್ಗ: ದೇವಸ್ಥಾನ, ದರ್ಗಾ ಹುಂಡಿ ಹಣ ಎಣಿಕೆ ಮಾಡದಂತೆ ಪ್ರತಿಭಟನೆ, ಕಾರಣ?

| Updated By: ಗಂಗಾಧರ​ ಬ. ಸಾಬೋಜಿ

Updated on: Jan 17, 2024 | 3:04 PM

ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಹಜರತ್ ಸೈಯದ್ ಸಾದತ್ ದರ್ಗಾದ ಹುಂಡಿ ಹಣ ಎಣಿಕೆ ಮಾಡದಂತೆ ಗ್ರಾಮದ ಪಂಚಾಯಿತಿ ಅಧ್ಯಕ್ಷರು, ಕನ್ನಂಗಿ ಗ್ರಾಮ‌‌ ಪಂಚಾಯಿತಿ ಅಧ್ಯಕ್ಷರಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿ ಮಾಡಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಶಿವಮೊಗ್ಗ: ದೇವಸ್ಥಾನ, ದರ್ಗಾ ಹುಂಡಿ ಹಣ ಎಣಿಕೆ ಮಾಡದಂತೆ ಪ್ರತಿಭಟನೆ, ಕಾರಣ?
ಪ್ರತಿಭಟನೆ
Follow us on

ಶಿವಮೊಗ್ಗ, ಜನವರಿ 17: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿರುವ ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಹಜರತ್ ಸೈಯದ್ ಸಾದತ್ ದರ್ಗಾದ ಹುಂಡಿ ಹಣ ಎಣಿಕೆ ಮಾಡದಂತೆ ಗ್ರಾಮದ ಪಂಚಾಯಿತಿ ಅಧ್ಯಕ್ಷರು, ಕನ್ನಂಗಿ ಗ್ರಾಮ‌‌ ಪಂಚಾಯಿತಿ ಅಧ್ಯಕ್ಷರಿಂದ ಪ್ರತಿಭಟನೆ (Protest) ಮಾಡಲಾಗುತ್ತಿದೆ. ದೇವಸ್ಥಾನದ ಬ್ಯಾಂಕ್ ಖಾತೆಯನ್ನು ಕನ್ನಂಗಿ ಗ್ರಾಮೀಣ ಬ್ಯಾಂಕ್​ನಿಂದ ತೀರ್ಥಹಳ್ಳಿ ಬ್ಯಾಂಕ್​ಗೆ ವರ್ಗಾವಣೆ ಮಾಡಲಾಗಿದೆ. ಅದನ್ನು ಪುನಃ ಕನ್ನಂಗಿ ಬ್ಯಾಂಕ್​ಗೆ ವರ್ಗಾವಣೆ ಮಾಡಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಮುಜರಾಯಿ ತಹಶೀಲ್ದಾರ್ ಪ್ರದೀಪ್, ತೀರ್ಥಹಳ್ಳಿ ಡಿವೈಎಸ್​ಪಿ ಭೇಟಿ ನೀಡಿದ್ದು, ಹುಂಡಿ ಹಣ ಎಣಿಕೆಗೆ, ಸರಕಾರಿ ಕೆಲಸ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿ ಭೇಟಿ ನೀಡುವವರೆಗೆ ಹುಂಡಿ ಹಣ ಎಣಿಕೆ ಮಾಡದಂತೆ ಪ್ರತಿಭಟನಾಕಾರರು ಬಿಗಿ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಎಲ್ಲ ಧರ್ಮಗಳ ಹಬ್ಬ ತನ್ನ ಗ್ರಂಥಾಲಯದಲ್ಲಿ ಆಚರಿಸುವ ಮೈಸೂರಿನ ಸಯ್ಯದ್ ಇಶಾಕ್ ಭಾವೈಕ್ಯತೆಯ ಪ್ರತೀಕ!

ದೇವಸ್ಥಾನ ಹಾಗೂ ದರ್ಗಾ ಅಕ್ಕಪಕ್ಕದಲ್ಲಿದ್ದು, ಮುಜರಾಯಿ‌ ಇಲಾಖೆ ವ್ಯಾಪ್ತಿಗೆ ಸೇರಿವೆ. ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ಇಲ್ಲ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಮತ್ತು ಬಸ್ ನಿಲ್ದಾಣ ಕೂಡ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ: ವಿಡಿಯೋ ನೋಡಿ

ಭೂತರಾಯ ಮತ್ತು ಚೌಡಮ್ಮ ದೇವಿಯನ್ನು ದರ್ಗಾದಲ್ಲಿ ಸ್ಥಾಪಿಸಲಾಗಿದೆ. ಸುಮಾರು 400 ಹಿಂದೂಗಳು ಮತ್ತು 100 ಮುಸ್ಲಿಮರ ಮನೆಗಳನ್ನು ಹೊಂದಿರುವ ಹಣಗೆರೆ ಹಳ್ಳಿಯಲ್ಲಿ ಈವರೆಗೆ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ ಎಂಬುದು ವಿಶೇಷ. ಈ ಕ್ಷೇತ್ರ ಶಿವಮೊಗ್ಗದಿಂದ ಸುಮಾರು 38 ಕಿಮೀ ದೂರದಲ್ಲಿದೆ. ಹಿಂದೂ, ಮುಸ್ಲಿಂ ಎರಡೂ ಜನಾಂಗದ ಜನರು ಇಲ್ಲಿಗೆ ಬಂದು ಎರಡೂ ದೇವರಿಗೆ ನಮಸ್ಕರಿಸುತ್ತಾರೆ.

ಮೆಸ್ಕಾಂ ಅಧಿಕಾರಿಗಳಿಂದ ಗುತ್ತಿಗೆದಾರರ ಟೆಂಡರ್​ಗೆ ಕೊಕ್: ಬೃಹತ್ ಪ್ರತಿಭಟನೆ

ಮೆಸ್ಕಾಂ ಅಧಿಕಾರಿಗಳಿಂದ ಗುತ್ತಿಗೆದಾರರ ಟೆಂಡರ್​ ನೀಡದ ಹಿನ್ನೆಲೆ ಗುತ್ತಿಗೆದಾರರಿಂದ ನಗರದ ಎಂ.ಆರ್‌‌.ಎಸ್ ಸರ್ಕಲ್​ನ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗಿದೆ. ಮೆಸ್ಕಾಂ ಅಧಿಕಾರಿಗಳ ನಡೆಗೆ ಗುತ್ತಿಗೆದಾರರು ಘೋಷಣೆ ಕೂಗಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.