Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಧರ್ಮಗಳ ಹಬ್ಬ ತನ್ನ ಗ್ರಂಥಾಲಯದಲ್ಲಿ ಆಚರಿಸುವ ಮೈಸೂರಿನ ಸಯ್ಯದ್ ಇಶಾಕ್ ಭಾವೈಕ್ಯತೆಯ ಪ್ರತೀಕ!

ಎಲ್ಲ ಧರ್ಮಗಳ ಹಬ್ಬ ತನ್ನ ಗ್ರಂಥಾಲಯದಲ್ಲಿ ಆಚರಿಸುವ ಮೈಸೂರಿನ ಸಯ್ಯದ್ ಇಶಾಕ್ ಭಾವೈಕ್ಯತೆಯ ಪ್ರತೀಕ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 15, 2024 | 2:40 PM

ಸಯ್ಯದ್ ಇಶಾಕ್ ಗ್ರಂಥಾಲಯಕ್ಕೆ ಹೋದಾಗ ನಿಮಗೆ ಮೊದಲು ಕಾಣೋದೇ ವಿಶ್ವಮಾನವ ಸಂದೇಶ ಸಾರಿದ ಮತ್ತು ಕನ್ನಡನಾಡಿನ ಹೆಮ್ಮೆ ಕುವೆಂಪು ಅವರ ಫೋಟೋ! ಸಮಾಜಕ್ಕೆ ಮಾರ್ಮಿಕ ಸಂದೇಶ ನೀಡುವ ಕೆಲ ಉಕ್ತಿಗಳನ್ನು ಇಶಾಕ್ ಬರೆದು ಒಳಗಡೆ ಅಂಟಿಸಿದ್ದಾರೆ. ಗ್ರಂಥಾಲಯದ ನಾಮಫಲಕದಲ್ಲಿರುವ ಪಂಚ್ ಲೈನ್ ಗಮನಿಸಿ: ಒಂದು ಗ್ರಂಥಾಲಯ ನೂರು ದೇವಾಲಯಕ್ಕೆ ಸಮ.

ಮೈಸೂರು: ಮೈಸೂರನ್ನು ಸಾಂಸ್ಕೃತಿಕ ಅಂತಲೇ ನಾವೆಲ್ಲ ಗುರುತಿಸುತ್ತೇವೆ, ನಗರ ಇಂಥ ಖ್ಯಾತಿಯನ್ನು ಪಡೆದುಕೊಂಡಿದ್ದರೆ ಅದನ್ನು ಸೂಕ್ತವಾಗಿ ಪ್ರತಿನಿಧಿಸುವರು ರಾಜೀವ್ ನಗರದಲ್ಲಿ ಸಾರ್ವಜನಿಕ ಗ್ರಂಥಾಲಯವೊಂದನ್ನು (public library) ನಡೆಸುವ ಸಯ್ಯದ್ ಇಶಾಕ್ (Syed Ishaq) ಅಂದರೆ ತಪ್ಪಾಗಲಾರದು ಮಾರಾಯ್ರೇ. ಟಿವಿ9 ಮೈಸೂರು ವರದಿಗಾರ ರಾಮ್, ಇಶಾಕ್ ಅವರೊಂದಿಗೆ ಮಾತಾಡಿ ಈ ವರದಿ ಕಳಿಸಿದ್ದಾರೆ. ಜನ ಮತ್ತು ಸಮುದಾಯಗಳ ನಡುವೆ ವಿಷಬೀಜ ಬಿತ್ತುವವರನ್ನು ಬೇರುಸಹಿತ ಕಿತ್ತೊಗೆಯಬೇಕು ಎನ್ನುವ ಇಶಾಕ್ ನಿಜ ಅರ್ಥದಲ್ಲಿ ಭಾವೈಕತೆಯ (communal harmony) ಪ್ರತೀಕವಾಗಿದ್ದಾರೆ. ತಮ್ಮ ಗ್ರಂಥಾಲಯದಲ್ಲಿ ಅವರು ಮಕರ ಸಂಕ್ರಾಂತಿ ಮಾತ್ರವಲ್ಲದೆ ದಸರಾ, ದೀಪಾವಳಿ, ರಂಜಾನ್, ಕ್ರಿಸ್ಮಸ್, ಗುರುನಾನಕ ಜಯಂತಿ-ಎಲ್ಲ ಧರ್ಮಗಳ ಹಬ್ಬಗಳನ್ನು ಆಚರಿಸುತ್ತಾರೆ. ಅವರ ಗ್ರಂಥಾಲಯದಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಪುಸ್ತಕಗಳು ಸಿಗುತ್ತವೆ. ಎಲ್ಲರೂ ಒಂದೇ, ಎಲ್ಲ ಧರ್ಮಗಳು ಸಾರುವ ಸಂದೇಶವೊಂದೇ ಎನ್ನುವ ಇಶಾಕ್ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕೆಲ ಪ್ರಮುಖ ವ್ಯಕ್ತಿಗಳ ಫೋಟೋಗಳನ್ನು ಗ್ರಂಥಾಲಯದಲ್ಲಿ ಹಾಕಿದ್ದಾರೆ. ಇವತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನರಿಗೆ ಹಂಚಲು ಇಶಾಕ್ ಕಬ್ಬು, ಎಳ್ಳುಬೆಲ್ಲ, ಸಕ್ಕರೆ ಅಚ್ಚುಗಳನ್ನು ತಯಾರು ಮಾಡಿಟ್ಟುಕೊಂಡಿರುವುದು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ