AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರುಪಾಲಾಗಿದ್ದ ನಾಲ್ವರ ಶವ ಹುಡುಕಿ ಕೊಟ್ಟ ಮುಳುಗು ತಜ್ಞ: ಮಾತು ಉಳಿಸಿಕೊಂಡ ಈಶ್ವರ್ ಮಲ್ಪೆ

ಶಿವಮೊಗ್ಗದ ಭದ್ರಾವತಿ ಅರಬಿಳಚಿ ಕ್ಯಾಂಪ್‌ನಲ್ಲಿ ನೀರು ಪಾಲಾಗಿದ್ದ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಇದೀಗ ನಾಲ್ಕು ದಿನಗಳ ಶೋಧ ಕಾರ್ಯಾಚರಣೆ ಬಳಿಕ ಪತ್ತೆ ಆಗಿವೆ. ಶವ ಪತ್ತೆ ಮಾಡಿ ಇಲ್ಲಿಂದ ಹೋಗುತ್ತೇನೆ ಎಂದಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆ, ಇದೀಗ ಮೃತದೇಹಗಳನ್ನು ಮತ್ತೆ ಮಾಡುವ ಆ ಮೂಲಕ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ದುಖಃದ ಸಂದರ್ಭದಲ್ಲಿ ಸದ್ಯ ಮೃತದೇಹಗಳು ಪತ್ತೆ ಆಗಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ನೀರುಪಾಲಾಗಿದ್ದ ನಾಲ್ವರ ಶವ ಹುಡುಕಿ ಕೊಟ್ಟ ಮುಳುಗು ತಜ್ಞ: ಮಾತು ಉಳಿಸಿಕೊಂಡ ಈಶ್ವರ್ ಮಲ್ಪೆ
ಭದ್ರಾ ನಾಲೆ, ಈಶ್ವರ್ ಮಲ್ಪೆ
TV9 Web
| Edited By: |

Updated on: Jan 22, 2026 | 4:34 PM

Share

ಶಿವಮೊಗ್ಗ, ಜನವರಿ 22: ಒಂದೇ ಕುಟುಂಬದ ನಾಲ್ವರು ನೀರುಪಾಲು (death) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ನೀರಿನ ರಭಸದಿಂದಾಗಿ ಶೋಧ ಕಾರ್ಯಚರಣೆಗೆ ಅಡ್ಡಿ ಉಂಟಾಗಿತ್ತು. ಆದರೆ ಅದರ ನಡುವೆಯೂ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೃತದೇಹಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮೃತದೇಹಗಳನ್ನು ಹುಡುಕಿ ಕೊಡುತ್ತೇನೆ ಎಂಬ ತಮ್ಮ ಮಾತನ್ನು ಈಶ್ವರ್ ಮಲ್ಪೆ ಉಳಿಸಿಕೊಂಡಿದ್ದಾರೆ. ಸದ್ಯ ಅವರ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​ನ ಭದ್ರಾ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಈಶ್ವರ್ ಮಲ್ಪೆ ಮೃತದೇಹ ಶೋಧ ಕಾರ್ಯಾಚರಣೆ ನಡೆಸಿದ್ದರು. ಭದ್ರಾ ನಾಲೆಯಲ್ಲಿ ನೀರು ಹರಿವು ಜಾಸ್ತಿ ಹಿನ್ನೆಲೆ ಕಾರ್ಯಾಚರಣೆಗೆ ಸಾಕಷ್ಟು ತೊಡಕು ಉಂಟಾಗಿತ್ತು. ಈ ಹಿನ್ನಲೆ ಶವ ಶೋಧ ಕಾರ್ಯಾಚರಣೆ ವಿಳಂಬವಾಗಿತ್ತು. ಕಳೆದ ಮೂರು ದಿನದಲ್ಲಿ ತಾಯಿ ನೀಲಾಬಾಯಿ ಮತ್ತು ರವಿ ಶವ ಪತ್ತೆ ಆಗಿತ್ತು. ಇಂದು ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ಮಗಳು ಶ್ವೇತಾ ಮತ್ತು ಅಳಿಯ ಪರಶುರಾಮ ಮೃತದೇಹಗಳು ಪತ್ತೆ ಆಗಿವೆ.

ನಾನು ಮೊದಲ ದಿನವೇ ಮಾತು ಕೊಟ್ಟಿದ್ದೆ: ಈಶ್ವರ್ ಮಲ್ಪೆ

ಕಾರ್ಯಾಚರಣೆ ಬಳಿಕ ಮಾತನಾಡಿದ ಮುಳುಗು ತಜ್ಞ ಈಶ್ವರ್ ಮಲ್ಪೆ, ನಾನು ಮೊದಲ ದಿನವೇ ಮಾತು ಕೊಟ್ಟಿದ್ದೆ. ನಾಲ್ಕು ಶವ ಪತ್ತೆ ಮಾಡಿ ಇಲ್ಲಿಂದ ಹೋಗುತ್ತೇನೆ ಅಂತ. ಅದೇ ರೀತಿ ಇಂದು ಮತ್ತೆ ಎರಡು ಶವ ಪತ್ತೆ ಮಾಡಿದೆ. ಈಗ ನಾಲ್ಕು ಶವ ಪತ್ತೆ ಮಾಡಿರುವ ಸಮಾಧಾನ ನನಗಿದೆ. ಆದರೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶ್ವೇತಾ ಮತ್ತು ಪರಶುರಾಮ ತಂದೆ-ತಾಯಿ ಮೃತಪಟ್ಟಿದ್ದಾರೆ. ಅವರ ಮಕ್ಕಳು ತಂದೆ-ತಾಯಿ ಇಲ್ಲದೇ ತಬ್ಬಲಿ ಆಗಿದ್ದಾರೆ. ನಿಜಕ್ಕೂ ಈ ದುರ್ಘಟನೆಯಿಂದ ನನಗೆ ಬೇಸರ ಆಗಿದೆ. ಕಾರ್ಯಾಚರಣೆಗೆ ಗ್ರಾಮಸ್ಥರು, ಪೋಲೀಸರು ಮತ್ತು ಎಸ್​ಡಿಆರ್​ಎಫ್ ತಂಡ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಯಾರಿದು ಈಶ್ವರ್ ಮಲ್ಪೆ

ಉಡುಪಿಯ ಈಶ್ವರ್ ಮಲ್ಪೆ ಅನುಭವಿ ಮತ್ತು ಪರಿಣತ ಮುಳುಗು ತಜ್ಞರು. ಈವರೆಗೆ ವಿವಿಧ ಸ್ಥಳಗಳಲ್ಲಿ ನೀರಿನಲ್ಲಿ ಮುಳುಗಿದ ನೂರಾರು ಮೊಬೈಲ್‌ಗಳು ಹಾಗೂ ವಾಹನಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಹೊರತೆಗೆಯುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ವಸ್ತುಗಳು ಮತ್ತು ವಾಹನಗಳ ಶೋಧನೆಯಷ್ಟೇ ಅಲ್ಲದೆ, ನೀರಿಗೆ ಬಿದ್ದ ಅನೇಕ ಜೀವಗಳನ್ನು ರಕ್ಷಿಸಿ ಪುನರ್ಜನ್ಮ ನೀಡಿದ ಗೌರವವೂ ಅವರಿಗೆ ಸಲ್ಲುತ್ತದೆ. ಅಂಕೋಲಾ ಗುಡ್ಡ ಕುಸಿತದ ವೇಳೆ 72 ದಿನ ಅತೀ ದೊಡ್ಡ ಕಾರ್ಯಾಚರಣೆ ಮಾಡಿದ್ದರು. ಗಂಗಾವಳಿ ನದಿಯಲ್ಲಿ ಮುಳುಗಿ ಹೋಗಿದ್ದ ಲಾರಿಯನ್ನು ಪತ್ತೆ ಮಾಡಿದ್ದರು. ಇದೀಹ ಭದ್ರಾ ನಾಲೆಯ ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.