ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ: ಮೊದಲ ಫ್ಲೈಟ್ ಬರಮಾಡಿಕೊಂಡ ರಾಘವೇಂದ್ರ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ವಿಮಾನ ನಿಲ್ದಾಣ ಇಂದು ಹೊಸದೊಂದು ಜಿಗಿತಕ್ಕೆ ಸಾಕ್ಷಿಯಾಯಿತು. ಇಂದಿನಿಂದ 3 ಹೊಸ ಮಾರ್ಗಗಳಲ್ಲಿ (ಶಿವಮೊಗ್ಗ-ಗೋವಾ, ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಹೈದ್ರಾಬಾದ್) ಸ್ಟಾರ್ ಏರ್ ಲೈನ್ಸ್ ನ ವಿಮಾನ ಸಂಚಾರ ಅಧಿಕೃತವಾಗಿ ಆರಂಭಗೊಂಡಿದೆ.

ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ: ಮೊದಲ ಫ್ಲೈಟ್ ಬರಮಾಡಿಕೊಂಡ ರಾಘವೇಂದ್ರ
ಶಿವಮೊಗ್ಗ ಬಂದಿಳಿದ ಸ್ಟಾರ್ ವಿಮಾನ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 21, 2023 | 12:32 PM

ಶಿವಮೊಗ್ಗ (ನ.21): ಶಿವಮೊಗ್ಗ ವಿಮಾನ ನಿಲ್ದಾಣದಿಂದ(Shivamogga Air port) ಇಂಡಿಗೋ ಬಳಿಕ ಇದೀಗ ಸ್ಟಾರ್‌ ಏರ್‌ ಸಂಸ್ಥೆಯಿಂದಲೂ(Star flight) ವಿಮಾನ ಸೇವೆ ಆರಂಭವಾಗಿದೆ. ಶಿವಮೊಗ್ಗದಿಂದ ಗೋವಾ, ಹೈದರಾಬಾದ್(hyderabad) ಹಾಗೂ ತಿರುಪತಿಗೆ ವಾರದಲ್ಲಿ ಸ್ಟಾರ್‌ ಏರ್‌ನಿಂದ ನಾಲ್ಕು ದಿನ ವಿಮಾನ ಹಾರಾಟ ಇಂದಿನಿಂದಲೇ(ನವೆಂಬರ್ 22) ಆರಂಭವಾಗಿದೆ. ಶಿವಮೊಗ್ಗ-ಗೋವಾ, ಹೈದರಾಬಾದ್‌ ಮತ್ತು ತಿರುಪತಿ(tirupati) ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯ ಇರುತ್ತದೆ. ಅದರಂತೆ ಇಂದು ಹೈದರಾಬಾದ್​ನಿಂದ ಸ್ಟಾರ್ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಸಂಸದ ಬಿ.ವೈ ರಾಘವೇಂದ್ರ ಅವರು ಬರಮಾಡಿಕೊಂಡರು.

ಗೋವಾ, ಹೈದರಾಬಾದ್, ಹಾಗೂ ತಿರುಪತಿಗೆ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂಸದ ರಾಘವೇಂದ್ರ. ಶಿವಮೊಗ್ಗದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಂದು ವಿಮಾನ ಸಂಸ್ಥೆ ಸೇರ್ಪಡೆಯಾಗಿದೆ. ತಿರುಪತಿ, ಹೈದರಾಬಾದ್, ಗೋವಾಗೆ ಸಂಚರಿಸಲು ಉಡಾನ್ ಯೋಜನೆಯಡಿ ಈ ವಿಮಾನ ಹಾರಾಟ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Shimoga Recruitment 2023: ಸ್ಟಾರ್ ಏರ್ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶಗಳನ್ನು ನೀಡುತ್ತಿದೆ; ನವೆಂಬರ್ 6 ರಂದು ವಾಕ್-ಇನ್ ಸಂದರ್ಶನ

ಇಂದು ಒಂದೇ ದಿನ 400 ಜನ ಈ ಹೊಸ ವಿಮಾನದಲ್ಲಿ ಸಂಚರಿಸುತ್ತಿದ್ದಾರೆ. ಕೈಗಾರಿಕೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಈ ಏರ್ ಪೋರ್ಟ್ ಪೂರಕವಾಗಿದೆ. ಸ್ಪೈಸ್ ಜೆಟ್ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ಶಿವಮೊಗ್ಗಕ್ಕೆ ಬರಲು ಉತ್ಸುಕತೆ ತೋರಿವೆ. ಇನ್ನು ಏರ್ ಪೋರ್ಟ್ ನಲ್ಲಿ ಮಂಜು ಕವಿದ ವಾತಾವರಣ ತಿಳಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ತೊಂದರೆಗಳಾಗದಂತೆ ಕ್ರಮ ವಹಿಸಲಾಗಿದೆ ಎಂದರು.

ಶಿವಮೊಗ್ಗ ಏರ್ ಪೋರ್ಟ್ ಮತ್ತಷ್ಟು ಅಭಿವೃದ್ಧಿ ಆಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಲಾಗಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕೂಡ ಡಿಸೆಂಬರ್ ವೇಳೆಗೆ ಮುಗಿಯಲಿದೆ. ಕಡಿಮೆ ಖರ್ಚಿನಲ್ಲಿ ಸುಂದರ ಏರ್ ಪೋರ್ಟ್ ನಿರ್ಮಿಸಿರುವುದು ಮಲೆನಾಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈಗಾಗಲೇ ಶಿವಮೊಗ್ಗ-ಬೆಂಗಳೂರು ನಡುವೆ ಇಂಡಿಗೋ ವಿಮಾನ ಸಂಚರಿಸುತ್ತಿದೆ. ಇದೀಗ ಸ್ಟಾರ್ ಏರ್ ಲೈನ್ಸ್ ವಿಮಾನಗಳು ಶಿವಮೊಗ್ಗದಿಂದ ಗೋವಾ, ಹೈದರಾಬಾದ್, ತಿರುಪತಿಗೆ ಹಾರಾಟ ನಡೆಸಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Tue, 21 November 23